Friday, January 24, 2025
ಸುದ್ದಿ

ಪುತ್ತೂರು: ನಶೆಯಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯದ ಸಮೀಪ ಮಹಿಳೆಯ ಅನುಚಿತವಾಗಿ ವರ್ತನೆ : ಪುತ್ತೂರು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ನಗರ ಸಭೆ ವ್ಯಾಪ್ತಿಯ ಸಾಲ್ಮರದ ಗುಂಪಕಲ್ಲು ಎಂಬಲ್ಲಿ ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಮೀಪ ಮಹಿಳೆಯೊರ್ವರು ನ 24 ರಂದು ರಾತ್ರಿ ಅನುಚಿತವಾಗಿ ವರ್ತಿಸುತ್ತಿದ್ದ ಘಟನೆ ನಡೆದಿದೆ. ಮಹಿಳೆಯು ನಶೆಯಲ್ಲಿದ್ದಂತೆ ವರ್ತಿಸುತ್ತಿದ್ದು ಸರಿಯಾಗಿ ನಿಲ್ಲಲಾಗದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಬೊಬ್ಬೆ ಹೊಡೆಯುತ್ತ ಕಿರುಚಾಡುತ್ತಾ ವಿದ್ಯಾರ್ಥಿ ನಿಲಯದ ಸಮೀಪ ಗೊಂದಲ ಸೃಷ್ಟಿಸಿದ್ದರು.

ಇದನ್ನು ಗಮನಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಠಾಣೆಗೆ ಮಾಹಿತಿ ನೀಡಿದ್ದು , ಅಲ್ಲಿ 112ಗೆ ದೂರು ನೀಡುವಂತೆ ತಿಳಿಸಿದ್ದು,ಅದರಂತೆ ಅವರು ಅನ್‌ ಲೈನ್‌ ಮೂಲಕ ದೂರು ದಾಖಲಿಸಿದ್ದರು, ಆದರೇ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಪುತ್ತೂರಿನ ಉನ್ನತ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಹಾಗೂ ಹೊಯ್ಸಳ ವಾಹನ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಪೊಲೀಸರು ಆಟೋ ರಿಕ್ಷಾದ ಮೂಲಕ ಸಾಗಿಸಿ ಆ ಮಹಿಳೆಯನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಲ್ಮರ ಬೆದ್ರಾಳ ರಸ್ತೆಯಲ್ಲಿ ಈ ವಿದ್ಯಾರ್ಥಿ ನಿಲಯವಿದ್ದು ಅದರ ಪಕ್ಕದಲ್ಲಿ ಗುಜರಿ ಅಂಗಡಿಯೊಂದು ಇದೆ. ಮಹಿಳೆ ವಿದ್ಯಾರ್ಥಿ ನಿಲಯದ ಬಳಿ ವಿಚಿತ್ರವಾಗಿ ಆಡುತ್ತಿದ್ದ ಸಂದರ್ಭ ಆಕೆ ಗುಜರಿ ಅಂಗಡಿ ಬಳಿ ಹೋಗಿ ಚಪ್ಪಲಿಯನ್ನು ಹಾಕಿಕೊಂಡು ಬಂದಿರುವುದನ್ನು ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ.
ಮೂಲತಃ ಚನ್ನರಾಯಪಟ್ಟಣದ ಮಂಜುಳಾ (38) ಎಂಬವರು ಅಸ್ವಸ್ಥಗೊಂಡ ಮಹಿಳೆ ಎಂದು ತಿಳಿದು ಬಂದಿದೆ. ಕೆಲ ಗಂಟೆಗಳ ಬಳಿಕ ಆಕೆ ಆಸ್ಫತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ. ಪೊಲೀಸರು ವಿಚಾರಿಸಿದ ವೇಳೆ ನ.24 ರಂದು ರಾತ್ರಿ ತನ್ನನ್ನು ಅಪರಿಚಿತ ವ್ಯಕ್ತಿಯೊಬ್ಬ ಪುತ್ತೂರು ಬಸ್‌ ನಿಲ್ದಾಣದಿಂದ ಆಟೋ ರಿಕ್ಷಾವೊಂದರಲ್ಲಿ ಕರೆದೊಯ್ದು ಮತ್ತುಬರುವ ಪಾನೀಯ ಕುಡಿಸಿದ್ದು ಆ ಬಳಿಕ ಪ್ರಜ್ಞೆ ತಪ್ಪಿರುವುದಾಗಿ ತಿಳಿಸಿದ್ದಾರೆ. ಅಪರಿಚಿತ ವ್ಯಕ್ತಿ ನನ್ನ ಸರ ಮತ್ತು ಬಳೆ ದರೋಡೆ ಮಾಡಿರುವುದಾಗಿ ಆಕೆ ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆಯ ಕುರಿತು ದೂರು ನೀಡಿದ ಅಥಾವ ಪ್ರಕರಣ ದಾಖಲಾದ ಬಗ್ಗೆ ಪೊಲೀಸ್‌ ಇಲಾಖೆಯಿಂದ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಸ್ಥಳೀಯರ ಪ್ರಕಾರ ಇದೊಂದು ಗಂಭೀರ ಪ್ರಕರಣವಾಗಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಆಕೆಯನ್ನು ಯಾರೋ ಅಗಂತುಕರು ಅಪಹರಣ ಮಾಡಿ ಮದ್ಯ ಕುಡಿಸಿ ವಾಹನದಲ್ಲಿ ತಂದು ಅಲ್ಲಿ ಬೀಸಾಡಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಹಿಂದೆ ಸ್ಥಳೀಯ ವ್ಯಕ್ತಿಗಳ ಕೈವಾಡ ಇರುವ ಬಗ್ಗೆಯು ಸಂಶಯಗಳು ಮೂಡಿವೆ. ವಿದ್ಯಾರ್ಥಿ ನಿಲಯದ ಪಕ್ಕದಲ್ಲೆ ಪಾಳುಬಿದ್ದ ಕಟ್ಟಡವೊಂದು ಇದ್ದು, ಇದು ಈ ಹಿಂದೆ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು ಎಂದು ಹೇಳಲಾಗುತ್ತಿದೆ.

