Monday, January 20, 2025
ಸುದ್ದಿ

ಡಿ.03ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ಮೂಡುಬಿದ್ರೆ ಆಶ್ರಯದಲ್ಲಿ ನಾಯಿಮರಿ ನಾಟಕ ಪ್ರದರ್ಶನ – ಕಹಳೆ ನ್ಯೂಸ್

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ಮೂಡುಬಿದ್ರೆ ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸುವ ನಾಯಿಮರಿ ನಾಟಕ ಪ್ರದರ್ಶನವನ್ನು ಡಿ.03 ರಂದು ಸಂಜೆ 6.30ಕ್ಕೆ ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.

ಈಗಾಗಲೇ ರಾಜ್ಯಾದ್ಯಂತ 50ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡ ಆಳ್ವಾಸ್ ಅಭಿನಯದ ಈ ಪ್ರಸಿದ್ದ ಮಕ್ಕಳ ನಾಟಕವನ್ನು ಕನ್ನಡದ ಖ್ಯಾತ ಲೇಖಕಿ ಶ್ರೀಮತಿ ವೈದೇಹಿಯವರು ರಚಿಸಿದ್ದಾರೆ. ರಂಗಮಾಂತ್ರಿಕ ಡಾ.ಜೀವನ್ ರಾಂ ಸುಳ್ಯ ರವರು ನಿರ್ದೇಶಿಸಿದ್ದಾರೆ. ಮಾ| ಮನುಜ ನೇಹಿಗ, ಸುಮನಾ ಪ್ರಸಾದ್ , ಸತ್ಯಜಿತ್ ಹಾಗೂ ಗೀತಂ ಗಿರೀಶ್ ಸಂಗೀತ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸರಳವಾದ ಅಷ್ಟೇ ರಂಜನೀಯ ಅಂಶಗಳಿಂದ ಕೂಡಿದ ಈ ನಾಯಿಮರಿ ನಾಟಕವು ಸಮರ್ಥ ನಿರ್ದೇಶನ, ನವಿರು ಹಾಸ್ಯ, ಪರಿಣಾಮಕಾರಿ ಅಭಿನಯ, ಸುಶ್ರಾವ್ಯ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ಪ್ರತಿಕ್ಷಣವೂ ಹಿಡಿದಿಟ್ಟುಕೊಳ್ಳುವಂತಹ ಪ್ರಯೋಗವಾಗಿದೆ.
ಶೈಕ್ಷಣಿಕವಾಗಿಯೂ ಅತ್ಯುತ್ತಮ ಸಂದೇಶ ಸಾರುವ ಈ ನಾಟಕವು ಪ್ರತಿಯೊಬ್ಬ ಮಕ್ಕಳೂ ನೋಡಬೇಕಾದ ಪ್ರಯೋಗವಾಗಿದೆ.

ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ ನೇರವಾಗಿ 6.30 ಕ್ಕೆ ನಾಟಕ ಆರಂಭವಾಗುತ್ತದೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.