Thursday, January 23, 2025
ಸುದ್ದಿ

ಬೃಹತ್ ಹೆಬ್ಬಾವನ್ನು ಬರಿಗೈಯಲ್ಲೇ ಹಿಡಿದ 12 ವರ್ಷದ ಬಾಲಕ : ವಿಡಿಯೋ ವೈರಲ್..!- ಕಹಳೆ ನ್ಯೂಸ್

ಉಡುಪಿ : ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಹಾವುಗಳನ್ನು ಕಂಡರೆ ಭಯ ಪಡದವರು ತೀರಾ ಕಡಿಮೆ. ಮಾರುದ್ದ ದೂರದಲ್ಲಿ ಚಿಕ್ಕದೊಂದು ಹಾವನ್ನು ಕಂಡರೂ ಕೂಡ ಒಂದು ಕ್ಷಣ ಹೌಹಾರುತ್ತೇವೆ. ಅಂತಹದ್ದರಲ್ಲಿ 12 ವರ್ಷದ ಬಾಲಕನೊಬ್ಬ ಬೃಹತ್ ಹೆಬ್ಬಾವನ್ನು ಬರಿಗೈಯಲ್ಲೇ ಹಿಡಿಯುತ್ತಾನೆ ಎಂದರೆ ನಂಬುತ್ತೀರಾ? ಇದು ಅಚ್ಚರಿ ಎನಿಸಿದರೂ ಸತ್ಯ. ಉಡುಪಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, 12 ವರ್ಷದ ಧೀರಜ್ ಹಾವು ಹಿಡಿಯಿವ ವಿಡಿಯೋ ಇದೀಗ ಸಾಮಾಜಿಕ ಜಾಲಾತಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಉರಗ ತಜ್ಞರಾಗಿರುವ ಉಡುಪಿ ಜಿಲ್ಲೆಯ ಸಾಲಿಗ್ರಾಮ ನಿವಾಸಿ ಸುಧೀಂದ್ರ ಐತಾಳ್ ಅವರು ಹಾವು ಹಿಡಿಯಲು ಮನೆಯೊಂದಕ್ಕೆ ತಮ್ಮ ಮಗನೊಂದಿಗೆ ಬಂದಿದ್ದರು. ಪೊದೆಯೊಳಗೆ ಅವಿತಿದ್ದ ಬೃಹತ್ ಹೆಬ್ಬಾವಿನ ಬಾಲ ಹಿಡಿದು ಸುಧೀಂದ್ರ ಅವರು ಎಷ್ಟೇ ಎಳೆದಾಡಿದರೂ ಹಾವು ಹೊರ ಬರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಧೀರಜ್ ಯಾವುದೇ ಮುನ್ನೆಚ್ಚರಿಕಾ ಕ್ರಮಗಳಿಲ್ಲದೆಯೂ ಕೂಡ ಹಾವಿನ ತಲೆ ಹಿಡಿದು, ಹಾವನ್ನು ಹೊರ ತಂದಿದ್ದಾನೆ. ಈ ಅಚ್ಚರಿಯ ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಧೀಂದ್ರ ಅವರು ತಮ್ಮ ಗ್ರಾಮ ಅಥವಾ ಜಿಲ್ಲೆಯಲ್ಲಿ ಎಲ್ಲೇ ಹಾವುಗಳು ಕಂಡಿ ಬಂದರೂ ಕೂಡ ಹೋಗಿ ರಕ್ಷಣೆ ಮಾಡುತ್ತಾರೆ. ಸಾಕಷ್ಟು ಹಾವುಗಳು, ಪ್ರಾಣಿ, ಪಕ್ಷಿಗಳನ್ನು ಇವರು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಕೆಲವೊಮ್ಮೆ ಗಾಯಗೊಂಡ ಪ್ರಾಣಿ-ಪಕ್ಷಿಗಳನ್ನು ಮನೆಯಲ್ಲೇ ಇಟ್ಟು ಆರೈಕೆ ಮಾಡುತ್ತಾರೆ. ಇದೇ ಕಾರಣಕ್ಕೆ ಇತ್ತೀಚೆಗೆ ಅರಣ್ಯ ಇಲಾಖೆ ಇವರ ಮೇಲೆ ಪ್ರಕರಣ ದಾಖಲಿಸಿತ್ತು.

ಸುಧೀಂದ್ರ ಅವರು ತಮ್ಮ ಮಗ ಧೀರಜ್ ಗೆ ಹಾವು ಹಿಡಿಯುವ ತರಭೇತಿ ನೀಡಿದ್ದಾರೆ. ಹಾವು ಹಿಡಿಯಲು ತೆರಳಿದಾಗೆಲ್ಲ ಮಗನನ್ನು ಜೊತೆಗೆ ಕರೆದೊಯ್ಯುತ್ತಾರೆ. ಇದೀಗ ಧೀರಜ್ ಕೂಡ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದು, ಮೊನ್ನೆ ಹೆಬ್ಬಾವು ಹಿಡಿಯಲು ತಂದೆ ಹರಸಾಹಸ ಪಡಿವಾಗ ಧೀರಜ್ ಹಾವನ್ನು ಹಿಡಿದು ಸಾಹಸ ಮೆರೆದಿದ್ದಾನೆ.