Recent Posts

Sunday, January 19, 2025
ಸುದ್ದಿ

ಬೆಳ್ತಂಗಡಿ ; ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಭಾಷಣ, ಫೇಕ್ ನ್ಯೂಸ್ ಮಾಡಿದರೆ ಪ್ರಕರಣ ದಾಖಲು ; ಎಸ್ಪಿ ರಿಷ್ಯಂತ್ – ಕಹಳೆ ನ್ಯೂಸ್

ಬೆಳ್ತಂಗಡಿ ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚುತ್ತಿರುವ ಫೇಕ್ ನ್ಯೂಸ್, ಪ್ರಚೋದನಾಕಾರಿ ಭಾಷಣಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಕೋಮು ಪ್ರಚೋದನೆ ಹೇಳಿಕೆ ಭಾಷಣ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವ ಭಾಷಣ, ಕಾಮೆಂಟ್ ಹಾಕಿದ್ರೆ ಸುಮೋಟೋ ಕೇಸ್ ದಾಖಲಿಸುವುದಾಗಿ ದ.ಜಿ.ಎಸ್ಪಿ ರಿಷ್ಯಂತ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಿಷ್ಯಂತ್‌ಯವರು, ಇನ್ನು ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಯಾರೇ ಪ್ರಚೋದನಾಕಾರಿ ಭಾಷಣ, ಕಾಮೆಂಟ್ ಹಾಕಿದ್ರೆ ಸುಮೋಟೋ ಕೇಸ್ ಹಾಕ್ತೇವೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡಿದ್ರೆ ಗೂಂಡಾ ಆಕ್ಟ್ ನಡಿ ಕೇಸ್ ಮತ್ತು ಗಡಿಪಾರು ಮಾಡ್ತೇವೆ. ಕೆಲವರು ತಮಾಷೆಗೆ ಮಾಡಿದೆ ಅಂತಾರೆ, ಅಂತವರು ಅವರಿಂದ ಅವರಿಗೆ ಮೆಸೇಜ್ ಕಳುಹಿಸಲಿ ಸಾಮಾಜಿಕ ಜಾಲ ತಾಣದಲ್ಲಿ ಕಾಮೆಂಟ್ ಮಾಡಬಾರದು ಎಂದು ಎಚ್ಚರಿಸಿದರು.

ಸಾಮಾಜಿಕ ಜಾಲ ತಾಣದಲ್ಲಿ ಬರೆಯುವವರು ಸರಿಯಾಗಿ ಯೋಚಿಸಿ ಬರೆಯಬೇಕು. ಗಣ್ಯ ವ್ಯಕ್ತಿ, ಚಿಕ್ಕ ವ್ಯಕ್ತಿ ಅಂತ ಏನಿಲ್ಲ, ಎಲ್ಲರಿಗೂ ಒಂದೇ ನಿಯಮ. ಅದರ ಪ್ರಕಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿಯವರು ಎಚ್ಚರಿಕೆ ನೀಡಿದ್ದಾರೆ.