ನಿರ್ಜನ ಪ್ರದೇಶ

ಘಟನೆ ನಡೆದ ಸ್ಥಳವು ನಿರ್ಜನ ಪ್ರದೇಶವಾಗಿದ್ದು ಅಸುಪಾಸಿನಲ್ಲಿ ಸಿಸಿಟಿವಿ ಇಲ್ಲದಿರುವುದು ಆತಂಕಕಾರಿ ವಿಚಾರವಾಗಿದೆ. ಈ ಹಿಂದೆ ಇದೆ ಪ್ರದೇಶದಲ್ಲಿ ಹಲವು ಅಪರಾಧ ಚಟುವಟಿಕೆಗಳು ನಡೆದಿರುವುದು ಆತಂಕ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಪುತ್ತೂರನ್ನು ಬೆಚ್ಚಿ ಬೀಳಿಸಿದ ಅಕ್ಷತಾ ಮರ್ಡರ್‌ ಇದೇ ಜಾಗದಲ್ಲಿ ನಡೆದಿತ್ತು. ಕೆಲ ವರ್ಷಗಳ ಹಿಂದೆ ಅಯಕಟ್ಟಿನ ಜಾಗದಲ್ಲಿ ಅಡಗಿ ಕೂತ ಯುವಕರ ತಂಡವೊಂದು ವಿದ್ಯಾರ್ಥಿ ನಿಲಯದ ಮೇಲೆ ಕಲ್ಲು ಬೀಸಾಡಿತ್ತು. ಕೆಲ ವಾರಗಳ ಹಿಂದೆ ತಂಡವೊಂದು ತಲ್ವಾರು ಹಿಡ್ಕೊಂಡು ಅಂಗಡಿಯೊಂದನ್ನು ಗುರಿಯಾಗಿಸಿ ಬಂದಿದ್ದರು ಎನ್ನಲಾಗಿದೆ. ಬಳಿಕ ಆ ಪ್ರಕರಣವನ್ನು ರಾಜಿ ಪಂಚಾತಿಕೆಯಲ್ಲಿ ಮುಗಿಸಲಾಗಿತ್ತು. ಹೀಗಾಗಿ ಠಾಣೆಯಲ್ಲಿ ಪ್ರಕರಣ ದಾಖಲಾದ ಕುರುಹುಗಳು ಕಂಡು ಬಂದಿಲ್ಲ

ವಿದ್ಯಾರ್ಥಿ ನಿಲಯದಲ್ಲಿ 120ಕ್ಕೂ ಅಧಿಕ ಬಾಲಕಿಯರು ವಾಸಿಸುತ್ತಿದ್ದಾರೆ, ವಸತಿ ನಿಲಯದಲ್ಲಿ ಅಳವಡಿಸಿರುವ ಸಿಸಿಟವಿ ಕೇವಲ ಹಾಸ್ಟೇಲ್‌ ಗೆ ಮಾತ್ರ ಪೋಕಸ್‌ ಆಗಿದೆ. ಹೀಗಾಗಿ ಅದರ ಹೊರಗೆ ನಡೆಯುವ ಘಟನೆಗಳು ದಾಖಲಾಗುವ ಯಾವುದೇ ವ್ಯವಸ್ಥೆಯಿಲ್ಲ . ಇದರಿಂದಾಗಿ ಬಾಲಕಿಯರು ಆ ದಾರಿಯಲ್ಲಿ ಓಡಾಡುವಾಗ ಜೀವ ಕೈಯಲ್ಲಿಟ್ಟು ಸಂಚರಿಸುವಂತಾಗಿದೆ.