Tuesday, January 21, 2025
ಸುದ್ದಿ

ಗೋಮಾಳದ ಜಮೀನಿನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸುವುದು ಮತ್ತು ಗಡಿ ಗುರುತು ನಡೆಸಿ,ಸಂರಕ್ಷಿಸಿ ಉದ್ದೇಶಿತ ಕಾರ್ಯಕ್ಕೆ ಬಳಸುವಂತೆ ಒತ್ತಾಯಿಸಿ ಉಪ ತಹಶಿಲ್ದಾರ್ ಅವರಿಗೆ ಹಿಂದೂ ಜಾಗರಣ ವೇದಿಕೆ, ವಿಶ್ವಹಿಂದೂ ಪರಿಷತ್,ಬಜರಂಗದಳ ಮತ್ತು ಗೋಮಾಳ ಸಂರಕ್ಷಣಾ ಸಮಿತಿಯ ಮನವಿ- ಕಹಳೆ ನ್ಯೂಸ್

ಬಂಟ್ವಾಳ; ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗದಳ ಇದರ ಸಹಯೋಗದಲ್ಲಿ ಗೋಮಾಳ ಸಂರಕ್ಷಣಾ ಸಮಿತಿ ಕೆದಿಲ – ಪೆರಾಜೆ ವತಿಯಿಂದ ಕೆದಿಲ ಮತ್ತು ಪೆರಾಜೆ ಗ್ರಾಮಗಳ ಗೋಮಾಳದ ಜಮೀನಿನಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸುವುದು ಮತ್ತು ಗಡಿ ಗುರುತು ನಡೆಸಿ ,ಸಂರಕ್ಷಿಸಿ ಉದ್ದೇಶಿತ ಕಾರ್ಯಕ್ಕೆ ಬಳಸುವಂತೆ ಒತ್ತಾಯಿಸಿ ಉಪ ತಹಶಿಲ್ದಾರ್ ಅವರಿಗೆ ಮನವಿ ನೀಡಲಾಯಿತು.

ಕೆದಿಲ ಗ್ರಾಮ ಹಾಗು ಪೆರಾಜೆ ಗ್ರಾಮದ ಗಡಿ ಪ್ರದೇಶವಾದ ಗಡಿಯಾರ ಸ್ವಾಗತ ನಗರದ ಬಳಿ, ಕೆದಿಲ ಗ್ರಾಮದಲ್ಲಿ ಸ.ನಂ.11/1 ರಲ್ಲಿ 14.56 ಎಕರೆ ಹಾಗು ಪೆರಾಜೆ ಗ್ರಾಮದ ಸ.ನಂ.164/1 ರಲ್ಲಿ 19.75 ಎಕರೆ ಗೋಮಾಳದ ಜಾಗವಿದ್ದು, ಕೆಲವು ವರುಷಗಳಿಂದ ಮುಸಲ್ಮಾನರಿಂದ ಅವ್ಯಾಹತವಾಗಿ ಅತಿಕ್ರಮಣ ನಡೆಯುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ದ.ಪ್ರಾಂ‌.ಬ.ಗಣರಾಜ ಭಟ್ ಆರೋಪ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಗಳು ತಲೆಯೆತ್ತುತ್ತಲೇ ಇದೆ.ವಿಧ್ಯುತ್,ನೀರಾವರಿ ವ್ಯವಸ್ಥೆ ಯು ಸರಾಗವಾಗಿ ನಡೆದಿದೆ. 2013 ನೇ ಇಸವಿಯಿಂದ ಅತಿಕ್ರಮಣದ ವಿರುದ್ದ ಹೋರಾಟ ನಡೆಯತ್ತಲೇ ಇದ್ದರೂ, ಕೆಲವು ರಾಜಕೀಯ ವ್ಯಕ್ತಿಗಳ ಕೃಪಾಶೀರ್ವಾದದಲ್ಲಿ ಅತಿಕ್ರಮಣ ಗಾರರ ರಕ್ಷಣೆ ನಡೆಯುತ್ತಿದೆ. ರಾಜಕೀಯ ವ್ಯಕ್ತಿಗಳ ಒತ್ತಡದಿಂದ ಹಾಗು ಹಣದ ಬಲದಿಂದ ಅಧಿಕಾರಿಗಳು ಅತಿಕ್ರಮಣವನ್ನೂ ನೋಡುತ್ತಾ ,ತೆರವು ಗೊಳಿಸದೆ ಕುಳಿತಿದ್ದಾರೆ ಎಂದು ಅವರು ಆರೋಪ ಮಾಡಿದರು.ಮಾರ್ಚ್ ತಿಂಗಳಿನಲ್ಲಿ ಕಂದಾಯ ಅಧಿಕಾರಿಗಳು ಅಕ್ರಮ ಮನೆಗಳನ್ನು ತೆರವುಗೊಳಿಸಿದ್ದರಾದರೂ ಮತ್ತೆ ಅಲ್ಲಿ ಮನೆ ಕಟ್ಟಲು ಕಾಮಗಾರಿಗಳು ನಡೆಯುತ್ತಿವೆ.ಹಾಗಾಗಿ ಅತಿಕ್ರಮಣ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ ಅವರು ಗೋಮಾಳ ಜಮೀನಿನಲ್ಲಿ ಗೋಶಾಲೆ, ಪಶು ಸಂಗೋಪನೆ ,ಪಶು ಸಂಬಂಧಿತವಾದ ಉದ್ದೇಶಿತ ಕಾರ್ಯಗಳಿಗೆ ಬಳಸಬೇಕು ಎಂದು ಒತ್ತಾಯ ಮಾಡಿದ್ದಾರೆ.

