Recent Posts

Monday, January 20, 2025
ಸುದ್ದಿ

ನ.30ರಂದು ದಿ ವೆಬ್ ಪೀಪಲ್ ಹೊಸ ಡಿಜಿಟಲ್ ಮಾರ್ಕೆಟಿಂಗ್ ವಿಭಾಗ “ಸ್ಕೇಲ್” ನ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು : ವೆಬ್ ಡೆವಲಪ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಯೂಐ/ಯುಎಕ್ಸ್ ಡಿಜೈನ್ ಮತ್ತು ಗ್ರಾಫಿಕ್ ಡಿಜೈನ್ ನಲ್ಲಿ ಐದು ವರ್ಷಕ್ಕೂಹೆಚ್ಚಿನ ಅನುಭವವನ್ನು ಹೊಂದಿರುವ ಪ್ರಮುಖ ಸಾಫ್ಟ್‍ವೇರ್ ಅಭಿವೃದ್ಧಿ ಕಂಪನಿ ದಿ ವೆಬ್ ಪೀಪಲ್, ತಮ್ಮ ಹೊಸ ಡಿಜಿಟಲ್ ಮಾರ್ಕೆಟಿಂಗ್ ವಿಭಾಗ “ಸ್ಕೇಲ್” ನ.30ರಂದು ಜಿ ಎಲ್ ಟ್ರೇಡ್ ಸೆಂಟರ್ ನ ಮೂರನೇ ಮಹಡಿಯಲ್ಲಿ ವಿಧ್ಯುಕ್ತವಾಗಿ ಶುಭಾರಂಭಗೊಳ್ಳಲಿದೆ.

ಈ ಹೊಸ ಯೋಜನೆ ದಿ ವೆಬ್ ಪೀಪಲ್ ಅವರ ಸೇವಾ ವೈವಿಧ್ಯತೆಯಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆ ಆಗಿದ್ದು, ಅದು ವಿಶೇಷ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನು ನೀಡಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ ಕುಮಾರ್ ರೈ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಮುಳಿಯ ಸಮೂಹ ಸಂಸ್ಥೆಗಳ ಚೇರ್ಮನ್ ಶ್ರೀಕೇಶವ ಪ್ರಸಾದ್ ಮುಳಿಯ, ಜಿಎಲ್ ಸಮೂಹ ಸಂಸ್ಥೆ ಚೇರ್ಮನ್ ಬಲರಾಮ ಆಚಾರ್ಯ, ಜಪಾನೀಸ್ ಪಬ್ಲಿಕ್ ಉದ್ಯಮ ಇನೋಟೆಕ್ ನ ನಿರ್ವಹಣಾಧಿಕಾರಿ ಶ್ರೀಪ್ರಿಥ್ವಿ ಭಟ್, ಮಾಜಿ ಸೈನ್ಯಾಧಿಕಾರಿ ಹಾಗೂ ಉದ್ಯಮಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಎಸ್.ಡಿ.ಪಿ ರೆಮಿಡೀಸ್ ನ ಚೇರ್ಮನ್ ಡಾ. ಹರಿಕೃಷ್ಣ ಪಾಣಾಜೆ, ಯೂಆರ್ ಪ್ರಾಪರ್ಟೀಸ್ ಎಂಡಿ ಉಜ್ವಲ್ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಿ ವೆಬ್ ಪೀಪಲ್ ಇದರ ಸಿಇಒ ಆದಿತ್ಯ ಕಲ್ಲೂರಾಯ , “ಸ್ಕೇಲ್ ಎಂಬುದು ನಮ್ಮ ಸಂಸ್ಥೆಯ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳಲ್ಲಿನ ವ್ಯಾಪಕತೆ ಮತ್ತು ಸೃಜನಾತ್ಮಕತೆಯ ಹೊಸ ಅಧ್ಯಾಯವಾಗಿದೆ. ಸ್ಕೇಲ್ ಮೂಲಕ ನಾವು ನಮ್ಮ ಗ್ರಾಹಕರಿಗೆ ಇನ್ನಷ್ಟು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನು ನೀಡಲು ಸಜ್ಜಾಗಿದ್ದೇವೆ.”ಎಂದು ಹೇಳಿದರು.

