Recent Posts

Monday, November 25, 2024
ಸುದ್ದಿ

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನೈತಿಕ ಶಿಕ್ಷಣ ತರಗತಿ ಮೋಕ್ಷಸಾಧನೆಗಾಗಿ ಜ್ಞಾನ ಮಾರ್ಗ ಅಗತ್ಯ : ಶ್ರೀಕೃಷ್ಣ ಉಪಾಧ್ಯಾಯ – ಕಹಳೆ ನ್ಯೂಸ್

ಪುತ್ತೂರು : ಮಳೆ ಹೇಗೆ ಮೋಡದ ರೂಪಾಂತರವೋ ಸೃಷ್ಟಿಯೂ ಹಾಗೆ ಶಕ್ತಿಯ ರೂಪಾಂತರವೇ ಆಗಿದೆ. ಮಾನವ ಜನ್ಮದಲ್ಲಿ ಮೋಕ್ಷಸಾಧನೆಗಾಗಿ ಜ್ಞಾನ ಮಾರ್ಗ ಅತ್ಯಂತ ಅಗತ್ಯ. ಯಾವುದೇ ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕು. ಸತ್ಕಾರ್ಯಗಳನ್ನು ಮಾಡಿದಾಗ ಯಾರು ನಮ್ಮನ್ನು ಗುರುತಿಸದಿದ್ದರೂ ಚಿಂತೆ ಮಾಡದೆ ದೇವರ ಕಣ್ಣಿಗೆ ಕಂಡರೆ ಸಾಕು ಎಂಬ ಭಾವದಿಂದ ಕಾರ್ಯತತ್ಪರರಾಗಬೇಕು. ಭಗವಂತನಿಲ್ಲದ ಜಾಗ ಇಲ್ಲ ಎಂಬುದನ್ನು ಮರೆಯಬಾರದು ಎಂದು ವೈದಿಕ ವಿದ್ವಾಂಸ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ತರಗತಿಯ ಅಂಗವಾಗಿ ಶನಿವಾರ ಶಂಕರಾಚಾರ್ಯರ ಅದ್ವೆöÊತ ಸಿದ್ದಾಂತದ ವಿವರಣೆಯನ್ನು ನೀಡಿದರು. ಸಭೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಉಪನ್ಯಾಸಕಿ ಪುಷ್ಪಲತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ವಿಷ್ಣು ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕರಾದ ನಯನ್ ಹಾಗೂ ಮುರಳಿ ಮೋಹನ್ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು