Monday, January 20, 2025
ಸುದ್ದಿ

ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ದಶಮ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಮಂಜೇಶ್ವರ:- ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ಬ್ರಹ್ಮ ಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆ ಮತ್ತು 10 ನೇ ವರ್ಷದ ವಾರ್ಷಿಕೋತ್ಸವದ ದಶಮ ಸಂಭ್ರಮ ಕಾರ‍್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ಹೊಸಂಗಡಿಯ ಹಿಲ್ ಸೈಡ್ ಸಭಾಭವನದಲ್ಲಿ ಇಂದು ಬೆಳಗ್ಗೆ ನಡೆಯಿತು.

ಜಿಲ್ಲಾ ಸಮಿತಿ ಅಧ್ಯಕ್ಷ:- ಶ್ರೀ ಕೃಷ್ಣ ಶಿವ ಕೃಪಾ ಕುಂಜತ್ತೂರು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡಿದರು. ಕಾರ‍್ಯಕ್ರಮದ ಆಮಂತ್ರಣ ಪತ್ರಿಕೆಯನ್ನ ಜಿಲ್ಲೆಯ ಎಲ್ಲಾ ಉಪ ಸಮಿತಿಗಳು, ಸ್ವಜಾತಿ ಭಾಂದವರ ಮನೆಗಳಿಗೆ ತಲುಪಿಸುವಲ್ಲಿ ಕಾರ‍್ಯೋನ್ಮುಖರಾಗಬೇಕಾಗಿಯೂ, ಕಾರ‍್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಅಭೂತಪರ್ವ ಕಾರ‍್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕರೆಯಿತ್ತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಸುರ‍್ಣ ಹೊಸಬೆಟ್ಟು, ಸಂಘಟನಾ ಕಾರ್ಯದರ್ಶಿ ರವಿ ಮುಡಿಮಾರ್, ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಬಡಾಜೆ, ಹರೀಶ್ ಉಳ್ಳಾಲ, ಶಾಂತರಾಮ್ ಹೊಸಬೆಟ್ಟು, ಹರೀಶ್ ಪೂಜಾರಿ ಅಗ್ರಾಳ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ಸಮಿತಿಯ ದಶಮ ಸಂಭ್ರಮವು ನವೆಂಬರ್ ತಿಂಗಳ 18 ರಂದು ಆದಿತ್ಯವಾರ ಹೊಸಂಗಡಿಯ ಹಿಲ್ ಸೈಡ್ ಸಭಾಭವನದಲ್ಲಿ ನಡೆಯಲಿದೆ.