Recent Posts

Sunday, January 19, 2025
ಸುದ್ದಿ

ಮಡಿಕೇರಿ ದಸರಾ ವೈಭವ, ಹಲವು ವಿಶೇಷತೆಗಳ ಕೇಂದ್ರ – ಕಹಳೆ ನ್ಯೂಸ್

ಮಡಿಕೇರಿ: ಮಡಿಕೇರಿ ದಸರಾ ಮೈಸೂರು ದಸರಾದಷ್ಟೆ ಪ್ರಸಿದ್ದಿ ಪಡೆದಿದ್ದು ಮಡಿಕೇರಿ ದಸರಾವು ಹಲವು ವಿಶೇಷತೆಗಳ ಕೇಂದ್ರವಾಗಿದೆ. ಮಡಿಕೇರಿ ದಸರಾದಲ್ಲಿ ಏನೆಲ್ಲಾ ಇರುತ್ತೆ ಎಂಬುವುದನ್ನು ಹೇಳುತ್ತೆ ಈ ಸ್ಟೋರಿ.

ಮಡಿಕೇರಿ ದಸರಾ ಅಂದ್ರೆ ಇಡೀ ಕೊಡಗು ಜಿಲ್ಲೆಯೆ ಸಂಭ್ರಮದಲ್ಲಿ ಮಿಂದೇಳುತ್ತೆ. ಕರಗ ಕುಣಿತ, ಪೂಜೆ ಪುನಸ್ಕಾರ, ವೈಭವದ ಮೆರವಣಿಗೆ ಎಲ್ಲರನ್ನು ರಂಜಿಸುತ್ತೆ. ಈ ಮಡಿಕೇರಿ ದಸರಾ ಶುರುವಾಗಲು ಸಣ್ಣ ಇತಿಹಾಸವಿದೆ. ಹಿಂದೆ ಮಡಿಕೇರಿ ಜನರು ರೋಗದಿಂದ ಬಳಲುತ್ತಿದ್ದಾರೆ ಎಂದು ಜಾನಪದ ಕಥೆಯು ಹೇಳುತ್ತದೆ. ಮಡಿಕೇರಿ ರಾಜನು ಮಾರಿಯಮ್ಮ ಉತ್ಸವವನ್ನು ಪ್ರಾರಂಭಿಸಲು ನಿರ್ಧರಿಸ್ತಾನೆ. ನಂತರ, ಮಾರಿಯಮ್ಮ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಲಾಯ ಅಮಾವಾಸ್ಯೆಯ ನಂತರ ಈ ಹಬ್ಬವು ಪ್ರಾರಂಭವಾಗುತ್ತದೆ. ದಸರಾವು ನಾಲ್ಕು ಕರಗಗಳೊಂದಿಗೆ ಪ್ರಾರಂಭವಾಗುತ್ತದೆ. ಪಟ್ಟಣದಲ್ಲಿರುವ ದಂಡಿನಾ ಮಾರಿಯಮ್ಮ, ಕಾಂಚಿ ಕಾಮಕ್ಷಮ್ಮ, ಕುಂದರುಮೊಟ್ಟೆ ಶ್ರೀ ಚೌತಿ ಮಾರಿಯಮ್ಮ ಮತ್ತು ಕೋಟೆ ಮಾರಿಯಮ್ಮನ ಗುಡಿಗಳಿದ್ದು ಈ ದೇವಾಲಯದಿಂದ ಒಂದೊಂದು ಕರಗವನ್ನು ಹೊತ್ತು ತರಲಾಗುತ್ತೆ. ಈ ನಾಲ್ಕು ಕರಗಗಳು ಪಟ್ಟಣದ “ಶಕ್ತಿ ದೇವತೆಗಳಾಗಿವೆ.

ನವರಾತ್ರಿಯ ಹತ್ತು ದಿನಗಳಲ್ಲಿ ಮಡಿಕೇರಿಯು ಬಲು ಸುಂದರವಾಗಿರುತ್ತೆ. ಕರಗ ಅಂದರೆ ಕತ್ತರಿಸಿದ ತಲೆಯ ಮೇಲೆ, ಬಟ್ಟೆ, ಅಕ್ಕಿ, ೯ ವಿಧದ ಧಾನ್ಯಗಳು, ಕಲಶದಿಂದ ಅಲಂಕೃತಗೊಂಡಿರುತ್ತದೆ. ಇದನ್ನು ಮಡಿಕೇರಿಯಲ್ಲಿ ಮನೆಮನೆಗಳಲ್ಲಿ ಇಡಲಾಗುತ್ತೆ.

ಕರಗ ನೃತ್ಯವು ನವರಾತ್ರಿ ಮೊದಲ ದಿನದಂದು ಪ್ರಾರಂಭವಾಗುತ್ತೆ. ಕರಗವನ್ನು ಹೊತ್ತುಕೊಂಡು ಪೂಜೆಯನ್ನು ಮಾಡಿ, ಅಲಂಕೃತಗೊಳಿಸಿ ತಾಳಕ್ಕೆ ತಕ್ಕ ಕುಣಿಯಲಾಗುತ್ತೆ ಎಂಬುವುದು ವಿಶೇಷ. ಇನ್ನೂರು ವರ್ಷಗಳ ಹಿಂದೆ ಶುರುವಾದ ಈ ಮಡಿಕೇರಿ ದಸರಾ ಬಳಿಕ ಒಂಬತ್ತು ದಿನಗಳ ಕಾಲ ನಗರ ಪ್ರದಷ್ಕಿಣೆ ಮಾಡಿ ಪೂಜೆ ಸ್ವೀಕರಿಸುತ್ತದೆ. .ದಸರೆಯ ದಿನದಂದು ಬನ್ನಿ ಮಂಟಪಕ್ಕೆ ಥೆರಳಿ ಬನ್ನಿ ಕಡಿಯುವುದರರೊಂದಿಗೆ ಕರಗ ಉತ್ಸವ ಮುಕ್ತಾಯಗೊಳ್ಳುವುದು. ದಸರೆಯ ದಿನ ರಾತ್ರಿ ನಡೆಯುವ ದಶ ಮಂಟಪಗಳ ಮೆರವಣಿಗೆಯಂತೂ ದೇವ ಲೊಕವನ್ನೇ ಧರೆಗಿಳಿಸಿದಂತೆ ಭಾಸವಾಗುವುದು.

ಪ್ರತಿ ಮಂಟಪವು ದೇವತೆಗಳಿಂದ ರಕ್ಕಸರನ್ನು ಸಂಹರಿಸುವ ಕಲಾಕೃತಿಯನ್ನು ಹೊಂದಿರುತ್ತವೆ. ಹಾಗೇ ಪುರಾಣಗಳ ಕಥೆ ಆಧರಿತ ಸ್ತಬ್ದ ಚಿತ್ರಗಳು, ಮತ್ತು ಬೆಳಕಿನ ವಿಶೇಷ ಚೌಕಟ್ಟಿನೊಳಗೆ ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಇನ್ನು ಪಟಾಕಿಗಳ ಶಬ್ದ ಮತ್ತಷ್ಟು ಮೆರಗು ನೀಡುತ್ತೆ. ಒಟ್ಟಾಗಿ ಮಡಿಕೇರಿ ದಸಾರಾಗೆ ಲಕ್ಷಾಂತರ ಮಂದಿ ಆಗಮಿಸಿ ಆನಂದಗೊಳ್ಳುತ್ತಾರೆ.