Recent Posts

Sunday, January 19, 2025
ಸುದ್ದಿ

ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಡಿ.24-25 ರಂದು ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಡಿ.24-25 ರಂದು ಪ್ರಪ್ರಥಮ ಬಾರಿಗೆ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸನಾತನ ಸಮಾಗಮದ ಆಮಂತ್ರಣ ಪತ್ರಿಕೆ ಬಿಡುಗಡೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.29ರಂದು ಬೆಳಿಗ್ಗೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನ ಅರ್ಚಕರಾದ ವಿಎಸ್ ಭಟ್ ಪ್ರಾರ್ಥನೆ ನೆರವೇರಿಸಿದರು. ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅರುಣ್ ಕುಮಾರ್ ಪುತ್ತಿಲ, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಶಾಂಕ್ ಕೋಟೇಚಾ, ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಸ್ವಾಗತ ಸಮಿತಿ ಅಧ್ಯಕ್ಷರು ಕಿರಣ್ ಗೌಡ, ಉಪಾಧ್ಯಕ್ಷರುಗಳಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷ್ಣ ಪ್ರಸಾದ್ ಶೆಟ್ಟಿ,ಸ್ವಾಗತ ಸಮಿತಿ ಸಂಚಾಲಕರಾದ ಗಣೇಶ್ ಭಟ್ ಮಕರಂದ, ಮಹಿಳಾ ಘಟಕದ ಅಧ್ಯಕ್ಷರಾದ ಮಲ್ಲಿಕಾ ಪ್ರಸಾದ್, ಜಯಲಕ್ಷ್ಮೀ, ಅಶ್ವಿನಿ ಸಂಪ್ಯ, ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ರವಿ ರೈ ಕೆದಂಬಾಡಿ ಮಠ, ಆರ್ಯಾಪು ಗ್ರಾ ಪಂ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ, ದಿನೇಶ್ ಅಡ್ಕಾರ್, ಸುಧಾಕರ್ ಸುಳ್ಯ, ಗೋಪಾಲಕೃಷ್ಣ ಭಟ್,ಮಹೇಂದ್ರ ವರ್ಮ, ಲಕ್ಷ್ಮಣ ಬೈಲಾಡಿ, ಪ್ರಶಾಂತ್ ನೆಕ್ಕಿಲಾಡಿ , ಚಿನ್ಮಯ್ ರೈ ಈಶ್ವರಮಂಗಲ,ಗೀತೇಶ್ ರ್,ಚಂದ್ರಹಾಸ ಈಶ್ವರಮಂಗಲ, ಕಿಶೋರ್ ಜೋಗಿ, ಮಹೇಂದ್ರ ವರ್ಮ, ಅರುಣ್ ಭಟ್, ರಾಜೇಶ್ ಭಟ್ ಕುಳ, ರವಿಕೃಷ್ಣ ನಗರ, ಗೋಕುಲ್ ದಾಸ್ ಪ್ರಗತಿ, ಭೀಮಯ್ಯ ಭಟ್, ಪ್ರವೀಣ್ ಭಂಡಾರಿ, ಅನಿಲ್ ಮುಂಡೂರು, ಅಶೋಕ್ ಪುತ್ತಿಲ,ಪುರುಷೋತ್ತಮ ಕೋಲ್ಪೆ , ಜಯಪ್ರಕಾಶ್ , ರತ್ನಾಕರ್ ನಾಯಕ್ ಸಹಿತ ನೂರಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.