ಬಂಟ್ವಾಳ : ಪೆರಾಜೆ ಯುವ ವೇದಿಕೆಯ ವತಿಯಿಂದ 4ನೇ ವರ್ಷದ ದೀಪಾವಳಿ ಆಚರಣೆಯನ್ನು ವಿಶಾಲಾಕ್ಷಿ ಕೃಷ್ಣಾನಂದ ಜೋಗಿಬೆಟ್ಟು ಇವರ ಮನೆಯಲ್ಲಿಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ಹಣತೆಗಳನ್ನು ಬೆಳಗಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜರಾಮ್ ಭಟ್ ಕಡೂರು ಅವರು ದೀಪಾವಳಿಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಅಧ್ಯಕ್ಷರಾದ ಯತೀರಾಜ್ ಪೆರಾಜೆ, ಗಣೇಶೋತ್ಸವದ ಸ್ಥಾಪಕಾಧ್ಯಕ್ಷರಾದ ಹರೀಶ್ ರೈ ಪಾಣೂರು, ಸುಧಾಕರ್ ಪೆರಾಜೆ, ಬಾಲಕೃಷ್ಣ ಮಿತ್ತ ಪೆರಾಜೆ, ಬೊಮ್ಮನ ಗೌಡ, ನಾರಾಯಣ ಗೌಡ , ವಿಶ್ವನಾಥ್ ಪೂಜಾರಿ, ದಿನೇಶ್ ಪೂಜಾರಿ ಜೋಗಿಬೆಟ್ಟು , ದಿವಾಕರ ಶಾಂತಿಲ , ವರಮಹಾಲಕ್ಷ್ಮೀ ಪೂಜಾ ಸಮಿತಿಯ ಕಾರ್ಯದರ್ಶಿ ರಾಜೀವಿ ಜಯಾನಂದ್ ಜೋಗಿಬೆಟ್ಟು, ಸವಿತಾ, ಶ್ರೀ ದೇವಿ ಕುಣಿತ ಭಜನ ಮಂಡಳಿ ಪೆರಾಜೆಯ ಮಕ್ಕಳು ಹಾಗೂ ಯುವ ವೇದಿಕೆಯ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಎಲ್ಲರಿಗೂ ಸಿಹಿ ಹಂಚಿ, ಎಲ್ಲಾ ಕಾರ್ಯಕರ್ತರು ಹಾಗೂ ಊರಿನವರು ಸೇರಿ ಪಟಾಕಿ ಸಿಡಿಸಿ ದೀಪಾವಳಿಯನ್ನ ಆಚರಿಸಿದರು.