“ಸ್ಕೇಲ್” ನ ಆರಂಭವು ನಮ್ಮ ಕ್ಲೈಂಟ್ ಗಳಿಗೆ ಇನ್ನಷ್ಟು ಉತ್ತಮ ಮತ್ತು ನವೀನ ಡಿಜಿಟಲ್ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡುವಲ್ಲಿ ಒಂದು ಪ್ರಮುಖ ಹೆಜ್ಜೆ. ನಾವು ಗ್ರಾಹಕರ ಅಗತ್ಯಗಳನ್ನು ಆಳವಾಗಿ ಅರ್ಥೈಸಿ, ಅವರ ವ್ಯಾಪಾರವನ್ನು ಹೊಸ ಮಟ್ಟಕ್ಕೆ ತಲುಪಿಸಲು ಸ್ಕೇಲ್ ನ ಸೇವೆಗಳು ಸಹಾಯ ಮಾಡಲಿವೆ.” ಎಂದು ದಿ ವೆಬ್ ಪೀಪಲ್ ನ ಸಿಓಓ ಶರತ್ ಶ್ರೀನಿವಾಸ ಹೇಳಿದರು.

ಸ್ಕೇಲ್ ವೆಬ್ ಡೆವಲಪ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಯೂಐ/ಯುಎಕ್ಸ್ ಡಿಜೈನ್ ಮತ್ತು ಗ್ರಾಫಿಕ್ ಡಿಜೈನ್ ನಂತಹ ದಿ ವೆಬ್ ಪೀಪಲ್ ಅವರ ಪ್ರಸ್ತುತ ಸೇವೆಗಳ ಜೊತೆಗೆ ಕಾರ್ಯ ನಿರ್ವಹಿಸಲಿದ್ದು, ಕಂಪನಿಯು ತನ್ನ ಗ್ರಾಹಕರಿಗೆತಮ್ಮ ಉದ್ಯಮದ ಡಿಜಿಟಲ್ ಅವಶ್ಯಕತೆಗಳನ್ನು ಇನ್ನಷ್ಟು ವ್ಯಾಪಕವಾಗಿ ಪೂರೈಸುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಹೆಚ್ಚು ಮಾಹಿತಿ ಅಥವಾ ಮಾಧ್ಯಮ ಪ್ರಶ್ನೆಗಳಿಗಾಗಿ,

ಸಂಪರ್ಕಿಸಿ: ವಿಮರ್ಶಾ ಆಳ್ವ
vimarsha@thewebpeople.in 
82778 50444

ದಿ ವೆಬ್ ಪೀಪಲ್ ಬಗ್ಗೆ
ಪುತ್ತೂರಿನಲ್ಲಿ ಸ್ಥಾಪಿತವಾದ ದಿ ವೆಬ್ ಪೀಪಲ್, ವೆಬ್ ಡೆವಲಪ್ಮೆಂಟ್, ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್, ಯೂಐ/ಯುಎಕ್ಸ್ ಡಿಜೈನ್, ಮತ್ತು ಗ್ರಾಫಿಕ್ ಡಿಜೈನ್ ನಲ್ಲಿಐದಕ್ಕೂಅಧಿಕ ವರ್ಷಗಳಿಂದ ಮುಂಚೂಣಿಯಲ್ಲಿದೆ. ಸ್ಕೇಲ್ ಆರಂಭದೊಂದಿಗೆ, ದಿ ವೆಬ್ ಪೀಪಲ್ ಡಿಜಿಟಲ್ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡುವಲ್ಲಿ ತಮ್ಮ ಬದ್ಧತೆಯನ್ನು ಮತ್ತೆ ದೃಢಪಡಿಸುತ್ತಿದೆ.