Thursday, November 28, 2024
ಸುದ್ದಿ

ಬೆಂಗಳೂರು :  ನ.25-26ರಂದು   ನಡೆಯುವ  ಅದ್ದೂರಿ ಕಂಬಳಕ್ಕೆ ಸಜ್ಜಾದ ಅರಮನೆ ಮೈದಾನ – ಕಹಳೆ ನ್ಯೂಸ್

ಬೆಂಗಳೂರು : ಅರಮನೆ ಮೈದಾನ ಕಂಬಳಕ್ಕೆ ಸಜ್ಜಾಗಿ ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಕಂಬಳ ಸಮಿತಿ ಗೌರವಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ನ.25ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆ ಯಾಗುವ ನಂತರ ನಿರಂತರವಾಗಿ ಮುಂದುವರಿದು ನ.26 ರಂದು ಸಂಜೆ 7 ಗಂಟೆಗೆ ಮುಕ್ತಯ ಗೊಳ್ಳುವ ನಮ್ಮೆಲ್ಲರ ನೆಚ್ಚಿನ ಕಂಬಳ ಕ್ಕೆ ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಕೋಣಗಳನ್ನು ಓಡಿಸುವ ಕೆರೆಗೆ ರಾಜ-ಮಹಾರಾಜ ಎಂದು ಹೆಸರಿಡಲಾಗಿದೆ. ಮುಖ್ಯ ವೇದಿಕೆಗೆ ಪುನೀತ್ ರಾಜ್‌ಕುಮಾರ್ ಹೆಸರಿಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆಗೆ ಕೃಷ್ಣರಾಜ ಒಡೆಯರ ಹೆಸರಿಡಲಾಗಿದೆ. ಕಂಬಳ ವೀಕ್ಷಣೆಗೆ ಸುಮಾರು 3 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ. ಇನ್ನು 180 ಮಳಿಗೆಗಳು ಇರಲಿದ್ದು, ಇಲ್ಲಿ ಕರಾವಳಿ ಭಾಗದ ಎಲ್ಲ ಬಗೆಯ ಖಾದ್ಯಗಳು ದೊರೆಯಲಿವೆ. ಹಳ್ಳಿಯ ಸೊಗಡು, ಕರಾವಳಿ ಭಾಗಕ್ಕೆ ಸಂಬoಧಿಸಿದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.


ಎಲ್ಲರನ್ನು ಜೊತೆ ಗೂಡಿ ಕೊಂಡು ಎಲ್ಲಾ ಸಂಘ – ಸಂಸ್ಥೆಗಳ ಅಭಿ ಪ್ರಾಯ ತೆಗೆದುಕೊಂಡು ಕಂಬಳ ಆಯೋಜಿಸು ತ್ತಿದ್ದೇವೆ. ಅರ್ಜುನ್ ಜನ್ಯ ಹಾಗೂ ಗುರುಕಿರಣ್ ಅವರ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ವಿಶೇಷ ವಾಗಿ ಹುಲಿ ವೇಷ ಸೇರಿದಂತೆ ಕರಾವಳಿ ಭಾಗದ ವಿವಿಧ ನೃತ್ಯ ರೂಪಕಗಳ ಪ್ರದರ್ಶನವಿರಲಿದೆ ಎಂದರು.
ಶಾಸಕ ಕೆ.ಎಸ್.ಅಶೋಕ್ ಕುಮಾರ್ ರೈ ಮಾತನಾಡಿ, ಕಂಬಳ ಪ್ರಿಯರಿಗೆ ವೀಕ್ಷಿಸಲು ಬೇಕಾದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. 7 ಸಾವಿರ ಜನ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಬಹುದು. ಸಾಮಾನ್ಯ ಜನರಿಗೆ, ವಿ ಐ ಪಿ ವಿವಿಐಪಿಗಳಿಗೆ ಕಂಬಳಕ್ಕೆ ಪ್ರವೇಶಿಸಲು ಹಾಗೂ ವೀಕ್ಷಿಸಲು ಪ್ರತ್ಯೇಕ ಆಸನದ ವ್ಯವಸ್ಥೆ ಇದೆ. 50 ಗಂಟೆಯಲ್ಲಿ ವಿವಿಧ ವೇದಿಕೆಗಳಲ್ಲಿ ಸುಮಾರು 8-10 ಲಕ್ಷ ಮಂದಿ ಕಂಬಳ ವೀಕ್ಷಿಸುವ ನಿರೀಕ್ಷೆ ಇದೆ. ಜತೆಗೆ ನ.24ರಂದು ತುಳುಕೂಟ ಬೆಂಗಳೂರು 50ನೇ ವರ್ಷದ ಸಂಭ್ರಮದಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನವೆoಬರ್ .25ರಂದು ಬೆಳಗ್ಗೆ

