Friday, January 24, 2025
ಸುದ್ದಿ

ಉಡುಪಿ : ಬೈಂದೂರು ಬಿಜೂರು ರೈಲ್ವೆ ಬ್ರಿಡ್ಜ್ ಫಿಲ್ಲರ್ ಮೇಲಿದ್ದ ಆಕಳಿನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ – ಕಹಳೆ ನ್ಯೂಸ್

ಬೈಂದೂರು: ರೈಲ್ವೆ ಬ್ರಿಡ್ಜ್ ಕೆಳಗಿನ ಪಿಲ್ಲರ್ ಮೇಲೆ ಆಕಳೊಂದು ಸಿಕ್ಕಿಹಾಕಿಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಬಿಜೂರು ಬಳಿ ನಡೆದಿದೆ. ಸೇತುವೆಯ ಮೇಲೆ ಬರುತ್ತಿದ್ದ ರೈಲಿನಿಂದ ತಪ್ಪಿಸಲು ಯತ್ನಿಸಿ ಆಯತಪ್ಪಿ ಬ್ರಿಜ್ ಪಿಲ್ಲರ್ ಕೆಳಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಆಕಳನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಯವರಿಗೆ ವಿಷಯವನ್ನು ಮುಟ್ಟಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಬೈಂದೂರು ಅಗ್ನಿಶಾಮಕ ತಂಡ ಕೆಲವು ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ಆಕಳನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜ ಸೇವ ಸುಬ್ರಹ್ಮಣ್ಯ, ಸ್ಥಳೀಯರು ತಂಡಕ್ಕೆ ಸಾಥ್ ನೀಡಿದ್ದರು. ಉಡುಪಿ ಅಗ್ನಿಶಾಮಕದಳದ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. .

ಜಾಹೀರಾತು
ಜಾಹೀರಾತು
ಜಾಹೀರಾತು