Recent Posts

Monday, January 20, 2025
ಸುದ್ದಿ

ಪ್ರಗತಿ ಸ್ಟಡಿಸೆಂಟರ್‌ನಲ್ಲಿ 11ನೇ ವರ್ಷದ ಶಾರದೋತ್ಸವ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿರುವ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ.)ಪುತ್ತೂರು ಇದರಡಿಯಲ್ಲಿ ಕಾರ್ಯಾಚರಿಸುತ್ತಿದೆ.

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಅ. 15ರಂದು ನವರಾತ್ರಿಯ ಮೂರು ದಿನಗಳ ಶಾರದೋತ್ಸವದ ಅಂಗವಾಗಿ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಹೊಳ್ಳರವರ ನೇತೃತ್ವದಲ್ಲಿ ಶಾರದಾಮಾತೆಯನ್ನು ಪೀಠಲಂಕೃತಳಾನ್ನಾಗಿಸಿ, 11ನೇ ವರ್ಷದ ಶಾರದ ಪೂಜೆಯನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪೂಜಾ ಕಾರ್ಯದಲ್ಲಿ ಗಜಾನನ ಹಿರಿಯ ಪ್ರಾಥಮಿಕ ಶಾಲೆ ಈಶ್ವರಮಂಗಲ ಇಲ್ಲಿನ ನಿವೃತ್ತ ಮುಖ್ಯೋಪಾಧ್ಯಾಯರಾದ ಗಣಪತಿ ಭಟ್ ಅರ್ತಿಕಜೆ ಉಪಸ್ಥಿತರಿದ್ದರು.

ಮುಂದಿನ ಅ.15ರಿಂದ ಅ.17ರವರೆಗೆ ಮೂರು ದಿನಗಳ ಸತತ ಪೂಜೆಗಳು ನಡೆಯಲಿದ್ದು, ಉಪನ್ಯಾಸಕ ವೃಂದ, ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ನಮೋದಯ ವಿದ್ಯಾರ್ಥಿಗಳು ಭಕ್ತವೃಂದವಾಗಿ ದೇವರ ಕೃಪೆಗೆ ಪಾತ್ರರಾಗಲಿದ್ದಾರೆ.