Tuesday, January 21, 2025
ಸುದ್ದಿ

2023-24ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಯದ 21ನೇ ಅಂತರ್ ಕಾಲೇಜು ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಆರಂಭ – ಕಹಳೆ ನ್ಯೂಸ್

ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಯ ಕರ್ನಾಟಕ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ಸ್ವರಾಜ್ಯ ಮೈದಾನದಲ್ಲಿ ನಡೆಯುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಯದ 21ನೇ ಅಂತರ್ ಕಾಲೇಜು ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2023-24ನ್ನು ಆರಂಭಗೊಂಡಿತು.

ರಾಷ್ಟ್ರೀಯ ಕ್ರೀಡಾಪಟು, ಒಲಿಂಪಿಯನ್ ಎಂ. ಆರ್. ಪೂವಮ್ಮ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಬೆಂಬಲ ಮತ್ತು ಪ್ರೋತ್ಸಾಹವಿದ್ದಾಗ ಸಾಧನೆಗೆ ಯಾವುದು ಅಡ್ಡಿಯಲ್ಲ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಯ ಕುಲಪತಿ, ಡಾ ಎಂ. ಕೆ ರಮೇಶ್ ಮಾತನಾಡಿ, ದೈಹಿಕ ಚಟುವಟಿಕೆಗಳು ಜೀವನಕ್ಕೆ ಅಗತ್ಯ. ಜೀವನದಲ್ಲಿ ಕ್ರೀಡೆ ಮತ್ತು ಸಂಗೀತ ಎನ್ನುವುದು ಉತ್ತಮ ಒತ್ತಡ ನಿವಾರಕ. ಗೆಲವು ಸೋಲುಗಳನ್ನು ಬದಿಗಿಟ್ಟು ಕ್ರೀಡೆಯಲ್ಲಿ ಭಾಗವಹಿಸಿ. ನಮ್ಮಲ್ಲಿ ಶಿಸ್ತನ್ನು ಆಳವಡಿಸಿಕೊಂಡಾಗ ಅವಕಾಶಗಳು ತನ್ನಿಂತಾನೆ ಸಿಗುತ್ತದೆ ಎಂದರು.

ದಕ್ಷಿಣ ಕನ್ನಡದ ಜಿಲ್ಲಾ ಪಂಚಾಯತಿ ಸಿಇಓ ಡಾ ಆನಂದ್ ಕೆ ಮಾತನಾಡಿ, ಕಾಲೇಜ್‌ನ ಅವಧಿಯಲ್ಲಿ ಕ್ರೀಡಾ ಅವಕಾಶಗಳು ಹೆಚ್ಚು. ಇಲ್ಲಿ ಉತ್ತಮವಾಗಿ ಭಾಗವಹಿಸಿ. ವೃತ್ತಿ ಕ್ಷೇತ್ರದಲ್ಲಿ ಇದನ್ನು ಅಳವಡಿಸಿಕೊಳ್ಳಿ. ಯಾವುದೇ ಕ್ರೀಡೆಗೆ ವಯಸ್ಸಿನ ಮಿತಿಯಿಲ್ಲ ಎಂದರು. ಕ್ರೀಡಾ ಜ್ಯೋತಿಯನ್ನು ಲಕ್ಷ್ಮೀ ವೈಷ್ಣವಿ, ಪ್ರಣವ್ ಜಗದೀಶ್, ಡಾ. ವೈಷ್ಣವಿ, ಡಾ. ಮಾದುರಿ ಕೆ, ಚಂದನ್ ಎಸ್ ಉದ್ಘಾಟಕರಿಗೆ ಹಸ್ತಾಂತರಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಯದ ವ್ಯಾಪ್ತಿಗೆ ಒಳಪಟ್ಟ ಒಟ್ಟು 133 ಕಾಲೇಜ್ ಗಳಿಂದ 780 ಪುರುಷರು ಹಾಗೂ 657 ಮಹಿಳೆಯರು ಸೇರಿದಂತೆ ಒಟ್ಟು 1437 ವಿದ್ಯಾರ್ಥಿಗಳು ಭಾಗವಹಿಸಿದರು. ಆಕರ್ಷಕ ಪಥ ಸಂಚಲನದೊಂದಿಗೆ ವಿವಿಧ ಸಾಂಸ್ಕೃತಿಕ ತಂಡಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವು.

