Recent Posts

Monday, January 20, 2025
ಸುದ್ದಿ

ದಾವಣಗೆರೆಯಲ್ಲಿ ನಡೆದ ಮಹಿಳಾ ಚೆಸ್ ಸ್ಪರ್ಧೆಯಲ್ಲಿ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಯಶಸ್ವಿಗೆ ಪ್ರಥಮ ಸ್ಥಾನ – ಕಹಳೆ ನ್ಯೂಸ್

ಕಲ್ಲಡ್ಕ : ದಾವಣಗೆರೆಯಲ್ಲಿ ನಡೆದ ಮಹಿಳಾ ಚೆಸ್ ಸ್ಪರ್ಧೆಯಲ್ಲಿ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಯಶಸ್ವಿ (ಅಂತಿಮ ಬಿ.ಸಿ.ಎ) ಇವರು ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಪ್ರಶಸ್ತಿ ಪತ್ರವನ್ನು ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಅತಿಥಿಗಳಾಗಿ ಆಗಮಿಸಿದ ಬಂಟ್ವಾಳ ಗ್ರಾಮಾಂತರ ಆರಕ್ಷಕ ಠಾಣೆಯ ಉಪನಿರೀಕ್ಷಕರಾಗಿರುವ ಶ್ರೀ ಮೂರ್ತಿ ಇವರು ವಿದ್ಯಾರ್ಥಿನಿಯಾದ ಕು| ಯಶಸ್ವಿ ಇವರಿಗೆ ಪ್ರಶಸ್ತಿ ಪತ್ರ ಹಾಗೂ ಟ್ರೋಫಿಯನ್ನು ಕೊಟ್ಟು ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನಷ್ಟು ಪ್ರಶಸ್ತಿ, ಗೌರವಗಳು ನಿಮ್ಮ ಮುಡಿಗೇರಲಿ ಎಂದು ಶುಭಹಾರೈಸಿ, ಅಭಿನಂದಿಸಿದರು. ಪ್ರಾಂಶುಪಾಲ ಕೃಷ್ಣಪ್ರಸಾದ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು