ನ.14 ರಿಂದ ನ.20ರವರೆಗೆ ಮೂಡುಬಿದಿರೆ ಎಂಸಿಎಸ್ ಬ್ಯಾಂಕಿನ ಸಹಕಾರ ಸಪ್ತ ಸಂಧ್ಯಾ : ಅಭಯಚಂದ್ರರಿಗೆ ಕಲ್ಪವೃಕ್ಷ’, ಕೆ. ಶ್ರೀಪತಿ ಭಟ್ ಗೆ ‘ಸಮಗ್ರ ಸಾಧಕ’ ಪ್ರಶಸ್ತಿ – ಕಹಳೆ ನ್ಯೂಸ್
ಮೂಡುಬಿದಿರೆ : ಅಖಿಲ ಭಾರತ 70ನೇ ಸಹಕಾರ ಸಪ್ತಾಹದ ಹಿನ್ನೆಲೆಯಲ್ಲಿ ಶತಮಾನದ ಹಿನ್ನೆಲೆಯಿರುವ ಮೂಡುಬಿದಿರೆ ಕೋ ಆಪರೇಟಿವ್ ಸರ್ವೀಸ್ ಸೊಸೈಟಿ ಲಿ. ವತಿಯಿಂದ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ, ಸಾಂಸ್ಕೃತಿಕ ವೈಭವ, ಕಲ್ಪವೃಕ್ಷ , ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ.14ರಿಂದ 20ರ ವರೆಗೆ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಹಕಾರಿ ರತ್ನ ಎಂ. ಬಾಹುಬಲಿ ಪ್ರಸಾದ್ ತಿಳಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನ.14ರ ಸಂಜೆ 5.30ಕ್ಕೆ ಸಪ್ತಸಂಧ್ಯಾ ಚಿಂತನ ಸರಣಿ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ಧಾರೆ.
ಶ್ರೀ ಜೈನ ಮಠದ ಭಟ್ಟಾರಕ ಶ್ರೀಗಳವರ ಆಶೀರ್ವಚನ, ಕರ್ನಾಟಕ ಬ್ಯಾಂಕಿನ ನಿವೃತ್ತ ಜಿ.ಎಂ. ಚಂದ್ರ ಶೇಖರ ರಾವ್ , ಚೌಟರ ಅರಮನೆಯ ಕುಲದೀಪ್ ಎಂ, ಉಪಸ್ಥಿತಿಯಲ್ಲಿ ಉದ್ಯಮಿ ಕೆ. ಶ್ರೀಪತಿಭಟ್ ಅವರಿಗೆ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ.ಪ್ರಭಾತ್ ಬಲ್ನಾಡು ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಬಳಿಕ ನೃತ್ಯ ಸಂಗೀತ ಕಾರ್ಯಕ್ರಮವಿದೆ.
ನ.15ರಂದು ರೈತರ ಸಂಕಷ್ಟ ಮತ್ತು ಪರಿಹಾರ ಕುರಿತು ಎಸ್.ಕೆ.ಡಿ.ಆರ್.ಡಿ.ಪಿಯ ಡಾ. ಎಲ್ ಮಂಜುನಾಥ್ ಅವರಿಂದ ದಿಕ್ಸೂಚಿ ಭಾಷಣ, ವಿಜ್ಞಾನಿ ಡಾ.ರವಿರಾಜ್ ಶೆಟ್ಟಿ ಜಿ, ಮೂಡುಬಿದಿರೆ ತಾಲೂಕು ಕ.ಸಾ.ಪ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದು, ರೆ. ಫಾ ವಿನ್ಸೆಂಟ್ ಡಿ.ಸೋಜಾ ಮಂಗಳೂರು ಆಶೀರ್ವನ ನೀಡಲಿದ್ದಾರೆ. ಬಳಿಕ ನಾದ ,ನೃತ್ಯ ವೈಭವವಿದೆ.
ನ16 ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಆದ್ಯಾ ಕಮ್ಯುನಿಕೇಶನ್ನ ಚೆಂಗಪ್ಪ ಅವರಿಂದ ಸಹಕಾರ ಸಂಸ್ಥೆಗಳಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಕೆ ಕುರಿತ ದಿಕ್ಸೂಚಿ ಭಾಷಣವಿದೆ. ಮಹಾವೀರ ಕಾಲೇಜಿನ ಪ್ರಾಚಾರ್ಯ ಪೆÇ್ರ. ಎಂ. ರಮೇಶ ಭಟ್, ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಚಾರ್ಯ, ಸದಾಕತ್ ಅವರು ಮುಖ್ಯ ಅತಿಥಿಗಳಾಗಿದ್ದಾರೆ. ಬಳಿಕ ಸುಗಮ ಸಂಗೀತ ಕಾರ್ಯಕ್ರಮವಿದೆ.
ನ.17 ನ್ಯಾಯವಾದಿ ಮನೋಜ್ ಶೆಣೈ ಅಧ್ಯಕ್ಷತೆಯಲ್ಲಿ ಮಂಗಳೂರಿನ ಹಿರಿಯ ನ್ಯಾಯವಾದಿ ಜಿ.ಕೆ. ಪರಮೇಶ್ವರ ಜೋಯಿಸ್ ಅವರಿಂದ ಸಹಕಾರ ಮತ್ತು ವಿವಿಧ ಕಾನೂನುಗಳು ಕುರಿತ ದಿಕ್ಸೂಚಿ ಭಾಷಣವಿದೆ. ಸಹಕಾರಿ ತರನಬೇತಿ ಸಂಸ್ಥೆಯ ಪ್ರಾಚಾರ್ಯ ಡಾ.ಎಂ. ವಿಶ್ವೇಶ್ವರಯ್ಯ, ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಹೆಚ್. ಎನ್. ರಮೇಶ್, ಸಿ.ಎ. ಚಂದ್ರಶೇಖರ್ ಮಂಗಳೂರು ಅವರು ಮುಖ್ಯ ಅತಿಥಿಗಳಾಗಿದ್ದಾರೆ. ಬಳಿಕ ಕುದ್ರೋಳಿ ಗಣೇಶ್ ಅವರ ಜಾದೂ ವಿಸ್ಮಯ ಕಾರ್ಯಕ್ರಮವಿದೆ.
ಸಂಸ್ಥಾಪಕರ ದಿನಾಚರಣೆ, ಕಲ್ಪವೃಕ್ಷ ಪ್ರಶಸ್ತಿ ಪ್ರದಾನ: ನ18ರಂದು ಫಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಬ್ಯಾಂಕಿನ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ಧಾರೆ. ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅವರಿಗೆ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ. ಎಂ. ಮೋಹನ ಆಳ್ವ ಅಭಿನಂದನಾ ಮಾತುಗಳನ್ನಾಡಲಿದ್ಧಾರೆ. ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಉಮೇಶ್ ಮುಖ್ಯ ಅತಿಥಿಗಳಾಗಿದ್ದು ಬಳಿಕ ನೃತ್ಯ ವೈಭವ ಕಾರ್ಯಕ್ರಮವಿದೆ.