Friday, January 24, 2025
ಪುತ್ತೂರು

ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಆ್ಯಕ್ಟಿವಾ ಹಾಗೂ ಬೈಕ್ ನಡುವೆ ಡಿಕ್ಕಿ : ಮೂವರಿಗೆ ಗಾಯ- ಕಹಳೆ ನ್ಯೂಸ್

ಬೆಳ್ತಂಗಡಿ: ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಕಣಿಯೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಆ್ಯಕ್ಟಿವಾ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.


ಆ್ಯಕ್ಟಿವಾ ಸವಾರ ಹಿರೇಬಂಡಾಡಿ ಗ್ರಾಮದ ನೂಜಿ ನಿವಾಸಿ ಜಯಪ್ರಕಾಶ್ ಆಚಾರ್ಯ(37ವ.), ಸಹಸವಾರೆ ಅವರ ಪತ್ನಿ ಆಶಾಗೀತಾ ಹಾಗೂ ಮಗ ಅದೀಶ್ (2ವ.)ಎಂಬವರು ಗಾಯಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಯಪ್ರಕಾಶ್‍ರವರು ತನ್ನ ಆ್ಯಕ್ಟಿವಾ(ಕೆಎ 21 ಎಕ್ಸ್ 6143) ದಲ್ಲಿ ಪತ್ನಿ ಹಾಗೂ ಮಗನೊಂದಿಗೆ ಉಪ್ಪಿನಂಗಡಿಯಿಂದ ಗುರುವಾಯನಕೆರೆ ಕಡೆಗೆ ಹೋಗುತ್ತಿದ್ದ ವೇಳೆ ಯಶೋಧರ ಎಂಬವರು ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿಗೆ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ (ಕೆಎ19, ಹೆಚ್‍ಎಫ್ 3983) ನಡುವೆ ಡಿಕ್ಕಿ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು