Recent Posts

Monday, January 20, 2025
ಸುದ್ದಿ

ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದ ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯ ಅವರ ಕೋಣಗಳು – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯ ಅವರ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆಯಿತು.

ಪರಂಬೇರಿನ ‘ಗುಂಡ’ ಮತ್ತು ಬಿಳಿಯೂರು ‘ದಾಸ’ ಮಹಾರಾಜಕರೆಯಲ್ಲಿ ಜಯಗಳಿಸಿತು. ಧನಂಜಯ ಗೌಡ ಸರಪಾಡಿ ಕೋಣಗಳನ್ನು ಓಡಿಸಿದರು. ಜಯಗಳಿಸುತ್ತಿದ್ದಂತೆಯೇ ಜಯಘೋಷಗಳು ಮೊಳಗಿದವು. ಕೋಣಗಳ ಜತೆಗೆ ಬಂದಿದ್ದವರು ಕುಣಿದು ಸಂಭ್ರಮಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫೈನಲ್ ಗೆದ್ದ ನಾರಾಯಣ ಮಲೆಕುಡಿಯ ಅವರ ಕೋಣವು ಒಂದು ಲಕ್ಷ ನಗದು 16 ಗ್ರಾಂ ಚಿನ್ನ ಮತ್ತು ಟ್ರೋಫಿ ಗೆದ್ದಿದೆ. ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಸಹಿತ ವಿವಿಧ ಗಣ್ಯರು ಬಹುಮಾನ ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೆಮಿಫೈನಲ್‍ನಲ್ಲಿ ಬೋಳದಗುತ್ತು ಮತ್ತು ನಾರಾಯಣ ಮಲೆಕುಡಿಯರ ಕೋಣಗಳ ನಡುವೆ ಸ್ಪರ್ಧೆ ನಡೆಯಿತು. ನಂತರ ರೋಚಕ ಫೈನಲ್‍ನಲ್ಲಿ ಮಹರಾಜಕರೆಯಲ್ಲಿ ಪರಂಬೇರು ನಾರಾಯಣ ಮಲೆಕುಡಿಯ ಅವರ ಕೋಣಗಳು ಮಹರಾಜ ಕರೆಯಲ್ಲಿ ಓಡಿ ಫೈನಲ್ ಗೆದ್ದಿತು.
ಈ ಕೋಣಗಳ ಪ್ರಾಯೋಜಕತ್ವವನ್ನು ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಅವರು ವಹಿಸಿದ್ದರು.