Recent Posts

Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ – ಯುವ ನಟಿಯ ಮಧ್ಯೆ ಅಫೇರ್..? ಸೆಟ್ಟಲ್ಲೇ ಬಿತ್ತು ಪತ್ನಿಯ ಚಪ್ಪಲಿ ಏಟು! – ಕಹಳೆ ನ್ಯೂಸ್

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ ಅದೇ ಸೀರಿಯಲ್‌ನ ಯುವ ನಟಿಯೊಂದಿಗೆ ಅಫೇರ್ ಇಟ್ಟುಕೊಂಡ ಬಗ್ಗೆ ವದಂತಿಗಳು ಶುರುವಾಗಿವೆ. ಎರಡು ದಿನಗಳ ಹಿಂದೆ ಈ ಧಾರಾವಾಹಿಯ ಸೆಟ್ಟಲ್ಲಿ ದೊಡ್ಡ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.

ನಟನ ಪತ್ನಿ ಹಾಗೂ ಸೀರಿಯಲ್‌ ನಟಿಯ ನಡುವೆ ಜಗಳವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿಯ ಪ್ರಕಾರ, ಕನ್ನಡದ ಜನಪ್ರಿಯ ಸೀರಿಯಲ್‌ ಸೆಟ್ಟನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಈ ನಟ ಮತ್ತು ನಟಿಯ ಮಧ್ಯೆ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಇದು ಸೀರಿಯಲ್‌ ಸೆಟ್ ನಲ್ಲಿದ್ದವರಿಗೂ ಗೊತ್ತಿತ್ತು ಎನ್ನಲಾಗಿದೆ. ಇಬ್ಬರೂ ವಿದೇಶಿ ಪ್ರವಾಸಕ್ಕೆ ಹೋಗಿದ್ದರು ಎಂದು ಸಹ ಹೇಳಲಾಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರಿಬ್ಬರ ಅಫೇರ್‌ ಬಗ್ಗೆ ತಿಳಿದ ನಾಯಕನ ಹೆಂಡತಿ ಸಿಕ್ಕಾಪಟ್ಟಟೆ ಗಲಾಟೆ ಮಾಡಿದ್ದಾರಂತೆ ಎನ್ನಲಾಗಿದೆ. ನಾಯಕಿಗೆ ಎಲ್ಲರ ಮುಂದೆ ಸೆಟ್ಟಿನಲ್ಲೇ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಈ ಧಾರಾವಾಹಿಗೆ ನಾಯಕನ ಪತ್ನಿ ಕೂಡ ನಿರ್ಮಾಪಕಿ ಆಗಿದ್ದಾರೆ.

ಈ ಘಟನೆ ಬಳಿಕ ನಾಯಕಿ ಸೀರಿಯಲ್‌ನಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಮನರಂಜನಾ ವಾಹಿನಿಗೆ ಪತ್ರ ಬರೆದು ಈ ವಿಚಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಆದಷ್ಟು ಬೇಗ ಸೀರಿಯಲ್‌ನ್ನೇ ಮುಗಿಸಲು ವಾಹಿಸಿ ನಿರ್ಧಿರಿಸಿದೆ ಎನ್ನಲಾಗ್ತಿದೆ. ಇದೇ ನಟಿ ಸಿನಿಮಾರಂಗಕ್ಕೆ ಸಹ ಕಾಲಿಟ್ಟಿದ್ದು, ಚೊಚ್ಚಲ ಸಿನಿಮಾ ರಿಲೀಸ್ ಆಗಬೇಕಿದೆ.

ಕಿರುತೆರೆ ಲೋಕದಲ್ಲಿ ಈ ವಿಚಾರದ ಬಗ್ಗೆ ಗುಸುಪಿಸು ನಡೆಯುತ್ತಿದ್ದು, ಅವರು ಯಾರು ಅನ್ನೋದ ಮಾಹಿತಿ ಹೊರಬಿದ್ದಿಲ್ಲ ಎನ್ನಲಾಗಿದೆ. ಈ ವಿಚಾರ ಗಾಳಿಸುದ್ದಿಯಂತೆ ಎಲ್ಲೆಡೆ ಸುತ್ತುತ್ತಿದ್ದು, ಸೀರಿಯಲ್‌ ತಂಡವಾಗಲಿ ಅಥವಾ ವಾಹಿನಿಯಾಗಲಿ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.