 

ಈಗಾಗಲೇ ಅತಿಕ್ರಮಣ ಮತ್ತು ಅಕ್ರಮಸಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಜಮೀನನ್ನು ಇಲಾಖೆ ವಶಕ್ಕೆ ಪಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.

 

ಈ ಸಂದರ್ಭದಲ್ಲಿ ಸಮಿತಿಯ ಪೆರಾಜೆ ಸಂಚಾಲಕ ಶ್ರೀನಿವಾಸ ಪೆರಾಜೆ, ಕೆದಿಲ ಸಂಚಾಲಕ ವಿಶ್ವನಾಥ ಶೆಟ್ಟಿ ಕೆದಿಲ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ನರಸಿಂಹ ಶೆಟ್ಟಿ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ,ಕುಸುಮಾಧರ,ಸತೀಶ್ ,ಲಿಖಿತ್ , ತಿಲಕ್ ,ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಗುರುರಾಜ್ ಬಂಟ್ವಾಳ, ಬಜರಂಗದಳ ಪ್ರಮುಖರಾದ ರೂಪೇಶ್ ಪೂಜಾರಿ, ಮಹೇಂದ್ರ ಅಶ್ವತ್ತಾಡಿ,ಚಿರಂಜೀವಿ, ಸತೀಶ್ ಮಿತ್ತೂರು, ಉದಯ ಜೋಗಿಬೆಟ್ಟು, ಹೊನ್ನಪ್ಪ ಬಡೆಕೋಡಿ, ನೇರಳಕಟ್ಟೆ ಸಿ.ಎ.ಬ್ಯಾಂಕ್ ನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾಣಿ, ಗ್ರಾ.ಪಂ.ಸದಸ್ಯರಾದ ಹರೀಶ್ ರೈ ಪೆರಾಜೆ, ರಾಜಾರಾಮ್ ಭಟ್ ಕಾಡೂರು, ಉಮೇಶ್ ಮುರುವ, ಒಕೆ ಶ್ಯಾಮಪ್ರಸಾದ್ ಭಟ್, ಗ್ರಾಮದ ಪ್ರಮುಖರಾದ ರಾಘವ ಗೌಡ ಪೆರಾಜೆ, ನಟರಾಜ್ ಭಟ್, ವಕೀಲರಾದ ಅರುಣ್ ಭಟ್ ಗಣಪತಿ ಭಟ್ ಮತ್ತಿತರ ಪ್ರಮುಖರು ಹಾಜರಿದ್ದರು.