Tuesday, January 21, 2025
ಸುದ್ದಿ

ಸುಬ್ರಹ್ಮಣ್ಯಶ್ರೀಗಳಿಗೆ ಅತಿ ಶೀಘ್ರದಲ್ಲಿ ನ್ಯಾಯ ಸಿಗುವಂತಾಗಲಿ: ಭೀಮನಕಟ್ಟೆ ಶ್ರೀಪಾದರು – ಕಹಳೆ ನ್ಯೂಸ್

ಬೆಂಗಳೂರು: ಸುಬ್ರಹ್ಮಣ್ಯ ಶ್ರೀಗಳು ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲವಾಗಿ, ನವರಾತ್ರಿ ಪ್ರಯುಕ್ತ ಬೆಂಗಳೂರಿನ ಶ್ರೀಮಠದಲ್ಲಿರುವ ಭೀಮನಕಟ್ಟೆ ಶ್ರೀಪಾದರು ಉಪವಾಸವನ್ನು ಆಚರಿಸಿ, ಸುಬ್ರಹ್ಮಣ್ಯಶ್ರೀಗಳಿಗೆ ಅತಿ ಶೀಘ್ರದಲ್ಲಿ ನ್ಯಾಯ ಸಿಗುವಂತಾಗಲಿ ಎಂದು ತಮ್ಮ ಆರಾಧ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.

ನಾವೆಲ್ಲಾ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ಶ್ರೀಗಳ ನ್ಯಾಯಯುತ ಹೋರಾಟದಲ್ಲಿ ಭಾಗವಹಿಸಲು ಆಗದಿರಬಹುದು ,ಆದರೆ ಇರುವಲ್ಲಿಯೇ ದೇವರಲ್ಲಿ ಪ್ರಾರ್ಥನೆ ಮಾಡೋಣ. ನಮ್ಮ ಸನಾತನ ಸಂಸ್ಕೃತಿಯ ಮೇಲೆ ಆಗುತ್ತಿರುವ ಹಲವು ಬಗೆಯ ಆಕ್ರಮಣಗಳಲ್ಲಿ ಇದು ಒಂದು.

ಜಾಹೀರಾತು
ಜಾಹೀರಾತು
ಜಾಹೀರಾತು

ಯತಿಗಳಿಗೆ ತಮಗೆ ವಿಹಿತವಾದ ಆಶ್ರಮೋಚಿತ ಅನುಷ್ಠಾನವೇ ಬಲ. ಅಂತಹ ತಮ್ಮ ಅನುಷ್ಠಾನ ಸಮರ್ಪಕವಾಗಿ ಮಾಡಲು ತೊಂದರೆ ಕೊಡುತ್ತಿರುವವರ ವಿರುದ್ಧ ಸುಬ್ರಹ್ಮಣ್ಯ ಶ್ರೀಗಳು ಕೈಗೊಂಡಿರುವ ಈ ಹೋರಾಟದಲ್ಲಿ ನಾವು ಕೈಸೇರಿಸೋಣ.

ಜಾಹೀರಾತು
ಜಾಹೀರಾತು
ಜಾಹೀರಾತು