Tuesday, January 21, 2025
ಸುದ್ದಿ

ಹಿರಿಯ ನಟಿ ಲೀಲಾವತಿ ಆರೋಗ್ಯ ಗಂಭೀರ : ಆರೋಗ್ಯ ವಿಚಾರಿಸಿದ ಚಿತ್ರತಂಡ – ಕಹಳೆ ನ್ಯೂಸ್

ನೆಲಮಂಗಲ: ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ. ನೆಲಮಂಗಲದ ಬಳಿ ಇರುವ ಲೀಲಾವತಿ ಅವರ ನಿವಾಸಕ್ಕೆ ನಟ ದರ್ಶನ್ ಮತ್ತು ನಟ ಅಭಿಷೇಕ್ ಅಂಬರೀಶ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಲೀಲಾವತಿ ಅವರಿಗೆ ಈಗ ಮಾತನಾಡಲೂ ಕಷ್ಟವಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚಿತ್ರರಂಗದ ಹಿರಿಯರು ಒಬ್ಬರ ಹಿಂದೊಬ್ಬರಂತೆ ಆಗಮಿಸಿ ಪುತ್ರ ವಿನೋದ್ ರಾಜ್ ಗೆ ಧೈರ್ಯ ತುಂಬುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು