Monday, November 25, 2024
ಸುದ್ದಿ

ಕಸದಿಂದ ರಸ ಎಂಬ ಮಾತಿ ನಂತೆ ನೋಯ್ಡಾ ನಗರದ ಪಾದಚಾರಿ ಮಾರ್ಗಗಳಿಗೆ ತ್ಯಾಜ್ಯ ವಸ್ತುಗಳಿಂದ ಮಾಡಿದ ಟೈಲ್ಸ್ ಬಳಕೆ! – ಕಹಳೆ ನ್ಯೂಸ್

ವಿವಿಧ ರೀತಿಯ ತ್ಯಾಜ್ಯ ವಸ್ತುಗಳಿಂದ ಮಾಡಲಾದ ಹಾಗೂ ಪುನರ್ ಬಳಕೆ ಮಾಡಬಹುದಾದ ಟೈಲ್ಸ್ಗಳನ್ನು ಪಾದಚಾರಿ ಮಾರ್ಗಗಳಲ್ಲಿ ಬಳಸಲು ಗ್ರೇಟರ್ ನೋಯ್ದ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಇದಕ್ಕಾಗಿ ಕೇಂದ್ರ ಸರ್ಕಾರದ ರಸ್ತೆ ಸಂಶೋಧನಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

‘ಈ ರೀತಿ ತ್ಯಾಜ್ಯ ವಸ್ತುಗಳಿಂದ ಪಾದಚಾರಿ ಮಾರ್ಗದ ಪೇವರ್ ಬ್ಲಾಕ್ ಟೈಲ್ಸ್ಗಳನ್ನು ನಗರದ ಪಾದಚಾರಿ ಮಾರ್ಗಗಳಿಗೆ ಬಳಸುತ್ತಿರುವುದು ದೇಶದಲ್ಲಿಯೇ ನೋಯ್ಡಾ ನಗರ ಮೊದಲನೇಯದ್ದು’ ಎಂದು GNIDA ಹೇಳಿದೆ.

‘ಸುಂದರ ರಸ್ತೆಗಳು ನೋಯ್ದಾ ನಗರದ ಹೆಗ್ಗುರುತುಗಳು. ಇದಕ್ಕಾಗಿ ನಾವು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಲು ಮುಂದಾಗಿದ್ದೇವೆ. ರಸ್ತೆ ಸಂಶೋಧನಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಪಾಲಿಥಿನ್ ಮುಂತಾದ ತ್ಯಾಜ್ಯ ವಸ್ತುಗಳಿಂದ ಮಾಡಿದ ಮರುಬಳಕೆ ಮಾಡಬಹುದಾದ ಪೇವರ್ ಬ್ಲಾಕ್‌ಗಳನ್ನು ಪಾದಚಾರಿ ಮಾರ್ಗಗಳಿಗೆ ಬಳಸಲು ತೀರ್ಮಾನಿಸಲಾಗಿದೆ’ ಎಂದು ಉಓIಆಂ ಸಿಇಒ ಎನ್.ಜಿ ರವಿ ಕುಮಾರ್ ತಿಳಿಸಿದ್ದಾರೆ.

‘ರಸ್ತೆ ಸಂಶೋಧನಾ ಸಂಸ್ಥೆ ವತಿಯಿಂದ ಈ ಪೇವರ್ ಬ್ಲಾಕ್‌ಗಳು ತಯಾರಾಗುತ್ತವೆ. ಗುಣಮಟ್ಟವೂ ಉತ್ತಮವಾಗಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹವು’ ಎಂದು ರವಿ ಕುಮಾರ್ ಹೇಳಿದ್ದಾರೆ