Sunday, November 24, 2024
ಸುದ್ದಿ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ – ಕಹಳೆ ನ್ಯೂಸ್

ಪುತ್ತೂರು : ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ 2023-24 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿದ ಸರಸ್ವತಿ ವಿದ್ಯಾಕೇಂದ್ರ ನರಿಮೊಗರು ಇದರ ಅಧ್ಯಕ್ಷರಾದ ಅವಿನಾಶ್ ಕೊಡಂಕಿರಿಯವರು ಇಂದಿನ ಯುವಜನತೆಯಲ್ಲಿ ಕ್ರೀಡಾಮನೋಭಾವ ಬೆಳೆದರೆ ಜೀವನದ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರು ಛಲಬಿಡದೆ ಸಾಧನೆ ಮಾಡಿ ಜೀವನವನ್ನು ರೂಪಿಸಿಕೊಳ್ಳುತ್ತಾರೆ.ಇಂತಹ ಸುದೃಢ ಮನಸ್ಸಿನ ನಾಗರಿಕರೇ ಸ್ವಸ್ಥ ಸಮಾಜದ ರೂವಾರಿಗಳು.ಅದಕ್ಕಾಗಿ ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರಬೇಕು ಎಂದು ತಿಳಿಸಿದರು.


ಕ್ರಮಬದ್ಧವಾದ ರೀತಿಯಲ್ಲಿ ಜೀವನವನ್ನು ಕಾಪಾಡಿಕೊಳ್ಳಲು ನಮ್ಮ ದೇಹವು ಬಹಳ ಮುಖ್ಯವಾದಂತೆಯೇ ನಮ್ಮ ದೇಹದ ಸಂಪೂರ್ಣ ಬೆಳವಣಿಗೆಗೆ ವ್ಯಾಯಾಮವೂ ಬಹಳ ಮುಖ್ಯ.ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ದೇಹವು ಉತ್ತಮ ವ್ಯಾಯಾಮವನ್ನು ಪಡೆಯುತ್ತದೆ.ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಇದು ಬಹಳ ಮುಖ್ಯವಾಗಿದೆ. ದೈಹಿಕ ವ್ಯಾಯಾಮವು ಸ್ವಯಂ ಶಿಸ್ತು ,ಇತರರಿಗೆ ಗೌರವ ಅಥವಾ ನಾಯಕತ್ವದ ಕೌಶಲ್ಯಗಳಂತಹ ಅಗತ್ಯ ಮೌಲ್ಯಗಳ ಮತ್ತೊಂದು ಸರಣಿಯನ್ನು ಉತ್ತೇಜಿಸುತ್ತದೆ.ತಂಡದಲ್ಲಿ ಕೆಲಸ ಮಾಡುವ ಒಂದು ಉತ್ತಮ ಅವಕಾಶವನ್ನು ಕ್ರೀಡೆಯು ಒದಗಿಸುತ್ತದೆ.ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳ ವಿವಿಧ ತಂಡಗಳ ಶಿಸ್ತುಬದ್ಧ ಪಥಸಂಚಲನ ನಡೆಯಿತು.ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲಾ ,ರಾಜ್ಯ ಮತ್ತು ರಾಷ್ಟçಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಾದ ದ್ವಿತೀಯ ವಿಜ್ಞಾನ ವಿಭಾಗದ ಮನೀಶಾ , ದ್ವಿತೀಯ ವಾಣಿಜ್ಯ ವಿಭಾಗದ ಯಶಸ್ವಿನಿ , ಪ್ರಥಮ ವಿಜ್ಞಾನ ವಿಭಾಗದ ಶಿವಕುಮಾರ್,ಅಮಿತ್,ಸಿಂಚನಾ ಬಿ. ಇವರು ಕ್ರೀಡಾಜ್ಯೋತಿಯನ್ನು ತರುವುದರ ಮೂಲಕ ಕರ‍್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥಸಂಚಲನ ಕರ‍್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.

ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಸರ‍್ಯನಾಥ ಆಳ್ವ ರವರು ಮಾತನಾಡುತ್ತಾ “ವಿದ್ಯಾರ್ಥಿಗಳಲ್ಲಿ ಕ್ರೀಡೆಯು ಸ್ನೇಹ ಮತ್ತು ಒಗ್ಗಟ್ಟಿನ ಭಾವನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸದ ಜೊತೆಗೆ ಸುಧಾರಣೆ,ಸಾಧನೆ ಮತ್ತು ವೈಯಕ್ತಿಕ ಪ್ರಗತಿಯ ಭಾವನೆಗಳನ್ನು ಬೆಳೆಯುವುದರಿಂದ ಉತ್ತಮ ಮತ್ತು ಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗುತ್ತದೆ.“ಎಂದು ಹೇಳಿದರು.
ಈ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಮನೋಹರ್ ಎನ್., ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕು. ಶ್ರದ್ಧಾ ರವರು ಸಹಕರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ,ಉಪನ್ಯಾಸಕರಾದ ಶ್ರೀಮತಿ ಶರಣ್ಯಾ ವಂದಿಸಿದರು. ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಕು. ಅಗಮ್ಯ ಕರ‍್ಯಕ್ರಮ ನಿರೂಪಿಸಿದರು.