Friday, January 24, 2025
ಸುದ್ದಿ

ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ : ಜ್ಞಾನ,ಕೌಶಲ ಸದ್ಬಳಕೆಯಿಂದ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಿ : ಪ್ರದೀಪ್ ಜಿ.ಪೈ – ಕಹಳೆ ನ್ಯೂಸ್

ಮಂಗಳೂರು: ಸಮಾಜದಲ್ಲಿರುವ ಸವಾಲನ್ನು ವೈವಿಧ್ಯತೆಯ ಸೃಜನಶಿಲತೆಯಿರುವ ವಿದ್ಯಾರ್ಥಿಗಳು ವಿಶ್ವಾಸದಿಂದ ಎದುರಿಸಬೇಕು. ಶಿಕ್ಷಣದಿಂದ ಪಡೆದ ಜ್ಞಾನ,ಕೌಶಲ ಸದ್ಬಳಕೆಯಿಂದ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಬೇಕು ಎಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಕೌನ್ಸಿಲ್ ಸಂಚಾಲಕ , ಉದ್ಯಮಿ,ಹಾಂಗ್ಯೋ ಐಸ್ಕ್ರೀಂನ ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ ಹೇಳಿದರು.

ಅವರು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಜರಗಿದ 19ನೇ ಬ್ಯಾಚಿನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಲೇಜಿನ ಸಂಚಾಲಕ, ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಮಾತನಾಡಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೃಜನಶೀಲತೆಯಿದೆ. ತಾತ್ಕಾಲಿಕ ಹಿನ್ನಡೆಗಳು ಯಶಸ್ಸಿಗೆ ಮುನ್ನುಡಿಯಾಗಿದ್ದು ತಾರ್ಕಿಕ ಚಿಂತನೆ,ಕೌಶಲಗಳಿಂದ ಸಮಸ್ಯೆಗಳನ್ನು ಎದುರಿಸಿ ಯಶಸ್ಸು ಕಾಣಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಉಪ ಪ್ರಾಂಶುಪಾಲ, ಅಕಾಡೆಮಿಕ್ ಡೀನ್ ಡಾ. ಡೇಮಿಯನ್ ಎ. ಡಿಮೆಲ್ಲೋ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ವಾಸುದೇವ ಕಾಮತ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಬದ್ಧತೆ ಮತ್ತು ಪರಿಶ್ರಮದಿಂದ ಸಾಧನೆ ಸಾಧ್ಯವಿದ್ದು ಜ್ಞಾನ ಮತ್ತು ಪ್ರತಿಭೆ ಕದಿಯಲಾಗದ ಸಂಪತ್ತು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳಾದ ಕೇದಾರ್ ಸಿ.ಪೈ, ಶ್ರೀಹರಿ ಭಟ್, ದೇವಿ ಪ್ರಸಾದ್, ಆದಿತ್ಯ ಪೈ ಅನಿಸಿಕೆ ವ್ಯಕ್ತಪಡಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಸದಸ್ಯ ಬಸ್ತಿ ಪುರುಷೋತ್ತಮ ಶೆಣೈ, ಎಂ. ನರೇಶ್ ಶೆಣೈ, ಡೀನ್ ಎಕ್ರೆಡಿಟೇಶನ್ ಡಾ. ವೆಂಕಟೇಶ್ ಎನ್., ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಸುನೀಲ್ ಕುಮಾರ್ ಬಿ.ಎಲ್, ಇನ್ಫರ್ಮೇಶನ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಜಗದೀಶ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಡಾ. ದಯಾನಂದ್ ಜಿ.ಕೆ. ಸಮಾರಂಭದ ಮುಖ್ಯ ಸಮಸ್ವಯಕಾರರಾದ ಜಯಶ್ರೀ ಕೆ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಸ್ವಾಗತಿಸಿದರು. ಮುಖ್ಯ ಸಮನ್ವಯಕಾರ ಅನಂತ ಕೃಷ್ಣ ಕಾಮತ್ ವಂದಿಸಿದರು. ಸಹ ಪ್ರಾಧ್ಯಾಪಕಿ ಪೂಜಾ ಕಿಣಿ ಸಾದಕ ವಿದ್ಯಾರ್ಥಿಗಳು, ಪದವಿಧರ ವಿದ್ಯಾರ್ಥಿಗಳ ವಿವರ ನೀಡಿದರು. ಕ್ಯಾರಲ್ ಡಿ.ಮೆಲ್ಲೋ ಕಾರ್ಯಕ್ರಮ ನಿರೂಪಿಸಿದರು.