Tuesday, November 26, 2024
ಸುದ್ದಿ

ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಪತ್ತೆಯಾದ ಪುರಾತನ ಕಾಲದ ಚಿನ್ನಾಭರಣ – ಕಹಳೆ ನ್ಯೂಸ್

ಮಡಿಕೇರಿ : ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪುರಾತನ ಚಿನ್ನಾಭರಣ ಮತ್ತು ನಿಧಿ ಸಿಕ್ಕಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರದ ಅಮ್ಮತಿ ಸಮೀಪದಲ್ಲಿನ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ನಡೆದಿದೆ.

ಕಾಫಿ ತೋಟದ ನಡುವೆ ಇರುವ ದೇವಾಲಯದ ಆವರಣದಲ್ಲಿ ಕಾರ್ಮಿಕರು ಕೆಲಸ ಮಾಡುವ ವೇಳೆ ಪುರಾತನ ಚಿನ್ನಾಭರಣ ಮತ್ತು ನಿಧಿ ದೊರೆತಿದ್ದು, ನಿಯಮಾನುಸಾರ ಸರ್ಕಾರಕ್ಕೆ ಒಪ್ಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೋಟದಲ್ಲಿ ಪುರಾತನ ಕಾಲದ ಈಶ್ವರ ದೇವಸ್ಥಾನದ ಬಳಿ ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭ ಭೂಮಿಯ ಅಡಿಯಲ್ಲಿ ಪ್ರಾಚೀನ ಕಾಲದ ಕೆಲ ವಸ್ತುಗಳು ಪತ್ತೆಯಾಗಿವೆ. ಅದರೊಳಗೆ ಚಿನ್ನದ ಆಭರಣಗಳು, ಹಳೆಯ ಕಾಲದ ಉಂಗುರ, ಖಡ್ಗ ಸೇರಿದಂತೆ ಪ್ರಾಚೀನ ಕಾಲದ ಆಭರಣಗಳು ಪತ್ತೆಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನಾ ಸ್ಥಳಕ್ಕೆ ಸಿದ್ದಾಪುರ ಪೆÇಲೀಸರು ಹಾಗೂ ತಹಶೀಲ್ದಾರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ತೆಯಾದ ಆಭರಣಗಳನ್ನು ವಿರಾಜಪೇಟೆ ತಹಶೀಲ್ದಾರ್ ವಶಕ್ಕೆ ನೀಡಲಾಗಿದ್ದು, ಪ್ರಾಚ್ಯವಸ್ತು ಇಲಾಖೆಗೆ ನೀಡಿ ಸಂಶೋಧನೆಯ ಬಳಿಕ ಇದು ಎಷ್ಟು ವರ್ಷಗಳ ಹಿಂದಿನ ಆಭರಣಗಳೆಂಬುದು ತಿಳಿದುಬರಲಿದೆ.