ಸುಬ್ರಹ್ಮಣ್ಯ: ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಸ್ಟಾರ್ ಕ್ರೀಡಾಪಟು ಪೂವಮ್ಮ ಕುಕ್ಕೇ ಸುಬ್ರಮಣ್ಯದಲ್ಲಿ, ಸುಬ್ರಮಣ್ಯ ದೇವರಿಗೆ ಉರುಳು ಸೇವೆ ಸಮರ್ಪಣೆ ಮಾಡಿದರು.
ದೇವಳದ ಹೊರಾಂಗಣದಲ್ಲಿ ಉರುಳು ಸೇವೆ ಮಾಡಿದ ಬಳಿಕ ಶ್ರೀ ದೇವರ ದರುಶನ ಪಡೆದು ಶೇಷ ಸೇವೆ ನೆರವೇರಿಸಿದರು. ಶ್ರೀ ದೇವರ ದರುಶನದ ಬಳಿಕ ಶ್ರೀ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರುಶನ ಮಾಡಿದರು.
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದಪದಕ ಗೆದ್ದರೆ ಉರುಳು ಸೇವೆ ಸಲ್ಲಿಸುತ್ತೇನೆ ಎಂದು ಹರಕೆ ಹೇಳಿಕೊಂಡಿದ್ದೆ. ಅದರಂತೆ ದೇವರ ಆಶೀರ್ವಾದದಿಂದ ಚಿನ್ನ ಗೆಲ್ಲುವಂತಾಗಿದೆ. ಆದುದರಿಂದ ಕುಕ್ಕೆ ಕ್ಷೇತ್ರಕ್ಕೆ ಬಂದು ಶ್ರೀ ದೇವರ ಹರಕೆ ತೀರಿಸಿದ್ದೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪೂವಮ್ಮ ನುಡಿದರು.