Monday, January 20, 2025
ಸುದ್ದಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಉಡುಪಿ ಘಟಕದ ಅಧ್ಯಕ್ಷರಾಗಿ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ – ಕಹಳೆ ನ್ಯೂಸ್

ಉಡುಪಿ:  ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ನಾ.25ರಂದು  ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಉಡುಪಿಯ ಪುರುಷೋತ್ತಮ ಶೆಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಟಿ.
ಶಂಭು ಶೆಟ್ಟಿ, ಸುಧಾಕರ ಆಚಾರ್ಯರ ನೇತೃತ್ವದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಟ್ರಸ್ಟ್ನ 40ನೇ ನೂತನ ಉಡುಪಿ ಘಟಕದ ಅಧ್ಯಕ್ಷರನ್ನಾಗಿ ‘ಸಹಕಾರಿ ರತ್ನ’, ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರನ್ನು ಒಮ್ಮತದೊಂದಿಗೆ ಆಯ್ಕೆ ಮಾಡಲಾಯಿತು. ಶ್ರೀಯುತರು ಹಿರಿಯ ಯಕ್ಷಗಾನ ಸಂಸ್ಥೆ, ‘ಯಕ್ಷಗಾನ ಕಲಾಕ್ಷೇತ್ರ’ ಗುಂಡಿಬೈಲು, ಉಡುಪಿಯ ಗೌರವಾಧ್ಯಕ್ಷರಾಗಿ ಹಾಗೂ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ
ಗುರುತಿಸಿಕೊಂಡಿದ್ದಾರೆ.


ಉಡುಪಿ ಘಟಕದ ಗೌರವಾಧ್ಯಕ್ಷರಾಗಿ ಉಜ್ವಲ್ ಡೆವಲರ‍್ಸ್ನ ಪುರುಷೋತ್ತಮ ಶೆಟ್ಟಿ, ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಕೆ. ದಿವಾಕರ ಶೆಟ್ಟಿ ತೋಟದ ಮನೆ, ಉಪಾಧ್ಯಕ್ಷರಾಗಿ ಡಾ. ಸುನೀಲ್ ಮುಂಡ್ಕೂರು, ಅಜಯ ಪಿ. ಶೆಟ್ಟಿ, ಆನಂದ ಮಡಿವಾಳ, ಸಚಿನ್ ಶೆಟ್ಟಿ, ಡಾ. ಸಾಯಿ ಗಣೇಶ್, ಕಾರ್ಯದರ್ಶಿಗಳಾಗಿ ಡಾ. ಹರೀಶ್ ಜೋಷಿ ವಿಟ್ಲ, ಜೊತೆ ಕಾರ್ಯದರ್ಶಿಗಳಾಗಿ ಶ್ರೀಗಳಾದ ರತನ್ ರಾಜ್ ರೈ ಮಣಿಪಾಲ, ಮಹೇಂದ್ರ ಆಚಾರ್ಯ ಹೆರಂಜೆ, ಸತ್ರಾಜಿತ ಭಾರ್ಗವ್, ಕಾರ್ತಿಕ್ ಎಸ್. ರಾವ್, ಹರ್ಷಿತ್
