Sunday, January 19, 2025
ಸುದ್ದಿ

ಮಣಿಪಾಲ ; ಸ್ಕೂಟಿ – ಬೈಕ್ ನಡುವೆ ಢಿಕ್ಕಿ; ವಿದ್ಯಾರ್ಥಿನಿ ಸಾವು – ಕಹಳೆ ನ್ಯೂಸ್

ಮಣಿಪಾಲ : ಸ್ಕೂಟಿ ಹಾಗೂ ಬೈಕ್ ನಡುವೆ ಅಪಘಾತ ನಡೆದ ಪರಿಣಾಮ ಬೈಕ್‌ನ ಸಹಸವಾರೆಯಾಗಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ವಿದ್ಯಾರ್ಥಿನಿಯನ್ನು ಹಿರಿಯಡಕದ ಸುಶ್ಮಿತಾ (19) ಎಂದು ಗುರುತಿಸಲಾಗಿದೆ.

ಕಾಯಿನ್ ಸರ್ಕಲ್‌ನಿಂದ ಸಿಂಡಿಕೇಟ್ ಸರ್ಕಲ್‌ಗೆ ಸ್ಕೂಟಿ ಮತ್ತು ಬೈಕ್ ಗಳೆರಡೂ ತೆರಳುತ್ತಿತ್ತು.ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಸುಶ್ಮಿತಾ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಸುಶ್ಮಿತಾ ನಗರದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.