Monday, January 20, 2025
ಸುದ್ದಿ

ಮೂಡುಬಿದಿರೆ ಕೋ ಓಪರೇಟಿವ್ ಸರ್ವಿಸ್‌ ಸೊಸೈಟಿಯ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ, ಸಾಂಸ್ಕೃತಿಕ ವೈಭವಕ್ಕೆ ಚಾಲನೆ –ಕಹಳೆ ನ್ಯೂಸ್

ಮೂಡುಬಿದಿರೆ: ಸಹಕಾರ ಸಪ್ತಾಹದ ಅಂಗವಾಗಿ ಮೂಡುಬಿದಿರೆ ಕೋ ಓಪರೇಟಿವ್ ಸರ್ವಿಸ್ ಸೊಸೈಟಿ ವತಿಯಿಂದ ಮಂಗಳವಾರ ಬ್ಯಾಂಕಿನ ಕಲ್ಪವೃಕ್ಷ ಸಭಾಂಗಣದಲ್ಲಿ ಏಳುದಿನಗಳ ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ, ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ ಸಹಕಾರಿ ರಂಗಕ್ಕೆ ಮಾದರಿಯಾಗಿ ಸಮುದಾಯದ ಬ್ಯಾಂಕ್ ಎಂಬ ಉನ್ನತಿಗೇರಿರುವ ಮೂಡುಬಿದಿರೆ ಸೊಸೈಟಿ ಬ್ಯಾಂಕ್ ದಕ್ಷ ಅಧಿಕಾರಿಗಳು ಮತ್ತು ಉತ್ತಮ ಆಡಳಿತದಿಂದ ಯಶಸ್ಸು ಸಾಧ್ಯವೆಂದು ತೋರಿಸಿಕೊಟ್ಟಿದೆ. ಸಹಕಾರದ ಶಕ್ತಿಯನ್ನು ಸೊಸೈಟಿ ಪರಿಚಯಿಸಿದೆ ಎಂದರು.

ಸಾಧಕ ಪ್ರಶಸ್ತಿ ಪ್ರದಾನ:
ಹಿರಿಯ ಉದ್ಯಮಿ ಶ್ರೀ ಧನಲಕ್ಷ್ಮೀ ಕ್ಯಾಶ್ಯೂ ಮಾಲಕ ಶ್ರೀಪತಿ ಭಟ್ ಅವರಿಗೆ ಸೊಸೈಟಿ ವತಿಯಿಂದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಶಾಲು, ಹಾರ, ಪೇಟ, ರಜತ ಸ್ಮರಣಿಕೆ, ತಾಮ್ರಪತ್ರ ಸಹಿತ ಸಮಗ್ರ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಪತಿ ಭಟ್ ದೇಶದ ಆರ್ಥಿಕತೆಗೆ ಸಹಕಾರ ರಂಗದ ಕೊಡುಗೆ ಅಪಾರ. ಗ್ರಾಮೀಣ ವಲಯದಲ್ಲಿ ಪ್ರಧಾನವಾಗಿ ಆವರಿಸಿಕೊಂಡಿರುವ ಸಹಕಾರ ಸಂಘಗಳು ಭಾರತದಲ್ಲಿ ದಾಖಲೆಯ ಸಂಖ್ಯೆಯಲ್ಲಿರುವುದು ಮತ್ತು ಯಶಸ್ಸು ಕಂಡಿರುವುದು ಗಮನಾರ್ಹ ಎಂದರು. ತನ್ನ ಉದ್ಯಮದ ಬೆಳವಣಿಗೆಯಲ್ಲಿ ಶಿಸ್ತು, ಸಹಕಾರ ನೀಡಿದ ಸೊಸೈಟಿ ಬ್ಯಾಂಕಿನ ಗೌರವ ಸ್ವೀಕರಿಸಿ ಧನ್ಯತಾಭಾವ ಪಡೆದಿದ್ದೇನೆ ಎಂದವರು ಉತ್ತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೈನ ಪ.ಪೂ ಕಾಲೇಜಿನ ಪ್ರಾಚಾರ್ಯ ಡಾ. ಪ್ರಭಾತ್ ಕುಮಾರ್ ಬಲ್ನಾಡು ಅಭಿನಂದನಾ ಮಾತುಗಳನ್ನಾಡಿದರು. ಕರ್ನಾಟಕ ಬ್ಯಾಂಕಿನ ನಿವೃತ್ತ ಜಿ.ಎಂ. ಬಿ..ಚಂದ್ರಶೇಖರ ರಾವ್, ಚೌಟರ ಅರಮನೆಯ ಕುಲದೀಪ್ ಎಂ. ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಐದು ಲಕ್ಷ ಕೋಟಿ ರೂ ಆರ್ಥಿಕತೆಯನ್ನು ಸಹಕಾರಿ ಸಂಘಗಳ ಮೂಲಕ ಸಾಧಿಸುವ ಗುರಿ ಕೇಂದ್ರ ಸರಕಾರಕ್ಕಿದ್ದು ಇದು ಸಹಕಾರಿ ರಂಗದ ಮೇಲಿಟ್ಟಿರುವ ಭರವಸೆಗೆ ಸಾಕ್ಷಿಯಾಗಿದೆ. ಸಹಕಾರ ರಂಗವನ್ನು ಪ್ರೋತ್ಸಾಹಿಸಿ ಪ್ರತ್ಯೇಕ ಸಚಿವಾಲಯವನ್ನೇ ತೆರೆದಿರುವ ಕೇಂದ್ರ ಸರಕಾರ ಪೆಟ್ರೋಲ್ ಬಂಕ್, ಜನೌಷದಿ, ಡಿಜಿಟಲ್ ಲೈಸನ್ಸ್ ಹೀಗೆ ವಿವಿಧ ವಿಷಯಗಳಲ್ಲಿ ಸಹಕಾರಿ ರಂಗವನ್ನು ಉತ್ತೇಜಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

ಪ್ರಾಂತ್ಯ ಮತ್ತು ಮಾರ್ಪಾಡಿ ಗ್ರಾಮದ ೧೯ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ತಲಾ ಹತ್ತು ಸಾವಿರ ಆರ್ಥಿಕ ನೆರವನ್ನು ವಿತರಿಸಲಾಯಿತು. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅಗ್ರಸ್ಥಾನ ಪಡೆದ ಪ್ರಾಥಮಿಕ, ಪ್ರೌಢ,ಪ.ಪೂ ಕಾಲೇಜುಗಳ ೬೮ ವಿದ್ಯಾರ್ಥಿಗಳನ್ನು ನಗದು ಗೌರವ ಸಹಿತ ಪುರಸ್ಕರಿಸಲಾಯಿತು.

ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಧರಣೇಂದ್ರ ಜೈನ್ ಸಮ್ಮಾನ ಪತ್ರವಾಚಿಸಿ ವಂದಿಸಿದರು. ಸಹಾಯಕ ಕಾರ್ಯದರ್ಶಿ ಕೆ. ರಘುವೀರ ಕಾಮತ್ ಶಾಲಾ ಆರ್ಥಿಕ ನೆರವು ಫಲಾನುಭವಿ ಶಾಲೆಗಳ ವಿವರ ನೀಡಿದರು. ಎಂ. ಗಣೇಶ ಕಾಮತ್ ಕಾರ್ಯಕ್ರಮ ನಿರೂಪಿಸಿದರು.