Recent Posts

Sunday, January 19, 2025
ಸುದ್ದಿ

ಬೆಳ್ತಂಗಡಿ ತಾಲೂಕಿನ ಭಾರತೀಯ ಗೋಪರಿವಾರ ರಚನೆ ಕುರಿತು ಪೂರ್ವ ಸಿದ್ದತಾ ಸಭೆ.

ಬೆಳ್ತಂಗಡಿ: ಭಾರತೀಯ ಗೋತಳಿಗಳ ಉಳಿವು ಬೆಳವುಗಳಿಗಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಗೋಪರಿವಾರ ರಚನೆಯ ಪೂರ್ವ ಸಿದ್ದತಾ ಸಭೆಯು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ 08/10/2017ರಂದು ನಡೆಯಿತು. ಕಾಂತಾಜೆ ಈಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಗೋಪರಿವಾರ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಉದಯಶಂಕರ ಭಟ್ ಮಿತ್ತೂರು ದಿಕ್ಸೂಚಿ ಮಾತುಗಳನ್ನಾಡಿದರು. ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಗೋಪರಿವಾರ ರಚನೆ ಮಾಡಲು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಈ ಮುಂದಿನವರನ್ನು ಆಯ್ಕೆ ಮಾಡಿ ಜವಾಬ್ದಾರಿಯನ್ನು ನೀಡಲಾಯಿತು.
ನಾರಾವಿ-ಬಾಲಕೃಷ್ಣ ಭಟ್, ದಡ್ಡು.ಅಳದಂಗಡಿ-ಶಿವಕುಮಾರ ಕಟ್ಟೂರು,ಲಾಯ್ಲ-ಮಹಾಬಲೇಶ್ವರ ಭಟ್ ಕುದುಪ್ಪುಳ,ಉಜಿರೆ-ಕೇಶವ ಭಟ್ ಪದ್ಯಾಣ,ಕೊಕ್ಕಡ-ಉದಯಶಂಕರ ಭಟ್ ಅರಸಿನಮಕ್ಕಿ,ಕಣಿಯೂರು-ಸೀತಾರಾಮ ಆಳ್ವ ಕೊರಿಂಜ,ಕುವೆಟ್ಟು-ರಾಜಗೋಪಾಲ ಭಟ್.ವಿಹಿಂಪ ಪುತ್ತೂರು ವಿಭಾಗದ ಪ್ರಮುಖ ಸಂದೀಪ್ ಮುಂಡ್ರೊಟ್ಟು,ಮಂಡಲ ಗುರಿಕ್ಕಾರ ಬಾಲ್ಯ ಶಂಕರ ಭಟ್, ಉಪ್ಪಿನಂಗಡಿ ಮಂಡಲ ಕಾರ್ಯದರ್ಶಿ ಶ್ರೀಧರ ಭಟ್ ಕೂವೆತ್ತಂಡ ಮುಂತಾದವರು ಉಪಸ್ಥಿತರಿದ್ದರು. ಅತ್ತಾಜೆ ಕೇಶವ ಭಟ್
ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response