Recent Posts

Monday, January 20, 2025
ಸುದ್ದಿ

ಮನೆಯೊಳಗೆ ಬಂದ ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಉರಗ ತಜ್ಞರು – ಕಹಳೆ ನ್ಯೂಸ್

ಚಿಕ್ಕಮಗಳೂರು: ಎರಡು ದಿನಗಳಿಂದ ಮನೆಯೊಳಗೆ ಅವಿತು ಕುಳಿತಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಪ್ರಶಾಂತ್ ಎಂಬುವರ ಮನೆಯ ಆವರಣದಲ್ಲಿ ಎರಡು ದಿನಗಳಿಂದ ಕಾಳಿಂಗ ಸರ್ಪ ಬೀಡುಬಿಟ್ಟಿತ್ತು. ಸರ್ಪಗಳು ಒಂದೇ ಜಾಗದಲ್ಲಿ ಇರೋದಿಲ್ಲ. ಹೋಗುತ್ತೆ ಎಂದು ಪ್ರಶಾಂತ್ ಮನೆಯವ್ರು ಕೂಡ ಸುಮ್ಮನಾಗಿದ್ರು. ಆದ್ರೆ, ಎರಡು ದಿನವಾದ್ರು ಕಾಳಿಂಗ ಜಾಗ ಖಾಲಿ ಮಾಡದ ಹಿನ್ನೆಲೆ ಪ್ರಶಾಂತ್ ಉರಗ ತಜ್ಞ ಹರೀಂದ್ರರವರಿಗೆ ವಿಷಯ ಮುಟ್ಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಬಂದ ಹರೀಂದ್ರ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ, ಗಿಡಘಂಟೆ ಹಾಗೂ ಪೈಪ್ ಒಳಗೆ ಹೋಗಲು ಯತ್ನಿಸುತ್ತಿದ್ದ ಕಾಳಿಂಗನನ್ನ ಒಂದು ಗಂಟೆಗಳ ನಿರಂತರ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದು, ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ. ಬೃಹತ್ ಕಾಳಿಂಗನನ್ನ ಕಂಡ ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ.