ಸಾಲ್ಮರ ಗುಂಪಕಲ್ಲಿನಲ್ಲಿ ಮಹಿಳೆಗೆ ಮದ್ಯ ಕುಡಿಸಿ, ಕ್ರೂರವಾಗಿ ಅತ್ಯಾಚಾರ ಎಸಗಿದ ಕಾಮುಕ ಬನ್ನೂರಿನ ಸಂಶುದ್ದೀನ್ ಆಸ್ಗರ್ ಆಲಿ ಅಂದರ್..!! ಕಾಮುಕ ಜಿಹಾದಿಯ ಅಟ್ಟಹಾಸಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮಹಿಳೆ..!! ಸಾಮೂಹಿಕ ಅತ್ಯಾಚಾರದ ಶಂಕೆ ವ್ಯಕ್ತಪಡಿಸಿದ ಬಜರಂಗದಳ – ಕಹಳೆ ನ್ಯೂಸ್
ಪುತ್ತೂರು : ನಗರದ ಸಾಲ್ಮರದ ಗುಂಪಕಲ್ಲಿನಲ್ಲಿ ಮಹಿಳೆಗೆ ಮದ್ಯ ಕುಡಿಸಿ ಕ್ರೂರವಾಗಿ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದ್ದು, ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು, ಬಳಿಕ ಅದು ಅತ್ಯಾಚಾರ ಎಂದು ತಿಳಿದು ಬಂದಿದ್ದು, ಅರೋಪಿ ಕಾಮುಕನನ್ನು ಹೆಡೆಮುರಿಕಟ್ಟುವಲ್ಲಿ ಪುತ್ತೂರು ಪೋಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಘಟನೆ..!? :
ಹಾಸನ ತಾಲೂಕು ಚೆನ್ನರಾಯಪಟ್ಟಣದ ನಿವಾಸಿಯಾಗಿರುವ ಸಂತ್ರಸ್ಥ ಮಹಿಳೆಯು, ದಿನಾಂಕ 24.11.2023 ರಂದು ರಾತ್ರಿ ಸಮಯ, ಪುತ್ತೂರು ಬಸ್ ನಿಲ್ದಾಣದಲ್ಲಿ ಇದ್ದಾಗ, ಅಪರಿಚಿತ ವ್ಯಕ್ತಿಯೋರ್ವ ಸದರಿ ಮಹಿಳೆಗೆ ಮದ್ಯವನ್ನು ಸೇವಿಸಲು ನೀಡಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿರುವ ಘಟಣೆಗೆ ಸಂಬಂಧಿಸಿದಂತೆ, ಪುತ್ತೂರು ನಗರ ಠಾಣೆಯಲ್ಲಿ ದಿನಾಂಕ: 25-11-2023 ರಂದು ವರದಿಯಾಗಿದ್ದ ಅ.ಕ್ರ 114/2023 ಕಲಂ 376 ಐ.ಪಿ.ಸಿ ಪ್ರಕರಣದ ತನಿಖೆ ನಡೆಸಲಾಗಿ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿಯಾದ ಆರೋಪಿ ಸಂಶುದ್ದೀನ್ ಆಸ್ಗರ್ ಆಲಿ (23) ( ಹಾಲಿ ವಾಸ: ಬನ್ನೂರು ಗ್ರಾಮ ಪುತ್ತೂರು ) ಎಂಬಾತನನ್ನು ಪುತ್ತೂರು ನಗರ ಠಾಣಾ ಪೊಲೀಸರು ದಿನಾಂಕ 28.11.2023 ರಂದು ಸಂಜೆ ಪುತ್ತೂರು KSRTC ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿರುತ್ತಾರೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಸಾಮೂಹಿಕ ಅತ್ಯಾಚಾರದ ಶಂಕೆ ವ್ಯಕ್ತಪಡಿಸಿದ ಸಂಘ ಪರಿವಾರ, ಬಜರಂಗದಳ..!
ಇನ್ನೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರಿನ ಭಜರಂಗದಳ ಇದೊಂದು ಜಿಹಾದಿ ಮಾನಸಿಕತೆಯ ಕೃತ್ಯ, ಇದು ಒಬ್ಬರಿಂದ ಅಸಾಧ್ಯ, ಇದು ಒಂದು ಗುಂಪಿನ ಕೆಲಸ ಎಂದು ಸಾಮೂಹಿಕ ಅತ್ಯಾಚಾರದ ಶಂಕೆಯನ್ನು ವ್ಯಕ್ತಪಸಿದ್ದು, ಪೋಲೀಸ್ ಇಲಾಖೆ ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.