Wednesday, January 22, 2025
ಸುದ್ದಿ

ಹಿಂದವಿ ಶಾಖೆ ಬಲ್ನಾಡು ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಬಲ್ನಾಡು ವತಿಯಿಂದ ದೀಪಾವಳಿ ಉತ್ಸವ ಹಾಗೂ ಗೋಪೂಜಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಹಿಂದವಿ ಶಾಖೆ ಬಲ್ನಾಡು ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ಬಲ್ನಾಡು ವತಿಯಿಂದ ವಿನಾಯಕ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಬಲ್ನಾಡು ಇದರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಉತ್ಸವ ಹಾಗೂ ಗೋಪೂಜಾ ಕಾರ್ಯಕ್ರಮ ನಡೆಯಿತು.

ಕಾರ್ಯಕರ್ತರು ಹಾಗೂ ಊರಿನ ಹಿರಿಯರ ಉಪಸ್ಥಿತಿಯಲ್ಲಿ ಭಾರತಮಾತೆಗೆ ಹಣತೆಗಳನ್ನು ಬೆಳಗಿ ಸಂಭ್ರಮದಿಂದ ದೀಪಾವಳಿ ಉತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಪೂರ್ಣಿಮಾ ಚೆನ್ನಪ್ಪ ಗೌಡ, ಪುತ್ತೂರು ಟೌನ್ ಬ್ಯಾಂಕ್ ನ ನಿರ್ದೇಶಕ ಕಿರಣ್ ಕುಮಾರ್ ರೈ, ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.) ನ ಅಧ್ಯಕ್ಷ ಗಿರೀಶ್ ಕಂಟ್ರಾಣಿಮೂಲೆ, ಕಾರ್ಯದರ್ಶಿ ದೀಪಕ್ ಕೊಪ್ಪಳ, ಬಲ್ನಾಡು ಸರಕಾರಿ ಆರೋಗ್ಯ ಸಹಾಯಕಿ ಜಯಶ್ರೀ ಪಿ., ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ.)ನ ಸರ್ವ ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು