Recent Posts

Sunday, January 19, 2025
ಸುದ್ದಿ

“ನಾನು, ವಿಜಯೇಂದ್ರ ಜೋಡೆತ್ತುಗಳಂತೆ ಕೆಲಸ ಮಾಡುತ್ತೇವೆ, ಲೋಕಸಭೆಯ 28 ಸ್ಥಾನಗಳನ್ನೂ ಗೆಲ್ಲುತ್ತೇವೆ”: ಪ್ರತಿಪಕ್ಷ ನಾಯಕ ಆರ್.ಅಶೋಕ್ –ಕಹಳೆ ನ್ಯೂಸ್

ಬೆಂಗಳೂರು: ವಿಜಯೇಂದ್ರ ಹಾಗೂ ನನಗಿಬ್ಬರಿಗೂ ಹೊಸ ಜವಾಬ್ದಾರಿ ಸಿಕ್ಕಿದೆ. ವರಿಷ್ಠರು ಲೋಕಸಭಾ ಕ್ಷೇತ್ರದಲ್ಲಿ ಎಲ್ಲ 28 ಕ್ಷೇತ್ರಗಳು ಎನ್.ಡಿ.ಎ ಮೈತ್ರಿಕೂಟದ ಪಾಲಾಗಬೇಕು ಹಾಗೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕು ಎನ್ನುವ ಟಾಸ್ಕ್ ನೀಡಿದ್ದಾರೆ. ನಾವಿಬ್ಬರೂ ಯಾವುದೇ ವಿವಾದಗಳಿಲ್ಲದೇ, ಜೋಡೆತ್ತುಗಳಂತೆ ಕೆಲಸ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಶೋಕ್, ನಾನು ಹಾಗೂ ವಿಜಯೇಂದ್ರ ಇಬ್ಬರೂ ಕೂಡ ಪಕ್ಷದ ಸಂಘಟನೆಯಿಂದ ಬೆಳೆದವರು. ನಾವು ಪ್ರಾರಂಭದಿಂದಲೂ ಪರಿವಾರದ ಸಂಘಟನೆಗಳಲ್ಲಿ ಕೆಲಸ ಮಾಡಿದವರು. ರಾಜ್ಯದಲ್ಲಿ ಯಾವ ರೀತಿ ಯಡಿಯೂರಪ್ಪ ರೈತನ ನಾಯಕರಾಗಿ ಇಡೀ ರಾಜ್ಯವನ್ನು ಸುತ್ತುತ್ತಿದ್ದರೋ ಹಾಗೆಯೇ ನಾವಿಬ್ಬರೂ ರಾಜ್ಯಾದ್ಯಂತ ಸುತ್ತುವ ಮೂಲಕ ಬಿಜೆಪಿಯನ್ನು ಇನ್ನೂ ಶಕ್ತಿಶಾಲಿಯಾಗಿ ಬೆಳೆಸುವ ಕೆಲಸ ಮಾಡುತ್ತೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಪ್ರತಿಪಕ್ಷದ ನಾಯಕ ಇರಬಹುದು, ಆದರೆ 66 ಶಾಸಕರೂ ನಾಯಕರೇ. ಜೊತೆಗೆ ಜೆಡಿಎಸ್ ಎನ್.ಡಿ.ಎ ಪಾಲುದಾರ ಪಕ್ಷವಾಗಿದೆ. ಜೆಡಿಎಸ್​ನವರು 19 ಜನ ಇದ್ದಾರೆ. ಇದರಿಂದ ಒಟ್ಟಾರೆ ನಾವು 85 ಜನ ಆಗಲಿದ್ದೇವೆ. ಇದು ದೊಡ್ಡ ಸಂಖ್ಯೆ ಆಗಲಿದೆ. ಕಾಂಗ್ರೆಸ್ ಮಾಡುತ್ತಿರುವ ಅವ್ಯವಹಾರ, ಭ್ರಷ್ಟಾಚಾರ ಬಯಲಿಗೆಳೆಯಲು ಮತ್ತು ಜನರಿಗೆ ನ್ಯಾಯಯುವಾಗಿ ನೆರೆ, ಬರ ಹಾಗೂ ಬೇರೆ ಬೇರೆ ಪರಿಹಾರಗಳು ಸಿಗುವಂತೆ ಮಾಡುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿರೋಧ ಪಕ್ಷವಾಗಿ ಕುಳಿತುಕೊಳ್ಳಲು ಜನ ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಯಡಿಯೂರಪ್ಪ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ನಾವು ಒಗ್ಗಟ್ಟಾಗಿ ಕರ್ನಾಟಕದಲ್ಲಿ ದುರಾಡಳಿತ ಮಾಡುತ್ತಿರುವ ಕಾಂಗ್ರೆಸ್ ಕಿತ್ತೊಗೆಯುವುದೇ ನಮ್ಮ ಮೊದಲ ಆದ್ಯತೆ. ಈ ಸರ್ಕಾರ ಕಳೆದ ಆರು ತಿಂಗಳಿನಿಂದ ಮಾಡಿರುವ ಭ್ರಷ್ಟಾಚಾರ ಬಯಲಿಗೆಳೆಯುತ್ತೇವೆ ಎಂದರು.

ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲೂ ಗೆಲುವು: ಬೆಂಗಳೂರು ಗ್ರಾಮಾಂತರ ಸೇರಿ ರಾಜ್ಯದ 28ಕ್ಕೆ 28 ಲೋಕಸಭೆ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಕಳೆದ ಬಾರಿಯ 25 ಸ್ಥಾನಗಳ ಬದಲು ಮೈತ್ರಿಯಾಗಿ 28 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಸೋಲಿನ ಭಯ ಬಿಟ್ಟು, ಮತ್ತೆ ಸೂರ್ಯ ಉದಯಿಸುವ ಮತ್ತು ಮತ್ತೊಮ್ಮೆ ಕಮಲ ಅರಳುವ ವಿಶ್ವಾಸದೊಂದಿಗೆ ಹಾಗೂ ಘೋಷಣೆಯ ಜೊತೆ ಕೆಲಸ ಮಾಡಬೇಕಿದೆ ಎಂದರು.