Recent Posts

Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಕಿರುತೆರೆಗೆ ಎಂಟ್ರಿ ಕೊಟ್ಟ ‘ಗಾಳಿಪಟ’ ನಟಿ ನೀತು ಶೆಟ್ಟಿ – ಕಹಳೆ ನ್ಯೂಸ್

‘ಗಾಳಿಪಟ’ (Galipata) ಬೆಡಗಿ ನೀತು ಶೆಟ್ಟಿ (Neethu Shetty) ಅವರು ಬೆಳ್ಳಿತೆರೆಯಿಂದ ತೆರೆಮರೆಗೆ ಸರಿದಿದ್ದರು. ಈಗ ವರ್ಷಗಳ ನಂತರ ಮತ್ತೆ ಕಿರುತೆರೆಗೆ ನಟಿ ನೀತು ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾಹಿನಿಯ ‘ಕನ್ಯಾದಾನ’ (Kanyadana) ಎಂಬ ಸೀರಿಯಲ್‌ನಲ್ಲಿ ನಟಿ ನೀತು ಶೆಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಧಾರಾವಾಹಿಯ ಪ್ರಮುಖ ತಿರುವಿಗೆ ನಟಿ ಸಾಕ್ಷಿಯಾಗಿದ್ದಾರೆ. 600 ಸಂಚಿಕೆಗಳನ್ನ ಪೂರೈಸಿರೋ ಈ ಸೀರಿಯಲ್‌ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ತಂದೆ ಮತ್ತು ಮಗಳ ಭಾವನಾತ್ಮಕ ಕಥೆ ಸಾರುವ ಕನ್ಯಾದಾನ ಸೀರಿಯಲ್‌ಗೆ ಉತ್ತಮ ರೆಸ್ಪಾನ್ಸ್ ಇದೆ. ಈ ಹಿಂದೆ ಬಿಗ್ ಬಾಸ್ ಸೀಸನ್ 2ರಲ್ಲಿ ನೀತು ಸ್ಪರ್ಧಿಗಳಾಗಿದ್ದರು. ಈಗ ಹಲವು ವರ್ಷಗಳ ನಂತರ ಮತ್ತೆ  ಕಿರುತೆರೆಗೆ ಮರಳಿದ್ದಾರೆ.

‘ಗಾಳಿಪಟ’ ಸಿನಿಮಾ ತೆರೆಕಂಡು 15 ವರ್ಷಗಳು ಕಳೆದಿದೆ. ದಿಗಂತ್‌ಗೆ ನಾಯಕಿಯಾಗಿ ನೀತು ಶೆಟ್ಟಿ ನಟಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ರಾಜೇಶ್ ಕೃಷ್ಣನ್, ಅನಂತ್‌ನಾಗ್, ಭಾವನಾ ರಾವ್ ನಟಿಸಿದ್ದರು.