ಜಾಹೀರಾತು
ಜಾಹೀರಾತು
ಜಾಹೀರಾತು

10.30ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಕಂಬಳ ಉದ್ಘಾಟಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಕಂಬಳ ಕೆರೆ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಲಿದ್ದಾರೆ. ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಅದೇ ದಿನ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಜಿ. ಪರಮೇಶ್ವರ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಶಾಸಕ ಕೆ.ಎಸ್.ಅಶೋಕ್ ಕುಮಾರ್ ರೈ ತಿಳಿಸಿದರು.
ನಟಿ ಅನುಷ್ಕಾ ಶೆಟ್ಟಿ, ನಟರಾದ ಸುದೀಪ್, ದರ್ಶನ್, ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ನಟಿಯರಾದ ರಚಿತಾ ರಾಮ್, ಸಿನಿಮಾ ರಂಗದ ಶೇ.80ರಷ್ಟು ನಟ- ನಟಿಯರು ಪಾಲ್ಗೊಳ್ಳಲಿದ್ದಾರೆ ಎಂದರು. ಸಂಗೀತ ನಿರ್ದೇಶಕ ಗುರು ಕಿರಣ್, ಕಂಬಳ ಸಮಿತಿಯ ಉಪೇಂದ್ರ ಶೆಟ್ಟಿ, ಉಮೇಶ್ ಶೆಟ್ಟಿ, ಮಂಜುನಾಥ್ ಕನ್ಯಾಡಿ, ತುಳು ಕೂಟದ ಅಧ್ಯಕ್ಷ ರಾಜೇಂದ್ರ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಥಮ ಬಹುಮಾನವಾಗಿ 16 ಗ್ರಾಂ ಬಂಗಾರ ಕೊಡಲಾಗುತ್ತದೆ. ಜೊತೆಗೆ 1 ಲಕ್ಷ ರೂ. ನಗದು ಇರಲಿದೆ. ದ್ವಿತೀಯ ಬಹುಮಾನವಾಗಿ 8 ಗ್ರಾಂ ಬಂಗಾರ, 50 ರೂ. ನಗದು, ಮೂರನೇ ಬಹುಮಾನವಾಗಿ 4 ಗ್ರಾಂ ಚಿನ್ನ ಹಾಗೂ 25 ಸಾವಿರ ರೂ. ನೀಡಲಾಗುತ್ತದೆ.

ಕಂಬಳಕ್ಕೆ 8 ಕೋಟಿ ರೂ. ಖರ್ಚು ಮಾಡಲಾಗಿದೆ. ಸರ್ಕಾರವು 1 ಕೋಟಿ ರೂ. ಅನುದಾನ ನೀಡಿದೆ. ಪ್ರತಿ ಕೋಣಗಳ ಮಾಲೀಕರಿಗೆ 50 ಸಾವಿರ ರೂ. ಲಾರಿ ಬಾಡಿಗೆ ರೂಪದಲ್ಲಿ ಕೊಡುತ್ತೇವೆ. ಹಲವಾರು ಸಂಘ ಸಂಸ್ಥೆಗಳು ಕಂಬಳಕ್ಕೆ ಅನುದಾನ ನೀಡಿವೆ.

ಕಂಬಳಕ್ಕೆ ಸುಮಾರು 228 ಜತೆ ಕೋಣಗಳನ್ನು ನೋಂದಣಿ ಮಾಡಿ ಕೊಂಡಿಸಿಕೊAಡಿದ್ದಾರೆ. ಈ ಪೈಕಿ ಆಯ್ದ 200 ಜತೆ ಕೋಣಗಳು ಕಂಬಳದಲ್ಲಿ ಭಾಗವಹಿಸಲಿವೆ.

ಇಲ್ಲಿ 155 ಮೀಟರ್ ಕೆರೆ ನಿರ್ಮಿಸಲಾಗಿದೆ. 8 ಸಾವಿರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು. ಸರ್ವರಿಗೂ ಪ್ರೀತಿಯ ಆಮಂತ್ರಣ ನೀಡಿ, ಎಲ್ಲರೂ ಪಾಲ್ಗೊಂಡು ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಸಿ ಕೊಡುವಂತೆ ಸುದ್ದಿ ಗೋಷ್ಠಿಯಲ್ಲಿ ವಿಚಾರ ಮಂಡಿಸಲಾಯಿತು.