ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಅಗಿದೆಂದು ನಿರೂಪಿಸಲು ಟಿಪ್ಪರ್ ಲಾರಿಗೆ ಪೊಲಿಸರೇ ಮರಳು ಲೋಡ್ ಮಾಡಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಸಮೀಪ ನಡೆದಿದೆ.
ಅಡ್ಡೂರಿನ ಅಕ್ಬರ್ ಅಲಿ ಎಂಬವರಿಗೆ ಸೇರಿದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ ಎನ್ನುವ ದೂರು ಪೊಲೀಸರಿಗೆ ಬಂದಿತ್ತು, ಬಗ್ಗೆ ತನಿಖೆ ನಡೆಸಲು ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಲಾರಿಯನ್ನು ಅಕ್ಬರ್ ಅಲಿಯವರ ಮನೆಯಲ್ಲಿ ಖಾಲಿ ಮಾಡಿ ನಿಲ್ಲಿಸಲಾಗಿತ್ತು,
ದೂರು ಬಂದ ಹಿನ್ನಲೆಯಲ್ಲಿ ಲಾರಿಯನ್ನು ಸೀಜ್ ಮಾಡಿಕೊಂಡು ಬರಲು ಇನ್ಸ್ಪೆಕ್ಟರ್ ಹೇಳಿದ್ದರಿಂದ ಪೊಲೀಸರು ಸೀಜ್ ಗೆ ಬಂದಿದ್ದು ಅದರೆ ಅಲ್ಲಿ ಖಾಲಿ ಲಾರಿ ನಿಂತಿತ್ತು ಈ ಹಿನ್ನೆಲೆಯಲ್ಲಿ ಸೀಜ್ ಮಾಡಿದ್ರೆ ಪ್ರಕರಣ ದಾಖಲಾಗಲ್ಲ ಎಂದು ತಿಳಿದ ಪೊಲೀಸ್ ಸಿಬ್ಬಂದಿಗಳು ಸೇರಿ ಪಕ್ಕದಲ್ಲೇ ಇದ್ದ ನಿರ್ಮಾಣ ಹಂತದ ಕಟ್ಟಡದ ಮುಂದೆ ರಾಶಿ ಹಾಕಿದ್ದ ಮರಳನ್ನು ಲಾರಿಗೆ ತುಂಬಿಸಿದ್ದಾರೆ.
ಅದರೆ ಪೊಲೀಸರು ಲಾರಿಗೆ ಮರಳು ಲೋಡ್ ಮಾಡುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿ, ಪೊಲೀಸರು ಸುಮ್ಮನೆ ನಮ್ಮನ್ನು ಟಾರ್ಗೆಟ್ ಮಾಡಿ ಮರಳು ಸೀಜ್ ಮಾಡಿ ಕೇಸ್ ಹಾಕಲು ಮುಂದಾಗಿದ್ದಾರೆ ಎನ್ನುವ ದೃಷ್ಟಿಯಿಂದ ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಈ ವಿಡಿಯೋ ಈಗ ವೈರಲ್ ಅಗಿದೆ.