Recent Posts

Sunday, January 19, 2025
ಸುದ್ದಿ

ಸ್ವಗ್ರಾಮದ ತಮ್ಮ ಶಾಲೆಯಲ್ಲಿನ ಮಣ್ಣು ಸ್ಪರ್ಶಿಸಿ ಭಾವುಕರಾದ ಪ್ರಧಾನಿ.

ವಾರಣಾಸಿ : ತಾವು ಚಿಕ್ಕವರಿದ್ದಾಗ ಓದಿದ್ದ ಪಾಠಶಾಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು. ಶಾಲೆಗೆ ಕಾಲ್ನಡಿಗೆಯಲ್ಲಿ ತೆರಳಿದ ಮೋದಿ, ಶಾಲೆಯ ಆವರಣದಲ್ಲಿನ ಮಣ್ಣನ್ನು ಸ್ಪರ್ಶಿಸಿದರು. ತಾವು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವೆಂದರೆ, ಆ ಪಾಠಗಳನ್ನು ಈ ಮಣ್ಣಿನಲ್ಲೇ ಕಲಿತೆ ಎಂದು ಹೇಳಿದರು.
2014 ರ ನಂತರ ಮೊದಲ ಬಾರಿಗೆ ಪ್ರಧಾನಿ ಹುದ್ದೆಯಲ್ಲಿ ತಮ್ಮ ಸ್ವಗ್ರಾಮವಾದ ವಾದ್ ನಗರ್ ಗೆ ತೆರಳಿದ ಮೋದಿಯವರಿಗೆ ದಾರಿಯುದ್ದಕ್ಕೂ ಜನರು ಸಂಭ್ರಮದಿಂದ ಸ್ವಾಗತಿಸಿದರು. ತಮ್ಮ ನಡುವೆ ಓಡಾಡಿದ ಮಗು ಇಂದು ಪ್ರಧಾನಿಯಾಗಿ ತಮ್ಮ ಗ್ರಾಮಕ್ಕೆ ಆಗಮಿಸಿದ್ದು ಅಲ್ಲಿನ ಜನರಿಗೆ ವಿಶೇಷ ಸಂಭ್ರಮದ ಕ್ಷಣವಾಗಿತ್ತು.
ಬರೇಲಿಯಲ್ಲಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದರ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದ ಮೋದಿ, ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡಿದರು. ಭದ್ರತಾ ಸಿಬ್ಬಂದಿಯನ್ನು ಅಲ್ಲೇ ಇರುವಂತೆ ಹೇಳಿ ತಮ್ಮ ಎಸ್.ಯು.ವಿ ವಾಹನದಿಂದ ಕೆಳಗಿಳಿದು ನೇರವಾಗಿ ಶಾಲೆಯವರೆಗೂ ಕಾಲ್ನಡಿಗೆಯಲ್ಲಿ ಹೋದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬರನ್ನು ಮಾತನಾಡಿಸಿದರು. ನಾನು ನನ್ನ ಪ್ರಯಾಣವನ್ನು ವಾದ್ ನಗರದಿಂದ ಆರಂಭಿಸಿದ್ದೆ. ಈಗ ವಾರಣಾಸಿ ತಲುಪಿದ್ದೇನೆ. ವಾದ್ ನಗರ್, ವಾರಣಾಸಿ ಎರಡೂ ಪವಿತ್ರ ಶಿವನ ಪ್ರದೇಶಗಳೇ. ಈ ಶಿವ ತನಗೆ ದೊಡ್ಡ ಶಕ್ತಿ ನೀಡಿದ್ದಾನೆ. ಈ ಮಣ್ಣಿನಿಂದ ನಾನು ಪಡೆದ ಅತಿ ದೊಡ್ಡ ಉಡುಗೊರೆ ಇದೇ ಎಂದರು.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response