Friday, January 24, 2025
ಸುದ್ದಿ

ವಾಮಂಜೂರ್ ಇದರ ರಜತ ಮಹೋತ್ಸವದ ಅಂಗವಾಗಿ `ಅಂಬೇಡ್ಕರ್ ಉತ್ಸವ 2023´ – ಕಹಳೆ ನ್ಯೂಸ್

ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ (ರಿ) ಅಂಬೇಡ್ಕರ್ ನಗರ ತಿರುವೈಲ್ ವಾಮಂಜೂರ್ ಇದರ ರಜತ ಮಹೋತ್ಸವದ ಅಂಗವಾಗಿ ಅದೇ ರೀತಿ ಅಂಬೇಡ್ಕರ್ ಯುವಕ ಸಂಘ ಮತ್ತು ಶ್ರೀ ಸತ್ಯ ಸಾರಮಾಣಿ ದೇವಸ್ಥಾನದ ಸಹಯೋಗದೊಂದಿಗೆ, ಶ್ರೀ ಹೇಮಲತಾ ರಘುಸಾಲಿಯಾನ್ ರವರ ಮುಂದಾಳತ್ವದಲ್ಲಿ `ಅಂಬೇಡ್ಕರ್ ಉತ್ಸವ 2023´ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಈ ಕಾರ್ಯಕ್ರಮದ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಾ. ವೈ ಭರತ್ ಶೆಟ್ಟಿಯವರು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಿರುವೈಲ್ ಪರಿಸರದಲ್ಲಿರುವ ಕಾಲೋನಿ ಅಭಿವೃದ್ಧಿ ಕಾಮಗಾರಿಗೆ ಸುಮಾರು 1 ಕೋಟಿಗೂ ಅಧಿಕ ಮೊತ್ತ ನೀಡಿ ಕಾಲೋನಿ ಅಭಿವೃದ್ಧಿ ಮಾಡಿದ ಶಾಸಕರ ಜನಪರ ಕಾರ್ಯವನ್ನು ಮೆಚ್ಚಿ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು