Wednesday, January 22, 2025
ಪುತ್ತೂರುಸುದ್ದಿ

ಕಾವು ಗೋಪೂಜಾ ಸಮಿತಿ ವತಿಯಿಂದ ಸಾಮೂಹಿಕ ಗೋಪೂಜೆ , ಧಾರ್ಮಿಕ ಸಭಾ ಕಾರ್ಯಕ್ರಮ-ಕಹಳೆ ನ್ಯೂಸ್

  • ಕಾವು: ವಿಶ್ವ ಹಿಂದೂ ಪರಿಷತ್- ಬಜರಂಗದಳ ಹಾಗೂ ಗೋಪೂಜಾ ಸಮಿತಿ ಕಾವು ಇದರ ನೇತೃತ್ವದಲ್ಲಿ 12ನೇ ವರ್ಷದ ಸಾಮೂಹಿಕ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನ.25 ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು                    

ಅರ್ಚಕರಾದ ವೇದಮೂರ್ತಿ ಶಿವಪ್ರಸಾದ್ ಕಡಮಣ್ಣಾಯರ ಪೌರೋಹಿತ್ಯದಲ್ಲಿ ಗೋಪೂಜೆ ನಡೆಯಿತು

*ಧಾರ್ಮಿಕ ಸಭಾ ಕಾರ್ಯಕ್ರಮ*
*ಮನುಕುಲದ ಸಮೃದ್ದಿಗೆ ಗೋವು ಅತೀ ಅಗತ್ಯ-ಪೂರ್ಣತ್ಮರಾಮ್ ಈಶ್ವರಮಂಗಲ*
ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದ ಪೂರ್ಣತ್ಮರಾಮ್ ಈಶ್ವರಮಂಗಲ ಮಾತನಾಡಿ ಸನಾತನ ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದ್ದು,ಪಂಚಗವ್ಯವು ಮಾರಕ ಕ್ಯಾನ್ಸರ್ ನಂತಹ ಖಾಯಿಲೆಯನ್ನು ಗುಣಪಡಿಸುವ ಶಕ್ತಿ ಹೊಂದಿದ್ದು ವೈದ್ಯ ಲೋಕವೇ ಅಚ್ಚರಿ ಪಡುವ ಸಂಗತಿಯಾಗಿದೆ.ಗೋವಿನಿಂದ ಭೂಮಿಯು ಫಲವತ್ತಾಗಿ ಶುದ್ಧ ಆಹಾರದ ಜೊತೆಗೆ ಆರೋಗ್ಯವು ವೃದ್ಧಿಯಾಗುತ್ತದೆ.ಹೀಗಾಗಿ ಇಡೀ ಮನುಕುಲದ ಸಮೃದ್ಧಿಗೆ ಗೋವು ಅತೀ ಅಗತ್ಯ ಎಂದರು.
*ಮಕ್ಕಳಿಗೆ ಗೋವಿನ ಮಹತ್ವ ತಿಳಿಸುವಂತಾಗಬೇಕು* – *ಪ್ರದೀಪ್ ಸರಿಪಳ್ಳ*
ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಳ್ಳ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಹಿಂದೂ ಧರ್ಮದ ಸಂಸ್ಕೃತಿ,ಸಂಸ್ಕಾರ ,ಆಚರಣೆ ಗಳ ಬಗ್ಗೆ ಅಶಕ್ತಿ ಕಡಿಮೆಯಾಗುತ್ತಿದ್ದು,ಪ್ರತಿ ಮನೆಯಲ್ಲಿ ಹೆತ್ತವರು ಮಕ್ಕಳಿಗೆ ಸನಾತನ ಹಿಂದೂ ಧರ್ಮದ ಆಚಾರ ವಿಚಾರ ,ಸಂಸ್ಕೃತಿ ಸಂಸ್ಕಾರವನ್ನು ಮಕ್ಕಳಿಗೆ ಹೇಳುವುದರ ಜೊತೆಗೆ ಗೋವಿನ ಮಹತ್ವವನ್ನು ತಿಳಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

