Saturday, January 25, 2025
ಸುದ್ದಿ

ಬಂದಾರು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಜಂಟಿ ಆಶ್ರಯದಲ್ಲಿ ಆಧಾರ್ ಅದಾಲತ್ ಮತ್ತು ಅಂಚೆ ಇಲಾಖೆಯ ಖಾತೆ ತೆರೆಯುವ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಳ್ತಂಗಡಿ : ಬಂದಾರು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಜಂಟಿ ಆಶ್ರಯದಲ್ಲಿ ಆಧಾರ್ ಅದಾಲತ್ ಮತ್ತು ಅಂಚೆ ಇಲಾಖೆಯ ಖಾತೆ ತೆರೆಯುವ ಕಾರ್ಯಕ್ರಮವು ಪೆರ್ಲ ಬೈಪಾಡಿ ಅಂಚೆ ಇಲಾಖೆಯ ಹೊಸ ಸಂಕೀರ್ಣದ ಹತ್ತಿರ ನಡೆಯಿತು.

ಕಾರ್ಯಕ್ರಮವನ್ನು ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಮೋಹನ್ ಶೆಟ್ಟಿ ಸಹಾಯಕ ಅಂಚೆ ಅಧೀಕ್ಷಕರು ಕಾರ್ಕಳ ಧನಂಜಯ ಅಂಚೆ ಮೇಲ್ವಿಚಾರಕರು ಬೆಳ್ತಂಗಡಿ ಉಪ ವಿಭಾಗ ಶ್ರೀಮತಿ ವಿಮಲಾ ಅಂಚೆ ಮೇಲ್ವಿಚಾರಕರು ಬೆಳ್ತಂಗಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಭಾರತಿ ಕೋಡಿಯಲ್ ಗ್ರಾಮ ಪಂಚಾಯತ್ ಸದಸ್ಯ ಬಂದಾರು ಗೋಪಾಲಕೃಷ್ಣ ಶರ್ಮ ಕೊಯ್ಯೂರು, ಮಹಾಬಲ ಗೌಡ ನಾಗಂದೋಡಿ, ರಾಮಣ್ಣಗೌಡ ಬೈಪಾಡಿ, ಪೆರ್ಲಬೈಪ್ಪಾಡಿ ಹಾಲು ಉತ್ಪಾದಕಾರ ಸಂಘದ ಅಧ್ಯಕ್ಷ ಉಮೇಶ್ ಗೌಡ, ಬಾಲಕೃಷ್ಣ ಗೌಡ ಪಾಪುದಡ್ಕ, ಲಕ್ಷ್ಮಿಕಾಂತಗೌಡ ಕೀಲಾರು, ದಿನೇಶ್ ಗೌಡ ಅಡ್ಡಾರು ಮತ್ತು ಊರವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು