Recent Posts

Monday, January 20, 2025
ಸುದ್ದಿ

Big Breaking : ಕುಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಉಪವಾಸ ; ಗೋಸಂರಕ್ಷಣೆಗೆ ಅಡ್ಡಿಉಂಟು ಮಾಡಿದವರ ವಿರುದ್ಧ ನೀರಾಹಾರ ಸಮರ – ಕಹಳೆ ನ್ಯೂಸ್

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಮಠದ ನಡುವಿನ ವಿವಾದ ತಾರಕಕ್ಕೇರಿದ್ದು, ಕುಕ್ಕೆ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಉಪವಾಸ ಕೂರುವ ಮೂಲಕ ಪರಿಸ್ಥಿತಿ ಗಂಭೀರತೆ ಪಡೆದುಕೊಂಡಿದೆ.

ದೇವಸ್ಥಾನ ಆಡಳಿತ ಮಂಡಳಿ ವಿರುದ್ದ ಸ್ವಾಮೀಜಿ ಅಸಮಧಾನ ವ್ಯಕ್ತಪಡಿಸಿದ್ದು, ಆಡಳಿತ ಮಂಡಳಿ ಕ್ರಮದ ವಿರುದ್ದ ಸ್ವಾಮೀಜಿ ಉಪವಾಸ ಆರಂಭಿಸಿದ್ದಾರೆ. ಮಠದಲ್ಲಿ ಸುಬ್ರಹ್ಮಣ್ಯನ ಸೇವೆಗಳನ್ನ ನಡೆಸದಂತೆ ಭಕ್ತಾದಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ. ಇಷ್ಟು ಮಾತ್ರವಲ್ಲದೆ ತನಗೆ ನಿತ್ಯ ಜಪ ಮಾಡಲೂ ತೊಂದರೆಯಾಗುತ್ತಿದೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ಗೋಶಾಲೆಗೆ ಬರುತ್ತಿದ್ದ ನೀರನ್ನೂ ನಿಲ್ಲಿಸಿ ತೊಂದರೆ ಕೊಡಲಾಗುತ್ತಿದೆ. ಸುಬ್ರಹ್ಮಣ್ಯನ ದರುಶನಕ್ಕೂ ಅವಕಾಶ ನೀಡದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ವಾಮೀಜಿ ಉಪವಾಸ ಆರಂಭಿಸಿದ್ದಾರೆ. ಹಲವಾರು ವರ್ಷಗಳಿಂದ ಮಠ ಮತ್ತು ದೇವಸ್ಥಾನದ ನಡುವೆ ವಿವಾದ ಇದ್ದು, ಕೆಲ ವರ್ಷಗಳ ಹಿಂದೆಯಷ್ಟೇ ಸ್ವಾಮೀಜಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಲಾಗಿತ್ತು. ದೇವರ ದರುಶನ ಮತ್ತು ಉತ್ಸವಗಳಲ್ಲಿ ಭಾಗಿಯಾಗಲು ಅವಕಾಶ ದೊರೆತಿತ್ತು. ಇದೀಗ ವಿವಾದ ತಾರಕಕ್ಕೇರಿ ದಿನಕ್ಕೆ ಒಂದು ಲೋಟ ನೀರು ಮಾತ್ರ ಕುಡಿದು ಅನಿರ್ದಿಷ್ಟವಧಿ ಉಪವಾಸಕ್ಕೆ ಸ್ವಾಮೀಜಿ ನಿರ್ಧರಿಸಿದ್ದಾರೆ.