ಡೊಳ್ಳು ಕುಣಿತ, ಹುಲಿ ಕುಣಿತ, ನಾಸಿಕ್ ಬ್ಯಾಂಡ್, ಯಕ್ಷಗಾನ, ಕೀಲು ಕುದುರೆ, ಕೇರಳ ಚೆಂಡೆ, ಗೊಂಬೆ ಕುಣಿತ ಮೆರವಣಿಗೆಯ ಅಂದವನ್ನು ಹೆಚ್ಚಿಸಿದವು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಯ ಕುಲಪತಿ, ಡಾ ಎಂ. ಕೆ ರಮೇಶ್, ಒಲಿಂಪಿಯನ್ ಎಂ. ಆರ್. ಪೂವಮ್ಮ, ದಕ್ಷಿಣ ಕನ್ನಡದ ಜಿಲ್ಲಾ ಪಂಚಾಯತಿ ಸಿಇಓ ಡಾ ಆನಂದ್ ಕೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಶಾಸಕ ಉಮಾನಾಥ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವ್ಯವಸ್ಥಾಪಕ ಟ್ರಸ್ಟಿ ಡಾ ವಿನಯ್ ಆಳ್ವ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಯದ ಕುಲಸಚಿವ ಹಾಗೂ ಕ್ರೀಡಾಕೂಟದ ನಿರ್ದೇಶಕ, ಡಾ.ಬಿ.ವಸಂತ ಶೆಟ್ಟಿ, ಸೆನೆಟ್ ಸದಸ್ಯ ಡಾ. ಶರಣ್ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್, ಎಂಸಿಎಸ್ ಬ್ಯಾಂಕ್‌ನ ಬಾಹುಬಲಿ ಪ್ರಸಾದ್, ಕೆಎಂಎಫ್‌ನ ಅಧ್ಯಕ್ಷ ಸುಚರಿತ ಶೆಟ್ಟಿ ಹಾಗೂ ಇನ್ನಿತರರು ಇದ್ದರು.

ಕಾರ್ಯಕ್ರಮವನ್ನು ರಾಜೇಶ್ ಡಿಸೋಜ ನಿರೂಪಿಸಿ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ ಸ್ವಾಗತಿಸಿ, ನರ್ಸಿಂಗ್ ಕಾಲೇಜ್‌ನ ಪ್ರಾಂಶುಪಾಲ ಯತಿಕುಮಾರ್ ಸ್ವಾಮಿಗೌಡ ವಂದಿಸಿದರು. ಮೊದಲ ದಿನದ ಅಂತ್ಯಕ್ಕೆ ಅತಿಥೇಯ ಮೂಡುಬಿದಿರೆಯ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಮಹಿಳಾ ವಿಭಾಗದಲ್ಲಿ 13 ಅಂಕಗಳೊAದಿಗೆ ಪ್ರಥಮ ಸ್ಥಾನ ಪಡೆದರೆ, ಉಡುಪಿಯ ಎಸ್‌ಡಿಎಮ್ ಆಯುರ್ವೇದ ಕಾಲೇಜು 10 ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆಯಿತು.

ಪುರುಷರ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸಸ್ ಕಾಲೇಜು 39 ಅಂಕಗಳೊAದಿಗೆ ಮೊದಲ ಸ್ಥಾನದಲ್ಲಿದ್ದರೆ, ಮುಲ್ಕಿಯ ಸೈಂಟ್ ಅನ್ಸ್ ನರ್ಸಿಂಗ್ ಕಾಲೇಜು 5 ಅಂಕಗಳೊAದಿಗೆ ದ್ವಿತೀಯ ಸ್ಥಾನದಲ್ಲಿದೆ. ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳು ಮೊದಲ ದಿನ 5 ನೂತನ ಕೂಟದಾಖಲೆ ನಿರ್ಮಿಸಿ, ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ 7 ಚಿನ್ನ, 4 ಬೆಳ್ಳಿ, 2 ಕಂಚಿನ ಪದಕ ಪಡೆದರು.

ಮೊದಲ ದಿನದ ಫಲಿತಾಂಶ (ಪೈನಲ್ಸ್)
100 ಮೀ ಓಟ- ಹುಡುಗರು
ಪ್ರಥಮ- ಶ್ರವಣ್‌ಗಿರಿ- ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ-10.9 ಸೆ
ದ್ವಿತೀಯ- ಸರ‍್ಯ ಪಿ- ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ- 11.5 ಸೆ
ತೃತೀಯ- ಅಕ್ಷ್ ಬೆನೆಡಿಕ್ಟ್ – ಶ್ರೀ ಗಂಗೋತ್ರಿ ಕಾಲೇಜ್ ಆಫ್ ನರ್ಸಿಂಗ್

