Recent Posts

Monday, January 20, 2025
ಸುದ್ದಿ

ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ಆದೇಶ : “ನನ್ನನ್ನು ಗಡಿಪಾರು ಮಾಡಿ” – ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ – ಕಹಳೆ ನ್ಯೂಸ್

ಪುತ್ತೂರು : ಬಜರಂಗದಳದ 5 ಜನ  ಕಾರ್ಯಕರ್ತರ ಗಡಿಪಾರಿಗೆ ನೋಟೀಸ್ ನೀಡಲಾಗಿದ್ದು, ಆದೇಶ ಬಂದ ಕಾರ್ಯಕರ್ತರು ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ಭೇಟಿಯಾಗಿದ್ದು, ಈ ವೇಳೆ ಕಾರ್ಯಕರ್ತರ ಸಮ್ಮುಖದಲ್ಲೇ ಕಟೀಲ್ ಸಹಾಯಕ ಆಯುಕ್ತರ ಜೊತೆ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕರ್ತರನ್ನು ಗಡಿಪಾರು ಮಾಡಲು ನಿಮ್ಮ ಮಾನದಂಡ ಏನು..!?? ಒಂದು ಕೇಸ್ ಇದ್ದವರಿಗೂ ಗಡಿಪಾರು ನೋಟೀಸ್ ನೀಡಿದ್ದಾರೆ. ಹಾಗಾದ್ರೇ ‘ನನ್ನನ್ನು ಗಡಿಪಾರು ಮಾಡಿ., ಕಾರ್ಯಕರ್ತರನ್ನು ಯಾಕೇ ಸುಮ್ಮನೆ ಗಡಿಪಾರು ಮಾಡ್ತೀರಾ’ ಆದೇಶ ಮಾಡುವ ಮುಂಚೆ ಸರಿಯಾಗಿ ಪರಿಶೀಲನೆ ನಡೆಸಿ., ಯಾರದ್ದೋ ಒತ್ತಡಕ್ಕೆ ಮಣಿದು ಈ ರೀತಿ ಕ್ರಮ ಕೈಗೊಳ್ಳಬೇಡಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ದ್ವೇಷದ ರಾಜಕಾರಣ ಈ ರಾಜ್ಯದಲ್ಲಿ ನಡೆಯುತ್ತಿದೆ. ಸುಳ್ಳು ಪ್ರಕರಣ ದಾಖಲು ಮಾಡುವಂತಹದ್ದು, ಯಾವುದೇ ಅಪರಾಧಿ ಅಲ್ಲದೇ ಇದ್ರೂ ಅವರಿಗೆ ಗಡಿಪಾರು ಆದೇಶ ಮಾಡುವಂತಹದನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಪುತ್ತೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕುವಂತಹದ್ದು, ಗಡಿಪಾರು ಆದೇಶ ಮಾಡುವುದು ಕಂಡು ಬಂದಿದ್ದು, ಇದನ್ನು ನಾವು ಖಂಡಿಸುತ್ತೇವೆ. ಈ ರೀತಿಯ ದ್ವೇಷದ ರಾಜಕಾರಣ ಸರಿಯಲ್ಲ. ಅಧಿಕಾರಿಗಳ ಜೊತೆಗೂ ಈ ಬಗ್ಗೆ ಮಾತನಾಡಿದ್ದೇನೆ. ಯಾವುದೇ ರೀತಿಯ ಒಂದೇ ಒಂದು ಕೇಸ್ ಇಲ್ಲದವನಿಗೂ ಗಡಿಪಾರು ನೋಟೀಸ್ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಗಮನಿಸುವುದಾಗಿ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಈ ರೀತಿಯ ಕೇಸ್ ಗಳನ್ನು ಹಾಕುವುದಕ್ಕೆ ನಾವು ಬಿಡುವುದಿಲ್ಲ ಎಂದರು.

ಸಿದ್ದರಾಮಯ್ಯ ನವರ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಅಭಿವೃದ್ಧಿ ಕಾರ್ಯದಲ್ಲಿ ಕುಂಟಿತವಾಗಿದೆ ಎಂದರು ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.