Tuesday, January 21, 2025
ಸುದ್ದಿ

ಅಮ್ಮಾ ಪಟಾಕಿ ಮೇಳದ ವತಿಯಿಂದ ಮಾನಸ ಜ್ಯೋತಿ ಸಂಸ್ಥೆಗೆ ನೆರವು – ಕಹಳೆ ನ್ಯೂಸ್

ಕುಂದಾಪುರ: ಕಳೆದ ಆರು ವರ್ಷಗಳಿಂದ ಅಮ್ಮಾ ಪಟಾಕಿ ಮೇಳದ ಶಶಿರಾಜ್, ವಿಶ್ವರಾಜ್ ಹಾಗೂ ವಿಜಯ್ ಈ ಮೂವರ ತಂಡವು ಅನಾರೋಗ್ಯ ಪೀಡಿತ ಹಾಗೂ ಅಶಕ್ತರ ಪಾಲಿಗೆ ನೆರವಾಗುತ್ತಿದ್ದಾರೆ.

ಕುಂದಾಪುರ ನೆಹರು ಮೈದಾನದಲ್ಲಿ ದೀಪಾವಳಿ ಹಬ್ಬದ ಸಂಧರ್ಭ ಪಟಾಕಿ ಮೇಳ ಹಸರಿನ ಅಂಗಡಿಯನ್ನು ತೆಗೆದು ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರುದಲ್ಲದೆ ಅದರಿಂದ ಬಂದ ಲಾಭದ ಹಣದ ಭಾಗವನ್ನು ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಕೆ ನೇರವಾಗುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಷಂಪ್ರತಿಯಂತೆ ಕುಂದಾಪುರ ಕೋಣಿ ಸಮೀಪದ ಮಾನಸ ಜ್ಯೋತಿ ಸಂಸ್ಥೆಗೆ ಆರ್ಥಿಕವಾಗಿ ನೇರವು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗಿರೀಶ್ ಜಿ.ಕೆ., ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಕುಂದಾಪುರ ಬಿ.ಜೆ.ಪಿ ಮಂಡಳಾಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಪೋಲಿಸ್ ಠಾಣಾ ಉಪನೀರಿಕ್ಷಕ ಪ್ರಸಾದ್, ಪ್ರಶಾಂತ್, ನಟೇಶ್, ನಾಗೇಶ್, ನಾಗರಾಜ್, ಪ್ರಸಾದ್, ಅಶೋಕ್, ಅಭಿಷೇಕ್ ಉಪಸ್ಥಿತರಿದ್ದರು.