5000 ಮೀ ಓಟ ಹುಡುಗರು
ಪ್ರಥಮ- ಪ್ರಣವ್ ಜಗದೀಶ್ – ಲಕ್ಷೀ ಮೆಮೊರಿಯಲ್ ಕಾಲೇಜು ಆಪ್ ಫಿಜಿಯೋ ಮಂಗಳೂರು-18.57.6 ಸೆ
ದ್ವಿತೀಯ-ತೋಮಸ್ ಪೌಲ್- ಸೆಂಟ್ ಅನ್ಸ್ ಕಾಲೇಜ್ ಆಫ್ ನರ್ಸಿಂಗ್,ಮುಲ್ಕಿ – 19.32.5 ಸೆ
ತೃತೀಯ- ಚಂದನ್ ಎಸ್-ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ , ಮೂಡುದಿರೆ-20.08.2 ಸೆ

400 ಮೀ ಹುಡುಗರು
ಪ್ರಥಮ- ಕಾರ್ತಿಕ್-ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್, ಮೂಡುದಿರೆ-53.4 ಸೆ
ದ್ವಿತೀಯ-ಶದನ್-ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ , ಮೂಡುದಿರೆ-56.3ಸೆ
ತೃತೀಯ- ಡಾ.ಅಂಕಿತ್ ಬಿ.ಶೆಟ್ಟಿ -ಎಸ್ ಡಿ ಎಮ್ ಕಾಲೇಜು ಮೆಡಿಕಲ್ ಸೈನ್ಸ್ ಆಂಡ್ ಹಾಸ್ಪಿಟಲ್, ದಾರವಾಡ -1.06.2ಸೆ

ಶಾಟ್ ಪುಟ್
ಪ್ರಥಮ-ರಾಕೇಶ್-ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ-11.12ಮೀ
ದ್ವಿತೀಯ-ಕರಣ್ ರಾಜೇಶ್ – ಎಸ್ ಡಿ ಎಮ್ ಕಾಲೇಜು ಆರ್ಯುವೇದ ಹಾಸನ – 9.58 ಮೀ
ತೃತೀಯ- ರತನೇಶ್ ಆರ್- ಶಾಂತ ಗ್ರೂಪ್ ಆಫ್ ಇನ್ಸಿಟ್ಯೂಷನ್ ನಂದನಗನಹಳ್ಳಿ- 9.48ಮೀ

ಹೈ ಜಂಪ್ (ನ್ಯೂ ಮೀಟ್ ರೆಕಾರ್ಡ್)
ಪ್ರಥಮ-ಮನು-ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ- 1.86 ಮೀ
ದ್ವಿತೀಯ-ಕಾರ್ತಿಕ್ – ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ- 1.80 ಮೀ
ತೃತೀಯ- ಜೋಯೆಲ್ ಕೆ ಸನ್ನಿ – ಸೌತರ್ನ್ ಕಾಲೇಜ್ ಆಫ್ ನರ್ಸಿಂಗ್ ಬೆಂಗಳೂರು- 1.64 ಮೀ

100ಮೀ ಓಟ – ಮಹಿಳೆಯರು
ಪ್ರಥಮ-ಭೂಮಿಕಾ- ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ , ಮೂಡುದಿರೆ-13.2 ಸೆ
ದ್ವಿತೀಯ- ದುರ್ಗಾ-ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ , ಮೂಡುದಿರೆ-13.5 ಸೆ
ತೃತೀಯ-ಲಕ್ಷಿö ವೈಷ್ಣವಿ-ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೊಪತಿ ಆಂಡ್ ಯೋಗಿಕ್ ಸೈನ್ಸ್- 13.7 ಸೆ

5000ಮೀ ಓಟ ಮಹಿಳೆಯರು
ಪ್ರಥಮ-ದಿವ್ಯಾ ಎಸ್-ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಚಾಮರಾಜನಗರ-29.35.4 ಸೆ
ದ್ವಿತೀಯ-ಸಾವಿತ್ರಿ ಎಸ್ ಮೇಟಿ-ಸಜ್ಜಲಾಶ್ರೀ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜು-ಬಾಗಲಕೋಟೆ-30.27 ಸೆ
ತೃತೀಯ-ಹರ್ಷಶ್ರೀ ಡಿ.ಎಸ್ – ರಾಜೀವ್ ಇನ್ಸಿಟ್ಯೂಟ್ ಆಫ್ ಆರ್ಯುವೇದ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಹಾಸನ-33.8.8 ಸೆ

