Tuesday, January 21, 2025
ಸುದ್ದಿ

ಕ್ರೀಡಾಭಿಮಾನಿಗಳ ಗಮನಕ್ಕೆ : ಬೀರ್ನ ಹಿತ್ಲುವಿನಲ್ಲಿ ನ.18,19ರಂದು ಆಯೋಜಿಸಲಾಗಿದ್ದ ‘ಅಶ್ವ ಟ್ರೋಫಿ’ ಕಬಡ್ಡಿ ಪಂದ್ಯಾಟ ಮುಂದೂಡಿಕೆ – ಕಹಳೆ ನ್ಯೂಸ್ 

ಪುತ್ತೂರು: ದೀಪಾವಳಿಯ ಅಂಗವಾಗಿ ಬೀರ್ನಹಿತ್ಲು ದ.ಕ. ಜಿ. ಪಂ. ಹಿ. ಪ್ರಾಥಮಿಕ ಶಾಲೆಯಲ್ಲಿ ದೀಪಾವಳಿಯ ಅಂಗವಾಗಿ ನ.18ಹಾಗೂ 19ರಂದು ಆಯೋಜಿಸಲಾಗಿದ್ದ ಮ್ಯಾಟ್ 60ಕೆ.ಜಿ. ವಿಭಾಗ ಮತ್ತು ಮುಕ್ತ ಕಬಡ್ಡಿ ಪಂದ್ಯಾಟ ಅಶ್ವ ಟ್ರೋಫಿ 2023 ಪೊಲೀಸ್ ಇಲಾಖೆಯಿಂದ ಅನುಮತಿ ನಿರಕಾರಣೆಯ ಹಿನ್ನೆಲೆಯಲ್ಲಿ 2024ರ ಫೆಬ್ರುವರಿಗೆ ಮುಂದೂಡಲಾಗಿದೆ ಎಂದು ವಿಷ್ಣು ಯುವಕ ಮಂಡಲ ಸದಸ್ಯ ಮಂಜುನಾಥ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನ.16ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವ ಫ್ರೆಂಡ್ಸ್ ಬೀರ್ನಹಿತ್ಲು, ವಿಷ್ಣು ಯುವಕ ಮಂಡಲ ಕೆಮ್ಮಾಯಿ, ವೀರಮಾರುತಿ ಫ್ರೆಂಡ್ಸ್ ದಾರಂದಕುಕ್ಕು ಆಶ್ರಯದಲ್ಲಿ ಅಮೆಚೂರು ಕಬಡ್ಡಿ ಆಸೋಸಿಯೇಶನ್ ಸಹಯೋಗದಲ್ಲಿ ಕಬಡ್ಡಿ ಆಯೋಜಿಸುವ ಬಗ್ಗೆ ಜುಲೈ ತಿಂಗಳಲ್ಲಿ ಸಭೆ ನಡೆಸಿ ಸಮಿತಿಗಳನ್ನು ರಚಿಸಲಾಗಿತ್ತು. ಕಾರ್ಯಕ್ರಮ ನಡೆಸಲು ದಾನಿಗಳಿಂದ ದೇಣಿಗೆಯನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಈಗಾಗಲೇ ನಡೆದ ಕೆಲವು ಅಹಿತಕರ ಘಟನೆಗಳನ್ನು ಮುಂದಿಟ್ಟುಕೊಂಡು ಪಂದ್ಯಾಟಕ್ಕೆ ಇಲಾಖೆ ಅನುಮತಿಯನ್ನು ನೀಡದೆ, ಕಟ್ಟುನಿಟ್ಟಿನಿಂದ ಮುಂದೂಡಲು ಸೂಚಿಸಿದ್ದಾರೆ. ಇದರಿಂದ ಈಗಾಗಲೆ ನಡೆಸಲು ನಿಗಧಿಪಡಿಸಲಾಗಿರುವ ಕಬಡ್ಡಿ ಪಂದ್ಯಾಟವನ್ನು ಫೆಬ್ರವರಿಗೆ ಮುಂದೂಡಲು ತೀರ್ಮಾನಿಸಲಾಗಿದೆ. ಪಂದ್ಯಾಟಕ್ಕೆ ದೇಣಿಗೆ ನೀಡಿದವರು ಈ ಬಗ್ಗೆ ಗೊಂದಲ ಪಡುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಅಶ್ವ ಫ್ರೆಂಡ್ಸ್ ಸದಸ್ಯರಾದ ಅಕ್ಷಯ್ ಬೀರ್ನಹಿತ್ಲು, ವಿಶ್ವ ಅನಂತಿಮಾರು, ಮೋಹಿತ್ ಬಿರ್ನಹಿತ್ಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು