Friday, January 24, 2025
ಸುದ್ದಿ

ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ತಾಲೂಕಿನ 14 ಮಂದಿಗೆ ಎಂಡೋ ಮಾಸಾಶನ ಮಂಜೂರು – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ತಾಲೂಕಿನ 14 ಮಂದಿಗೆ ಎಂಡೋ ಮಾಸಾಶನಕ್ಕೆ ಆದೇಶವಾಗಿದ್ದು ಪುತ್ತೂರು ಶಾಸಕರಾದ ಅಶೋಕ್ ರೈ ಶಿಫಾರಸ್ಸಿನಂತೆ ಮಾಸಾಶನ ಮಂಜೂರಾಗಿರುತ್ತದೆ.


ಕಳೆದ ಹಲವು ವರ್ಷಗಳ ಹಿಂದೆ ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಮಾಸಾಶನ ಬಂದಿರಲಿಲ್ಲ. ಇಲಾಖೆಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ಎರಡು ತಿಂಗಳ ಹಿಂದೆ ಈ ಬಗ್ಗೆ ಎಂಡೋ ಪೀಡಿತ ಮಕ್ಕಳ ಪೋಷಕರು ಶಾಸಕರಲ್ಲಿ ಈ ವಿಚಾರವನ್ನು ತಿಳಿಸಿದ್ದರು. ಎಂಡೋ ಮಾಸಾಶನಕ್ಕಾಗಿ ಅರ್ಜಿ ಹಾಕಿದ ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ಪಡೆದುಕೊಂಡ ಶಾಸಕರು ಅರ್ಹತೆ ಹೊಂದಿರುವ ಎಲ್ಲರಿಗೂ ತಕ್ಷಣದವೇ ಮಾಸಾಶನವನ್ನು ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರ ಶಿಫಾರಸ್ಸಿನಂತೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಅಝಾಶಹ್‌ಮಾ (8ವ) ನೆಟ್ಟಣಿಗೆ ಮುಡ್ನೂರು ಗ್ರಾಮದ ಮುಹಮ್ಮದ್ ಮುಬಶ್ಯಿರ್ (23ವ ), ಪಡುವನ್ನೂರು ಗ್ರಾಮದ ಕತಿಜತುಲ್ ಕುಬ್‌ರಾ (7 ವ) ಹಿರೆಬಂಡಾಡಿ ಗ್ರಾಮದ ಕೆ ಮಹಮ್ಮದ್ ತ್ವಾಹಾ (23ವ ) ಬಲ್ನಾಡು ಗ್ರಾಮದ ರಕ್ಷಿತ್‌ಕುಮಾರ್ (14 ವ) ನಿಡ್ಪಳ್ಳಿ ಗ್ರಾಮದ ಪ್ರಿಯಾ (31ವ ) ಕೊಡಿಪ್ಪಾಡಿ ಗ್ರಾಮದ ಹಾರ್ದಿಕ್ (8 ವ) ಬೆಟ್ಟಂಪಾಡಿ ಗ್ರಾಮದ ಶಿಶಿರ್ (5ವ) ಒಳಮೊಗ್ರು ಗ್ರಾಮದ ಅನ್ವೇಶ್ ಕೆ ಎಚ್ (14 ವ) ಒಳಮೊಗ್ರು ಗ್ರಾಮದ ಶರತ್ ((26 ವ) ಒಳಮೊಗ್ರು ಗ್ರಾಮದ ಮಹಮ್ಮದ್ ಶಮ್ಮಾಸ್ (12ವ) ಅರಿಯಡ್ಕ ಗ್ರಾಮದ ಫಾತಿಮತ್ ಸನಾ (6ವ) ಮುಂಡೂರು ಗ್ರಾಮದ ಮುಹಮ್ಮದ್ ಇಯಾಝ್ (6ವ) ಪುತ್ತೂರು ನಗರ ರಕ್ಷಿತ್ ಕೆ (30 ವ) ರವರಿಗೆ ತಿಂಗಳಿಗೆ ರೂ 4000 ರಂತೆ ಪ್ರತೀ ತಿಂಗಳು ಮಾಸಾಶನ ದೊರೆಯಲಿದೆ.
