ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ ನಡೆದ ವಾಲ್ಪಾಡಿ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಸೇವೆಗಾಗಿ ಹಿಂದೂ,ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ಮೂವರನ್ನು ಸೌಹಾರ್ದವಾಗಿ ಸನ್ಮಾನಿಸಲಾಯಿತು. ಅಂಬುಲೆನ್ಸ್ ಸೇವೆಯ ಮೂಲಕ ಗಮನಸೆಳೆದಿರುವ ಪ್ರಶಾಂತ್ ಶೆಟ್ಟಿ ಮಾರ್ನಾಡ್, ಸಮಾಜ ಸೇವಕರಾದ ಹನೀಫ್ ರಹ್ಮಾನಿಯ ಹಾಗೂ ರಾಜೇಶ್ ಕಡಲಕೆರೆ ಸನ್ಮಾನಗೊಂಡವರು.
ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಹಾಗೂ ಪುರಸಭಾ ಮುಖ್ಯಾಧಿಕಾರಿ ಇಂದು ಎಮ್.ಅವರು ಮೂವರನ್ನು ಸನ್ಮಾನಿಸಿ ಅಭಿನಂದಿಸಿದರು. ವಾಲ್ಪಾಡಿ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ, ಸಂತೋಷ್ ಶೆಟ್ಟಿ ಮಿಜಾರ್,ಭರತ್ ಶೆಟ್ಟಿ ಇರುವೈಲ್ ,ಬಾಲಕೃಷ್ಣ ಹೌದಾಲ್,ಮಹೇಶ್ ಕೋಟೆಬಾಗಿಲು ಹಾಗೂ ಎಸ್.ಎ.ಇಬ್ರಾಹಿಂ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.
ವಾಲ್ಪಾಡಿ ಟ್ರೋಫಿ ಪಂದ್ಯಾಕೂಟದಲ್ಲಿ ಎಫ್.ಸಿ.ಟಿ ಪುತ್ತಿಗೆ ಹಾಗೂ ಶ್ರೀದೇವಿ ಕೊಡ್ಯಡ್ಕ ತಂಡಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು. ಎಫ್.ಸಿ.ಟಿ ತಂಡದ ಅಝೀಮ್ ಸರಣಿಶ್ರೇಷ್ಠ,ಹಾರಿಸ್ ಪಂದ್ಯಶ್ರೇಷ್ಠ ಹಾಗೂ ರಿಯಾಝ್ ಅವರು ಉತ್ತಮ ಎಸೆತಗಾರ ಪ್ರಶಸ್ತಿ ಪಡೆದುಕೊಂಡರೆ ಕೊಡ್ಯಡ್ಕ ತಂಡದ ಸಾಗರ್ ಉತ್ತಮ ದಾಂಡಿಗ,ಪ್ರವೀಣ್ ಉತ್ತಮ ಕ್ಷೇತ್ರ ರಕ್ಷಕ ಹಾಗೂ ಗುಂಡುಕಲ್ಲು ತಂಡದ ನಸೀಬ್ ಅವರು ಉತ್ತಮ ಗೂಟರಕ್ಷಕ ಪ್ರಶಸ್ತಿ ಪಡೆದುಕೊಂಡರು.
ಫ್ರೆಂಡ್ಸ್ ವಾಲ್ಪಾಡಿ ಯ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸ್ವಾಗತಿಸಿ ರಫೀಝ್ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹಫೀಝ್ ತೋಡಾರ್,ಹನೀಫ್,ರಝಾಕ್,ಇರ್ಷಾದ್, ಸಾತ್ವಿಕ್,ರಶೀದ್,ಇಕ್ಬಾಲ್, ಹಬೀಬ್,ದಾವೂದ್ ,ಹಮಿದಾಕ,ಹಾರಿಸ್ ,ಸಯ್ಯದಾಲಿ,ಮತ್ತಿತರರು ಸಹಕರಿಸಿದರು.