400 ಮೀ ಹರ್ಡಲ್ಸ್ ಮಹಿಳೆಯರು
ಪ್ರಥಮ-ವಿಸ್ಮಯ-ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ , ಮೂಡುದಿರೆ-1.08 ಸೆ
ದ್ವಿತೀಯ-ಎವ್ಲಿನ್ ತ್ರಿಷಾ ಜೋಯ್ -ಅಥೆನಾ ಕಾಲೇಜ್ ಆಫ್ ನರ್ಸಿಂಗ್ ಮಂಗಳೂರು-1.29 ಸೆ
ತೃತೀಯ-ಸುಸಾನ್ ಅಲಿಯಾಸ್-ಅಥೆನಾ ಕಾಲೇಜ್ ಆಫ್ ನರ್ಸಿಂಗ್ ಮಂಗಳೂರು-1.47 ಸೆ

ಜಾವ್ಲಿನ್ ಥ್ರೋ ಮಹಿಳೆಯರು
ಪ್ರಥಮ-ಅರುಣಾ ವಿ ಎಸ್- ವಿದ್ಯೋದಯ ಕಾಲೇಜ್ ಆಫ್ ನರ್ಸಿಂಗ್ ಬೆಂಗಳೂರು-24.95 ಮೀ
ದ್ವಿತೀಯ-ಮಾಧುರಿ ಕೆ – ಫಾದರ್ ಮುಲ್ಲರ್ ಹೋಮಿಯೊ ಮೆಡಿಕಲ್ ಕಾಲೇಜು ಮಂಗಳೂರು- 20.54 ಮೀ
ತೃತೀಯ-ಮೇಘನಾ ಜಿ- ಎಸ್‌ಡಿಎಮ್ ಕಾಲೇಜು ಆಫ್ ಆಯುರ್ವೇದ ಉಡುಪಿ-18.41ಮೀ

ಹೈಜಂಪ್
ಪ್ರಥಮ- ರಕ್ಷಾ- ಇಂದಿರಾ ಕಾಲೇಜ್ ನರ್ಸಿಂಗ್, ಮಂಗಳೂರು-1.24ಮೀ
ದ್ವಿತೀಯ- ಸೀಮಾ ಸಸಲತ್- ಸಂಜೀವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಹುಬ್ಬಳ್ಳಿ- 1.21ಮೀ
ತೃತೀಯ- ಡಾಲಿಯಾ ಸಿಸಿ- ಸೈಂಟ್ ಅನ್ಸ್ ಕಾಲೇಜು, ಮೂಲ್ಕಿ- 1.18ಮೀ

 

ನೂತನ ಕೂಟ ದಾಖಲೆಗಳು
ಮನು- ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ- 1.86ಮೀ- (ಹೊಸ ದಾಖಲೆ)
ರಾಘವೇಂದ್ರ-ಸಿಎಚ್‌ಎಮ್‌ಎಸ್ -1.80 ಮೀ – 2002-03 ರಲ್ಲಿ- (ಹಳೆಯ ದಾಖಲೆ)

ಜಾವ್ಲಿನ್ ಥ್ರೋ
ರಾಕೇಶ್- ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ- 50.89ಮೀ
ಅರುಣ್ ತೇಜಸ್- ಉಜಿರೆಯ ಎಸ್‌ಡಿಎಂ ನ್ಯಾಜುರೋಪತಿ ಕಾಲೇಜು- 46.56ಮೀ- 2013-14ರಲ್ಲಿ

400 ಹರ್ಡಲ್ಸ್
ಕಾರ್ತಿಕ್- ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ- 53.4 ಸೆ
ಅರ್ಜುನ್ ಜೋಯ್- ಸಿಟಿ ಕಾಲೇಜು , ಮಂಗಳೂರು- 1.00.66 ಸೆ- 2006-07ರಲ್ಲಿ

400ಮೀ ಹರ್ಡಲ್ಸ್( ಮಹಿಳೆಯರು)
ವಿಸ್ಮಯ- ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ , ಮೂಡುದಿರೆ-1.08.4 ಸೆ
ಖ್ಯಾತಿ ಎಸ್.ವಿ. ಬಿಎಂಸಿ ಕಾಲೇಜು, ಮಂಗಳೂರು- 1.18.88ಸೆ-2007-08ರಲ್ಲಿ

100 ಮೀ ಓಟ
ಶ್ರವಣ್‌ಗಿರಿ- ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್, ಮೂಡುದಿರೆ- 10.09 ಸೆ
ಅನಿಲ್‌ಕುಮಾರ್ ಗುಪ್ತಾ- ಜೆಜೆಎಂಸಿ ದಾವಣೆಗೆರೆ- 11.02ಸೆ- 2000-01ರಲ್ಲಿ