ಜೋಷಿ ಮಣಿಪಾಲ, ಚಿರಾಗ್ ಹೆಗ್ಡೆ ಬೈಲೂರು, ಖಜಾಂಚಿಯಾಗಿ, ಮನೋಹರ ಶೆಟ್ಟಿ ತೋನ್ಸೆಯವರನ್ನು ಆರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೌರವ ಮಾರ್ಗದರ್ಶಕರು- ಶ್ರೀಗಳಾದ ಟಿ. ಶಂಭು ಶೆಟ್ಟಿ, ಎಂ.ಎಲ್. ಸಾಮಗ, ಭುವನಪ್ರಸಾದ್ ಹೆಗ್ಡೆ, ವಿಷ್ಣುಮೂರ್ತಿ ಆಚಾರ್ಯ, ಪವನ್ ಕಿರಣಕೆರೆ, ವಿಶ್ವನಾಥ ಶೆಣೈ, ತಲ್ಲೂರು ಶಿವರಾಮ ಶೆಟ್ಟಿ, ಮನೋಹರ ಶೆಟ್ಟಿ ಕಾಪು, ಮಟ್ಟಾರು ರತ್ನಾಕರ ಹೆಗ್ಡೆ, ಎಂ. ಶಶೀಂದ್ರ ರಾವ್, ಎರ್ಮಾಳ್ ಶಶಿಧರ ಶೆಟ್ಟಿ, ಪಳ್ಳಿ ಕಿಶನ್ ಹೆಗ್ಡೆ, ಪಿ. ನಟರಾಜ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಕಿದಿಯೂರು, ಮಹೇಶ್ ಠಾಕೂರ್, ಇಂದ್ರಾಳಿ ರತ್ನಾಕರ
ಶೆಟ್ಟಿಗಾರ್, ಶ್ರೀನಾಗೇಶ್ ಹೆಗ್ಡೆ, ವೇಣೂಧರ ಶೆಟ್ಟಿ, ಉದಯಕುಮಾರ್ ಶೆಟ್ಟಿ ಎಸ್.ವಿ. ಮಣಿಪಾಲ, ಎಂ. ಡಿ. ಗಣೇಶ್, ರಾಧಾಕೃಷ್ಣ ಮಲ್ಪೆ, ಸಂತೋಷ್ ಕುಮಾರ್ ಶೆಟ್ಟಿ ತೆಂಕರಬೈಲು, ನಾಗರಾಜ ಐತಾಳ್, ಈಶ್ವರ ಶೆಟ್ಟಿ ಚಿಟ್ಪಾಡಿ, ಮೋಹನ ಶೆಟ್ಟಿ ನಿಡಂಬೂರು, ಉದಯ ಕುಮಾರ್ ಶೆಟ್ಟಿ, ಉಮೇಶ್ ಆನಂದ ರಾವ್, ಎಂ.ಎಸ್.
ವಿಷ್ಣು ಭಟ್, ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ, ಸತೀಶ್ ಕುಮಾರ್ ಶೆಟ್ಟಿ ಕೆಮ್ಮಣ್ಣು, ಸುಧಾಕರ ಆಚಾರ್ಯ ಉಡುಪಿ, ವಸುಧರ್, ಗುರುರಾಜ್ ಕೋಟ್ಯಾನ್, ಕಿಶೋರ್ ಸಿ, ಉದ್ಯಾವರ, ರತ್ನಾಕರ ಕಲ್ಯಾಣಿ, ಜಯಕರ ಆಚಾರ್ಯ ಬೈಲೂರು, ತ್ರಿಲೋಚನ ಶಾಸ್ತ್ರೀ  ಟ್ರಸ್ಟ್ನ ಮಹಿಳಾ ಘಟಕದ ಚಿಂತನೆ: ಇದೇ ಸಂದರ್ಭದಲ್ಲಿ ಉಡುಪಿಯ ಟ್ರಸ್ಟ್ನ ಮಹಿಳಾ ಘಟಕ ಆರಂಭಕ್ಕೆ ಚಿಂತನೆಯನ್ನು ನಡೆಸಲಾಯಿತು. ಸಭೆಯಲ್ಲಿ ಕಲಾವಿಮರ್ಶಕಿ ಪ್ರತಿಭಾ ಎಂ.ಎಲ್. ಸಾಮಗ, ಪೂರ್ಣಿಮಾ
ಸುರೇಶ್ ನಾಯಕ್, ಅಮಿತಾ ಸುಧಾಕರ ಆಚಾರ್ಯ, ತಾರಾ ಆಚಾರ್ಯ, ಪದ್ಮಲತಾ ವಿಷ್ಣು, ಸುಮಿತ್ರ ಕೆರೆಮಠ, ಅಮಿತಾ ಕ್ರಮಧಾರಿ, ಪ್ರಭಾವತಿ ವಿಶ್ವನಾಥ್, ಅಮಿತಾ ಗಿರೀಶ್, ವಿದ್ಯಾಸರಸ್ವತಿ, ಸರೋಜಾ ಶೆಣೈ, ಸರೋಜಾ ಯಶವಂತ್, ಶ್ವೇತಾ ಶೆಟ್ಟಿಯವರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ಕ್ಷೇತ್ರದ ಸಮಾಜದ ಗಣ್ಯರನ್ನು ಯಕ್ಷಗಾನ ಅಭಿಮಾನಿಗಳನ್ನು ಸದಸ್ಯರನ್ನಾಗಿ ಸೇರಿಸಿಕೊಂಡು ಮುಂದುವರಿಸುವ ಧ್ಯೇಯವನ್ನು ಈ ಟ್ರಸ್ಟ್ ಹೊಂದಿದೆ.