*ಗೋ ಪೂಜೆಯೊಂದಿಗೆ ಧರ್ಮಜಾಗೃತಿಗೊಳಿಸುವ ಕಾರ್ಯ- ಭಾಸ್ಕರ ಬಲ್ಯಾಯ*
ಗೋಪೂಜಾ ಸಮಿತಿ ಕಾವು ಇದರ ಗೌರವಾದ್ಯಕ್ಷರಾದ ಭಾಸ್ಕರ ಬಲ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸನಾತನ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಯ ಪ್ರಕಾರ 33 ಕೋಟಿ ದೇವತೆಗಳನ್ನು ನೆಲೆಸಿರುವ ಗೋವು ಹಿಂದೂ ಧರ್ಮದ ಆರಾಧನಾ ಶಕ್ತಿಯಾಗಿದೆ, ಜನರಲ್ಲಿ ಗೋಪೂಜೆಯ ಮಹತ್ವ ಹಾಗೂ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಮಿತಿಯ ವತಿಯಿಂದ ನಡೆಯುತ್ತಿದೆ ಎಂದರು.
*ಗೋವಿನ ಮಹತ್ವ ತಿಳಿಸುವ ಕಾರ್ಯ*- *ನಹುಷಾ ಭಟ್ ಪಳನೀರು*
ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಗೋಪೂಜೆ ಸಮಿತಿ ಕಾವು ಇದರ ಅಧ್ಯಕ್ಷರಾದ ನಹುಷಾ ಭಟ್ ಪಳನೀರು ಮಾತನಾಡಿ ಭಾರತ ದೇಶವು ಕೃಷಿ ಸಂಪತ್ತುಭರಿತ ದೇಶವಾಗ ಬೇಕಾದರೆ ಗೋವಿನ ಪಾತ್ರ ಮಹತ್ವವಾದದ್ದು, ಸನಾತನ ಹಿಂದೂ ಧರ್ಮದಲ್ಲಿ ಗೋವುಗೆ ಪೂಜ್ಯನೀಯ ಸ್ಥಾನವಿದ್ದು ಹೀಗಾಗಿ ವರ್ಷಕೊಮ್ಮೆ ಸಾಮೂಹಿಕ ಗೋಪೂಜೆ ನಡೆಸುವುದರ ಮೂಲಕ ಗೋವಿನ ಮಹತ್ವ ತಿಳಿಸುವ ಕಾರ್ಯ ಸುಮಾರು 12 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಗೋಪೂಜೆ ಸಮಿತಿ ಕಾವು ಇದರ ವತಿಯಿಂದ ನಡೆಯುತ್ತಿದೆ.ಮುಂದೆಯೂ ಕಾರ್ಯಕ್ರಮದ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಕಾವು ಬಜರಂಗದಳ ಸಂಚಾಲಕ ಕಿರಣ್ ಕಾವು,ಗೋರಕ್ಷ ಪ್ರಮುಖ್ ವಿಶ್ವನಾಥ ಬಾಳೆಕೊಚ್ಚಿ ಉಪಸ್ಥಿತರಿದ್ದರು
*ಭಜನಾ ಕಾರ್ಯಕ್ರಮ*
ಗೋಪೂಜಾ ಕಾರ್ಯಕ್ರಮದಲ್ಲಿ ಪಂಚಲಿಂಗೇಶ್ವರ ಭಜನಾ ತಂಡ, ಓಂ ಶಕ್ತಿ ಭಜನಾ ತಂಡ ಪಳನೀರು, ದುರ್ಗಾವಾಹಿನಿ ಭಜನಾ ತಂಡ ಮಾಣಿಯಡ್ಕ ಇವರುಗಳಿಂದ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆ ನಡೆಯಿತು.
ಅತಿಥಿಗಳನ್ನು ಸೀತಾರಾಮ ಬಾಳೆಕೊಚ್ಚಿ, ಜಯರಾಮ ಪೂವಂದುರು,ಹರೀಶ್ ಎ ಕೆ,ಮಾಡನ್ನೂರು, ,ಉದಿತ್ ಮಾಣಿಯಡ್ಕ, ಪ್ರಜ್ವಲ್ ಕೆರೆಮಾರು,ಅವಿನ್ ಮಾಣಿಯಡ್ಕ ಶಾಲು ಹಾಕಿ ಗೌರವಿಸಿದರು
ಕಾರ್ಯಕ್ರಮದಲ್ಲಿ , ಗೋಪೂಜಾ ಸಮಿತಿ ಗೌರವಾಧ್ಯಕ್ಷರು ಭಾಸ್ಕರ ಬಲ್ಯಾಯ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾಣಿಯಡ್ಕ ವಂದಿಸಿದರು ಪುತ್ತೂರು ಪ್ರಖಂಡ ಬಜರಂಗಳ ಗ್ರಾಮಾಂತರ ಸ0ಯೋಜಕರು ವಿಶಾಖ್ ಸಹಿಹಿತ್ಳು ಕಾರ್ಯಕ್ರಮ ನಿರ್ವಹಿಸಿದರು