ನನ್ನ ಕ್ಷೇತ್ರದ ಅನೇಕ ಮಂದಿ ಎಂಡೋ ಪೀಡಿತರು ಮಾಸಾಶನಕ್ಕೆ ಅರ್ಜಿ ಹಾಕಿದ್ದರೂ ಅವರಿಗೆ ಮಾಸಾಶನ ಸಿಗದೆ ವಂಚಿತರಾಗಿದ್ದರು. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ದಾಖಲೆಗಳ ಕೊರತೆಯಿಂದಲೂ ಕೆಲವೊಂದು ಮಂದಿಗೆ ಮಾಸಾಶನ ನೀಡಿರಲಿಲ್ಲ. ಅಂಥವರನ್ನು ಕಚೇರಿಗೆ ಕರೆಸಿ ಅವರಿಂದ ಸೂಕ್ತ ದಾಖಲೆಗಳನ್ನು ಪಡೆದು ಶಾಸಕರ ಕಚೇರಿಯ ಮೂಲಕವೇ ಇಲಾಖಾ ಅಧಿಕಾರಿಗಳ ಸಂಪರ್ಕಿಸಿ ವಂಚಿತರಾಗಿದ್ದ ಎಂಡೋ ಪೀಡಿತರಿಗೆ ಮಾಸಾಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಕೆಲವು ಅರ್ಜಿಗಳು ಪ್ರಗತಿಯ ಹಂತದಲ್ಲಿದೆ. ಬಡವರಿಗೆ , ಅಶಕ್ತರಿಗೆ ದೊರೆಯುವ ಸವಲತ್ತುಗಳು ಅವರಿಗೆ ದೊರೆಯಬೇಕು. ನೊಂದವರಣ ಕಣ್ಣೀರೊರೆಸುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇನೆ. ಅದಿಕಾರಿಗಳು ಅಶಕ್ತರಿಗೆ ಯಾವುದೇ ರೀತಿಯ ತೊಂದರೆಗಳನ್ನು ನೀಡದೆ ಅವರು ಕೊಡುವ ಅರ್ಜಿಯನ್ನು ಸ್ವೀಕರಿಸಿ ತಕ್ಷಣವೇ ವಿಲೇವಾರಿ ಮಾಡಬೇಕು. ಕಟ್ಟಕಡೇಯ ಬಡವನಿಗೂ ನ್ಯಾಯ ಕೊಟ್ಟೇ ಕೊಡಿಸ್ತೇನೆ.
ಕಳೆದ 5 ವರ್ಷಗಳ ಹಿಂದೆ ನಾನು ಎಂಡೋ ಮಾಸಾಶನಕ್ಕೆ ಅರ್ಜಿ ಹಾಕಿದ್ದೆ. ಆದರೆ ವಿನಾ ಕಾರಣ ಸತಾಯಿಸಿದ್ದರು. ಕಚೇರಿಗೆ ಅಲೆದಾಡಿ ಸುಸ್ತಾಗಿ ಇನ್ನು ನನ್ನ ಮಗನಿಗೆ ಮಾಸಾಶನವೇ ಬೇಡ ಎಂದು ಸುಮ್ಮನಾಗಿದ್ದೆ. ಈ ವಿಚಾರವನ್ನು ಶಾಸಕ ಅಶೋಕ್ ರೈ ಯವರಲ್ಲಿ ಹೇಳಿದ್ದೆ. ದಾಖಲೆಗಳನ್ನು ಶಾಸಕರ ಕಚೇರಿಯಲ್ಲೇ ನೀಡಿದ್ದೆ. ಆ ಬಳಿಕ ಎಲ್ಲೂ ಹೋಗಿಲ್ಲ. ನನ್ನ ಪುತ್ರನಿಗೆ ಮಾಸಾಶನ ಮಂಜೂರಾಗಿದೆ, ನನಗೆ ನ್ಯಾಯ ಸಿಕ್ಕಿದೆ, ಶಾಸಕರಿಗೆ ದನ್ಯವಾದಗಳು

ಜಾಹೀರಾತು
ಜಾಹೀರಾತು
ಜಾಹೀರಾತು