Monday, January 20, 2025
ಸುದ್ದಿ

ಬಂಟ್ವಾಳ: ಅಕ್ರಮ ಮರಳು ಸಾಗಾಟ : ಲಾರಿ ಹಾಗೂ ಮರಳನ್ನು ಪತ್ತೆ ಹಚ್ಚಿ ವಶಪಡೆದ ಪೋಲೀಸರು – ಕಹಳೆ ನ್ಯೂಸ್

ಬಂಟ್ವಾಳ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಮರಳನ್ನು ಪೋಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡ ಘಟನೆ ಸಜೀಪದಲ್ಲಿ ನಡೆದಿದೆ.

ಸಜೀಪದಿಂದ ಚೇಳೂರು ಕಡೆಗೆ ಲಾರಿ ಸಾಗುತ್ತಿರುವ ವೇಳೆ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಪೋಲೀಸರು ವಶಪಡಿಸಿಕೊಂಡ ಲಾರಿ ಮತ್ತು ಮರಳಿನ ಮೌಲ್ಯ ಒಟ್ಟು 2 ಲಕ್ಷ 5 ಸಾವಿರ ಎಂದು ಅಂದಾಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಜೀಪ ಹೊಳೆಬದಿಯಲ್ಲಿ ಅಬ್ದುಲ್ ರಹಮಾನ್ ಎಂಬವರು ಮರಳುಗಾರಿಕೆ ನಡೆಸುತ್ತಿದ್ದು,ಅವರು ಲಾರಿಗೆ ಲೋಡ್ ಮಾಡಿ ಕಳುಹಿಸಿದ ಬಗ್ಗೆ ಲಾರಿ ಚಾಲಕ ಮಹಮ್ಮದ್ ಶಾಫಿ ಪೋಲೀಸರಿಗೆ ತಿಳಿಸಿದ್ದಾನೆ. ಪರವಾನಿಗೆ ರಹಿತವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ಸಹಿತ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು