Recent Posts

Sunday, January 19, 2025
ಸುದ್ದಿ

ಡಿ.1 ರಂದು ಬಹುನಿರೀಕ್ಷಿತ ತುಳು ಸಿನೆಮಾ “ರಾಪಟ” ಕರಾವಳಿಯಾದ್ಯಂತ ಬಿಡುಗಡೆ – ಕಹಳೆ ನ್ಯೂಸ್

ಕೋಸ್ಟಲ್ ವುಡ್‌ನ ಬಹುನಿರೀಕ್ಷಿತ ಸಿನಿಮಾ “ರಾಪಟ” ಇದೇ ಡಿ.1 ರಂದು ಅದ್ದೂರಿಯಾಗಿ ಕರಾಳಿಯಾದ್ಯಂತ ತರೆಕಾಣಲಿದೆ. ಈಗಾಗಲೇ ಗಲ್ಫ್ ರಾಷ್ಟ್ರಗಳಲ್ಲಿ ಪ್ರೀಮಿಯರ್ ಶೋ ನ ಮೂಲಕ ತನ್ನದೇ ಚಾಪು ಮೂಡಿಸಿದ ಈ ಸಿನೆಮಾ ಇನ್ನೇನು ಎರಡು ದಿವಸದಲ್ಲಿ ಈ ಸಿನೆಮಾ ಕರಾವಳಿಯ ಮಲ್ಟಿಫ್ಲೆಕ್ಸ್ ಸಿಂಗಲ್ ಥಿಯೇಟರ್‌ಗಳಲ್ಲಿ ಅದ್ದೂರಿ ಬಿಡುಗಡೆಗೆ ಸಜ್ಜಾಗಿದೆ.

ಬೊಳ್ಳಿ ಮೂವೀಸ್ ಹಾಗೂ ಅವಿಕ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಈ ಹಾಸ್ಯ ಪ್ರಧಾನ ಚಿತ್ರವಾದ “ರಾಪಟ” ವನ್ನು ವೀಕ್ಷೀಸಲು ಈಗಾಗಲೇ ಸಿನಿ ಪ್ರೇಮಿಗಳಿಗೆ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭಗೊoಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರದಲ್ಲಿ ತುಳು ಚಿತ್ರ ರಂಗದ ದಿಗ್ಗಜರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿ ಕೃಷ್ಣ ಕುಡ್ಲ, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ ಮುಂತಾದವರು ನಟಿಸಿದ್ದು, ಅನೂಪ್ ಸಾಗರ್ ನಾಯಕ ನಟನಾಗಿ ಹಾಗೂ ನಿರೀಕ್ಷ ಶೆಟ್ಟಿ ನಾಯಕಿಯ ಪಾತ್ರದಲ್ಲಿದ್ದಾರೆ. ನಿರ್ಮಾಪಕರಾಗಿ ಸಂತೋಷ್ ಸುವರ್ಣ, ಸೂರ್ಯಕಾಂತ್ ಸುವರ್ಣ, ರಾಜನ್ ರಾಕೇಶ್ ಶೆಟ್ಟಿ, ಆಶಿಕಾ ಸುವರ್ಣ, ದೇವಿಕಾ ಆಚಾರ್ಯ, ಶೈಲ ರಾಜ್ ಪೂಜಾರಿ, ಅಭಿ ಶೆಟ್ಟಿ, ಮನೋಜ್ ಶೆಟ್ಟಿ, ಯಕ್ಷಿತ್ ಶೆಟ್ಟಿ, ಮಧು ಕುಮಾರ್ ಕಾರ್ಯನಿರ್ವಹಿಸಿದ್ದಾರೆ. ಒಟ್ಟಿನಲ್ಲಿ ರಾಪಟ ತುಳು ಸಿನಿಮಾ ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಸಿನಿ ಪ್ರೇಮಿಗಳನ್ನು ಮನರಂಜಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು