Recent Posts

Monday, January 20, 2025
ಸುದ್ದಿ

ವಾಹನಗಳಿಗೆ ಪ್ಯಾನಿಕ್ ಬಟನ್ ಎಲ್ ವಿಟಿ ಕಡ್ಡಾಯಕ್ಕೆ ಆದೇಶ: ಡಿ.1ರಿಂದ ಅನ್ವಯ, ಒಂದು ವರ್ಷದ ಗಡುವು– ಕಹಳೆ ನ್ಯೂಸ್

ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಆಕೆ ಷನ್‌ ಟ್ರಾಯಕಿಂಗ್‌ ಡಿವೈಸ್ (ವಿಎಲ್‌) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಡಿ.1ರಿಂದ ಆದೇಶ ಅನ್ವಯ ವಾಗಲಿದ್ದು, ಒಂದು ವರ್ಷದ ಅವಧಿಯೊಳಗೆ ಅಳವಡಿಸಿಕೊಳ್ಳುವಂತೆ ಗಡುವು ನೀಡಲಾಗಿದೆ.

ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಜಿಪಿಎಸ್ ಟ್ರಾಯಕಿಂಗ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಬೇಕಿದ್ದು, 2024ರ ನ. 30ರವರೆಗೆ ಅವಕಾಶ ನೀಡಲಾಗಿದೆ. ವಿಎಲ್‌ಟಿ ವಿತ್ ಪ್ಯಾನಿಕ್ ಬಟನ್ ಬೆಲೆ 7,599 ರೂ. (ಜಿಎಸ್‌ಟಿ ಹೊರತು) ಯೆಲ್ಲೋ ಬೋರ್ಡ್‌ನ ಟ್ಯಾಕ್ಸಿಗಳು, ಕ್ಯಾಬ್‌ಗಳು, ಖಾಸಗಿ ಬಸ್‌ಗಳು, ನ್ಯಾಷನಲ್ ಪರ್ಮಿಟ್ ಹೊಂದಿರುವ ಗೂಡ್ಸ್ ವಾಹನಗಳಿಗೆ ಅನ್ವಯ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಎಲ್‌ಟಿ ಮಾನಿಟರಿಂಗ್ ನಕ್ಷೆಯಲ್ಲಿ ವಾಹನಗಳ ನೈಜ-ಸಮಯದ ಟ್ರಾಯಕಿಂಗ್ ಮಾಡಲಾಗುತ್ತದೆ. ವಾಹನ ಎಲ್ಲಿದೆ? ಯಾವ ಮಾರ್ಗದಲ್ಲಿ ಪ್ರಯಾಣಿಸುತ್ತಿದೆ. ಮಾರ್ಗ ಬದಲಾವಣೆ ಸೇರಿ ಎಲ್ಲ ಮಾಹಿತಿ ಲಭ್ಯವಾಗಲಿದೆ. ಅತಿವೇಗ, ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧ ಎಚ್ಚರಿಕೆ ಕೊಡಲಿದೆ. ವಾಹನದಲ್ಲಿ ಪ್ರಯಾಣಿಸುವ ತುರ್ತು ಪರಿಸ್ಥಿತಿ ಎದುರಾದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್‌ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಕಮಾಂಡ್ ಸೆಂಟರ್ ತಕ್ಷಣ ಸ್ಪಂದಸಲಿದ್ದು, ಸ್ಥಳೀಯ ಪೊಲೀಸರಿಗೆ ತಿಳಿಸಿ, ನೆರವಿಗೆ ಧಾವಿಸುವಂತೆ ಸೂಚಿಸಬಹುದು

ಜಾಹೀರಾತು
ಜಾಹೀರಾತು
ಜಾಹೀರಾತು